– ರಕ್ಷಣಾ ಕಾರ್ಯಕ್ಕೆ ಹೊರಟ ಬೆಂಗಳೂರು ತಂಡಕ್ಕೆ ಝೀರೋ ಟ್ರಾಫಿಕ್ ವ್ಯವಸ್ಥೆ: ಸಿಎಂ
ತಿರುವನಂತಪುರಂ: ವಯನಾಡಿನಲ್ಲಿ ನಡೆದ ಭೂಕುಸಿತ (Wayanad Landslides) ದುರಂತದಲ್ಲಿ ಈವರೆಗೆ 93 ಮಂದಿ ಸಾವನ್ನಪ್ಪಿದ್ದಾರೆ. ಇದೇ ಅಂತಿಮ ಅಂಕಿ-ಅಂಶವಲ್ಲ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ (Pinarayi vijayan) ಆತಂಕ ವ್ಯಕ್ತಪಡಿಸಿದ್ದಾರೆ.
Advertisement
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಯನಾಡಲ್ಲಿ ಪ್ರಕೃತಿ ಪ್ರಕೋಪ ಆಗಿದ್ದು, ನಸುಕಿನ ಜಾವ 2 ಗಂಟೆ ಸುಮಾರಿಗೆ ಮೊದಲ ಜಲ ಸ್ಫೋಟ ಸಂಭವಿಸಿತ್ತು. 4.10ಕ್ಕೆ ಎರಡನೇ ಸ್ಫೋಟ ಉಂಟಾಗಿತ್ತು. ಐವರು ಸಚಿವರು ಸತತವಾಗಿ ಕೆಲಸ ಮಾಡುತ್ತಿದ್ದಾರೆ. 18 ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. 34 ಮೃತದೇಹಗಳ ಗುರುತುಪತ್ತೆಯಾಗಿದ್ದೆ. 128 ಮಂದಿ ಗಾಯಗೊಂಡಿದ್ದಾರೆ. ದುರಂತದಲ್ಲಿ 93 ಮಂದಿ ಸಾವನ್ನಪ್ಪಿದ್ದಾರೆ. ಕೆಲವು ಗುರುತು ಪತ್ತೆಹಚ್ಚಲು ಸಾಧ್ಯವಾಗದ ಮೃತದೇಹಗಳಿವೆ ಎಂದು ಸಿಎಂ ಪಿಣರಾಯಿ ಅಧಿಕೃತ ಮಾಹಿತಿ ನೀಡಿದ್ದಾರೆ.
Advertisement
Advertisement
ಮದ್ರಸಾದಲ್ಲಿ ಕ್ಲಿನಿಕ್ ವ್ಯವಸ್ಥೆ:
ರಕ್ಷಣಾ ಕಾರ್ಯಾಚರಣೆಗೆ ಎರಡು ಹೆಲಿಕಾಪ್ಟರ್ ಸಿದ್ಧವಿದೆ. ಆದ್ರೆ ಪ್ರತಿಕೂಲ ಹವಾಮಾನದಿಂದಾಗಿ ಹಾರಾಟ ಸಾಧ್ಯವಾಗಿಲ್ಲ. ಇನ್ನೂ ಬೆಂಗಳೂರಿನಿಂದ ಬರುವ ತಂಡಕ್ಕೆ ಟ್ರಾಫಿಕ್ ಫ್ರೀ ವ್ಯವಸ್ಥೆ ಮಾಡಿದ್ದೇವೆ. ಅಲ್ಲದೇ ಸಂತ್ರಸ್ತರಿಗಾಗಿ 20,000 ಲೀಟರ್ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮದ್ರಸಾದಲ್ಲಿ ತಾತ್ಕಾಲಿಕ ಕ್ಲಿನಿಕ್ ವ್ಯವಸ್ಥೆ ಮಾಡಿದ್ದು, ವೈದ್ಯಕೀಯ ತಂಡವನ್ನು ನಿಯೋಜಿಸಿದ್ದೇವೆ. ಖಾಸಗಿ ಆಸ್ಪತ್ರೆ ವೈದ್ಯರು ಹಾಗೂ ಔಷಧಿಗಳ ವ್ಯವಸ್ಥೆಯನ್ನೂ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: Wayanad Landslides: ತಮಿಳುನಾಡಿನಿಂದ 5 ಕೋಟಿ ನೆರವು – ಅಗತ್ಯ ಸಹಕಾರ ನೀಡೋದಾಗಿ ಕರ್ನಾಟಕ ಸಿಎಂ ಭರವಸೆ
Advertisement
ಕೆಲವರು ಓಡಿಹೋಗಿದ್ದಾರೆ:
ಇಡೀ ಪ್ರದೇಶ ಕಣ್ಮರೆಯಾಯಿತು 93 ಮೃತದೇಹಗಳು ಪತ್ತೆಯಾಗಿವೆ. ಇದು ಅಂತಿಮ ಅಂಕಿ ಅಂಶವಲ್ಲ. ಮತ್ತು ಇದು ಇನ್ನು ಹೆಚ್ಚಿನದ್ದಕ್ಕೆ ಹೋಗಬಹುದು. ಸದ್ಯ ಗಾಯಗೊಂಡಿರುವ 128 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕ ಜನರು ಓಡಿಹೋದರು. ನಿಲಂಬೂರ್ ಬಳಿಯ ಚಾಲಿಯಾರ್‌ನಲ್ಲಿ ಸುಮಾರು 16 ಮೃತದೇಹಗಳು ಪತ್ತೆಯಾಗಿವೆ. ದೇಹದ ಭಾಗಗಳೂ ಪತ್ತೆಯಾಗಿವೆ. ಗಾಯಗೊಂಡು ಮುಂಡಕ್ಕಲ್ ಮಾರುಕಟ್ಟೆ ಪ್ರದೇಶದಲ್ಲಿ ಸಿಲುಕಿಕೊಂಡವರ ಪೈಕಿ ಎಲ್ಲರನ್ನೂ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಕಾರ್ಯಾಚರಣೆ ನಡೆಯುತ್ತಿದ್ದು, ಹಂತ ಹಂತವಾಗಿ ಮಾಹಿತಿ ನೀಡುವುದಾಗಿ ಕೇರಳ ಸಿಎಂ ಹೇಳಿದ್ದಾರೆ. ಇದನ್ನೂ ಓದಿ: Delhi Coaching Centre Flooded: ಯುಪಿಎಸ್‌ಸಿ ವಿದ್ಯಾರ್ಥಿಗಳ ಸಾವಿನ ತನಿಖೆಗೆ ಸಮಿತಿ ರಚಿಸಿದ ಗೃಹ ಇಲಾಖೆ