Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಂಘ ಪರಿವಾರದಿಂದಾಗಿ ಕರ್ನಾಟಕದಲ್ಲಿ ಪ್ರಗತಿಪರ ಚಳುವಳಿಗೆ ಹಿನ್ನಡೆ: ಕೇರಳ ಸಿಎಂ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chikkaballapur | ಸಂಘ ಪರಿವಾರದಿಂದಾಗಿ ಕರ್ನಾಟಕದಲ್ಲಿ ಪ್ರಗತಿಪರ ಚಳುವಳಿಗೆ ಹಿನ್ನಡೆ: ಕೇರಳ ಸಿಎಂ

Chikkaballapur

ಸಂಘ ಪರಿವಾರದಿಂದಾಗಿ ಕರ್ನಾಟಕದಲ್ಲಿ ಪ್ರಗತಿಪರ ಚಳುವಳಿಗೆ ಹಿನ್ನಡೆ: ಕೇರಳ ಸಿಎಂ

Public TV
Last updated: September 18, 2022 6:55 pm
Public TV
Share
3 Min Read
Pinarayi Vijayan
SHARE

– ಕೋಮುವಾದಿ ಶಕ್ತಿಗಳ ಬೆಳವಣಿಗೆ ಕರ್ನಾಟಕಕ್ಕೆ ಮಾರಕ
– ಗೌರಿ ಲಂಕೇಶ್ ಕೊಲೆ ಮಾಡಿದ್ದು ಸಂಘಪರಿವಾರ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಆರ್‌ಎಸ್‍ಎಸ್ (RSS), ಸಂಘಪರಿವಾರದ ಬೆಳವಣಿಗೆಯಿಂದಾಗಿ ಪ್ರಗತಿಪರ ಚಳುವಳಿಗೆ ಸಾಕಷ್ಟು ಹಿನ್ನಡೆ ತಂದಿದೆ. ಇಂತಹ ಕೋಮುವಾದಿ ಶಕ್ತಿಗಳ ಬೆಳವಣಿಗೆ ಕರ್ನಾಟಕಕ್ಕೆ ಮಾರಕ ಎಂದು ಕೇರಳ (Kerala) ಸಿಎಂ ಪಿಣರಾಯಿ ವಿಜಯನ್  (Pinarayi Vijayan) ಅಭಿಪ್ರಾಯ ಪಟ್ಟರು.

Contents
  • – ಕೋಮುವಾದಿ ಶಕ್ತಿಗಳ ಬೆಳವಣಿಗೆ ಕರ್ನಾಟಕಕ್ಕೆ ಮಾರಕ – ಗೌರಿ ಲಂಕೇಶ್ ಕೊಲೆ ಮಾಡಿದ್ದು ಸಂಘಪರಿವಾರ
  • Live Tv

ಜಿಲ್ಲೆಯ ಬಾಗೇಪಲ್ಲಿ (Bagepalli) ಪಟ್ಟಣದಲ್ಲಿ ಆಯೋಜನೆ ಮಾಡಿದ್ದ ಸಿಪಿಎಂ ಪಕ್ಷದ ಚುನಾವಣಾ ಪ್ರಚಾರಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ಚಾಲನೆ ನೀಡಿ, ಕನ್ನಡದಲ್ಲೇ ಭಾಷಣ ಪ್ರಾರಂಭಿಸಿದರು. ಕಳೆದ ವರ್ಷಗಳಲ್ಲಿ ಈ ಭೂಮಿ ಪ್ರಗತಿಪರ ಚಳವಳಿಗೆ ತವರು ಭೂಮಿಯಾಗಿತ್ತು. ಜಾತಿ ವ್ಯವಸ್ಥೆ ಅಸಮಾನತೆ, ದಲಿತರ ಶೋಷಣೆಗಳ ವಿರುದ್ಧ ಹೋರಾಡಿದ್ದ ಪ್ರಗತಿಪರ ಶಕ್ತಿಗಳು ಹೋರಾಡಿದ ಇತಿಹಾಸವಿದೆ. ಅಷ್ಟೇ ಅಲ್ಲದೇ ಕಪಟನಾಟಕಧಾರಿಗಳ ಮುಖ ಕಳಚುವಲ್ಲಿ ಪ್ರಗತಿಪರ ಚಳವಳಿಗೆ ಬಹಳಷ್ಟು ಶಕ್ತಿ ಕೊಟ್ಟಿದೆ. ಆದರೆ ಇಂದು ಆರ್‌ಎಸ್‍ಎಸ್‍ನಿಂದಾಗಿ ಈ ಎಲ್ಲಾ ಬೆಳವಣಿಗೆಗೆ ಹಿನ್ನಡೆ ಆಗಿದೆ ಎಂದು ಕಿಡಿಕಾರಿದರು.

bjP

ಕೋಮುವಾದಿಗಳ ಬೆಳವಣಿಗೆಯಿಂದಾಗಿ ಅಭಿವ್ಯಕ್ತಿ ಶಕ್ತಿಯನ್ನೇ ಕಿತ್ತುಕೊಂಡಿದ್ದಾರೆ. ಗೌರಿ ಲಂಕೇಶ್‍ರಂತಹ (Gauri Lankesh) ಸಾಹಿತಿಗಳನ್ನು ಕೊಲೆ ಮಾಡಿದ್ದು ಸಂಘಪರಿವಾರದವರು. ಕೆ.ಎಸ್. ಭಗವಾನ್ ಸಂಘವಾರದ ಕಿರುಕುಳಕ್ಕೆ ಒಳಪಟ್ಟಿದ್ದಾರೆ. ಪ್ರೊ. ಯು.ಆರ್. ಅನಂತಮೂರ್ತಿ ಸಂಘಪರಿವಾರದಿಂದ ನೋವನ್ನು ಅನುಭವಿಸಿದ್ದಾರೆ. ಇವರಿಗೆ ಪಾಕಿಸ್ತಾನಕ್ಕೆ ಟಿಕೆಟ್ ಕೊಟ್ಟು ಕಳುಹಿಸಿದ ಇತಿಹಾಸ ಮರೆಯುವ ಹಾಗಿಲ್ಲ ಎಂದು ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನೂ ಉತ್ತರ ಭಾರತದಲ್ಲಿ ಕೋಮು ಸಮುದಾಯಗಳು ಉಪಟಳ ಅತಿಯಾಗಿದೆ. ಪಠ್ಯಪುಸ್ತಕಗಳನ್ನು ಖಾವೀಕರಣ ಮಾಡುತ್ತಿದ್ದಾರೆ. ಆರನೇ ತರಗತಿಯಲ್ಲಿ ಆರ್‌ಎಸ್‍ಎಸ್‍ನ, ಸಂಘ ಪರಿವಾರದ ಸಂಸ್ಥಾಪಕ ಹೆಡಗೆವಾರ್ ವಿಷಯ ಸೇರ್ಪಡೆ ಮಾಡಿರುವುದು ಕುತಂತ್ರವಾಗಿದ್ದು, ಹತ್ತನೇ ತರಗತಿಯ ಪಠ್ಯಪುಸ್ತಗಳಲ್ಲಿ ಭಗತ್ ಸಿಂಗ್ ಕಥಾ ಭಾಗ ತೆಗೆದು ಹಾಕಿದ್ದಾರೆ. ಅಲ್ಪಸಂಖ್ಯಾರ ಮೇಲೆ ದೌರ್ಜನ್ಯಗಳು ಬಿಜೆಪಿಯವರ ಕರಾಳ ಮುಖ ತೋರಿಸುತ್ತಿದೆ. ಹಿಜಬ್ ಹೆಸರಿನಲ್ಲಿ ಗಲಾಟೆ ಹುನ್ನಾರ ಇದರ ಭಾಗವಾಗಿದೆ. ಕೋಮುವಾದ ಇದಕ್ಕೆಲ್ಲ ಕಾರಣ, ಭಾರತದ ಅಲ್ಪಸಂಖ್ಯಾತರ ಮೇಲೆ ಅಧಿಕಾರ ದುರ್ಬಳಕೆ ಆಗುತ್ತಿದೆ ಎಂದು ಟೀಕಿಸಿದರು.

rss

ಲವ್ ಜಿಹಾದ್‌ ಅಪವಾದ ಪ್ರಚಾರಗಳು ಸಂಘಪರಿವಾರದ ಪ್ರಮುಖ ಭಾಗಗಳಾಗಿವೆ. ಕೋಮುವಾದ ವಿರುದ್ಧ ಹೋರಾಟ ಮಾಡದೇ ಹೋದಲ್ಲಿ ಅಪಾಯ ತಪ್ಪಿದ್ದಲ್ಲ. ಸಂಘಪರಿವಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಧ್ವಂಸಗೊಳಿಸುತ್ತಿದೆ. ಸಂಕುಚಿತ ರಾಷ್ಟ್ರವಾದ ಪಾಲನೆ ಮಾಡುತ್ತಿದೆ. ರಾಷ್ಟ್ರಪ್ರೇಮ ಅಂದರೆ ಹಿಂದುತ್ವ ಪ್ರೇಮ ಎಂಬ ಕಲ್ಪನೆ ಮೂಡಿಸುತ್ತಿದ್ದಾರೆ. ರಾಷ್ಟ್ರೀಯತೆ ಕೆಲವು ವ್ಯಕ್ತಿಗಳ ಬಂಡವಾಳ ಮಾಡಿಕೊಂಡಿದ್ದಾರೆ. ನಾವು ಗುಲಾಮರಂತೆ ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರದು ಕೊಟ್ಟಿರೊರೆಲ್ಲ ದೇಶ ಪ್ರೇಮಿಗಳು ಎಂದು ಬಿಂಬಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಸಾರೆ ಜಹಾಂಸೆ ಅಚ್ಚಾ ಎಂಬ ಕವನವನ್ನು ಪ್ರೊ. ಇಕ್ಬಾಲ್ ರಚಿಸಿದ್ದಾರೆ. ಈ ಕವನವು ರಾಷ್ಟ್ರಪ್ರೇಮದ ಘೋಷಣೆ ಅಲ್ಲ ಎಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಸ್ವಾತಂತ್ರ್ಯ ಹೋರಾಟದ ಮೊದಲಲ್ಲಿ ಕೊನೆಯಲ್ಲಿ ಸಂಘ ಪರಿವಾರದವರು ಇರಲಿಲ್ಲ. ಆದಿವಾಸಿಗಳು ಮಹಿಳೆಯರು, ದಲಿತ ಹೋರಾಟಗಾರರು, ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಯುಕ್ತಿವಾದಿಗಳು ಕೊಲ್ಲಲ್ಪಡುತಿದ್ದಾರೆ. ಇವರೆಲ್ಲ ದೇಶದ್ರೋಹಗಳೆಂದು ಬಿಂಬಿಸುತ್ತಿದ್ದಾರೆ. ಕೋಮುವಾದ ಮುಂದೆ ಇಟ್ಟುಕೊಂಡು ಕಾರ್ಪೊರೇಟರ್‌ಗಳನ್ನು ಬೆಳೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಕೆಂಪು ಬಾವುಟ ಹಾರಿಸಲಿದ್ದಾರೆ ಕೇರಳ ಸಿಎಂ

ನಮ್ಮ ರಾಷ್ಟ್ರದಲ್ಲಿ ಅಸಮಾನತೆ ಅತಿ ವೇಗವಾಗಿ ಬೆಳೆಯುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಹತ್ತು ಲಕ್ಷ ಹುದ್ದೆಗಳು ಖಾಲಿ ಇವೆ. ರೈಲ್ವೆನಲ್ಲಿ ಮೂರು ಲಕ್ಷ ಹುದ್ದೆಗಳು ಖಾಲಿ ಇವೆ. ಪ್ರಸ್ತುತ ನಿರುದ್ಯೋಗ ಭಾರದಲ್ಲಿ ತಾಂಡವವಾಡುತ್ತಿದೆ. ಖಾಸಗೀಕರಣ ಕರಾರು ವ್ಯವಸ್ಥೆ ರಾಷ್ಟ್ರ್ರದಲ್ಲಿ ಮನೆ ಮಾಡಿದೆ. ಜೂನ್, ಜುಲೈನಲ್ಲಿ 80 ಲಕ್ಷ ಹುದ್ದೆಗಳು ಕಡಿತಗೊಂಡಿವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಜೆಪಿಗೆ ಬೇರೆ ಪಕ್ಷಗಳಿಂದ ಕದಿಯೋ ರುಚಿ ಹಿಡಿದಿದೆ: ವೀರಪ್ಪ ಮೊಯ್ಲಿ ಲೇವಡಿ

Live Tv
[brid partner=56869869 player=32851 video=960834 autoplay=true]

TAGGED:bjpPinarayi Vijayanrssಆರ್‍ಎಸ್‍ಎಸ್ಪಿಣರಾಯಿ ವಿಜಯನ್ಬಿಜೆಪಿ
Share This Article
Facebook Whatsapp Whatsapp Telegram

Cinema news

trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema
Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories

You Might Also Like

Donald Trump Strait Of Hormuz
Latest

ಹಾರ್ಮುಜ್‌ ಜಲಸಂಧಿಯಲ್ಲಿ ಟೋಲ್‌ – ಇರಾನ್‌ನೊಂದಿಗೆ ಜಂಟಿ ಉದ್ಯಮ ಬಯಸಿದ ಟ್ರಂಪ್‌

Public TV
By Public TV
3 hours ago
Gujarat Titans 1
Cricket

ಗೆಲ್ಲುವ ಪಂದ್ಯ ಕೈಚೆಲ್ಲಿದ ಡೆಲ್ಲಿ – ಗುಜರಾತ್‌ಗೆ 1 ರನ್‌ ರೋಚಕ ಜಯ 

Public TV
By Public TV
3 hours ago
krs party worker arrest
Latest

ಗೃಹಸಚಿವರನ್ನು ಪ್ರಶ್ನೆ ಮಾಡಿದ ಕೆಆರ್‌ಎಸ್ ಪಕ್ಷದ ‌ಮುಖಂಡ ಬಂಧನ

Public TV
By Public TV
4 hours ago
Bhutnal Lake
Bengaluru City

ಪ್ರವಾಸಕ್ಕೆ ಹೋಗಿದ್ದ ಬೆಂಗ್ಳೂರಿನ ಮೂವರು ಕೆರೆಯಲ್ಲಿ ಮುಳುಗಿ ಸಾವು

Public TV
By Public TV
4 hours ago
Strait of Hormuz Ships
Latest

ಒಂದು ಬ್ಯಾರಲ್‌ ತೈಲಕ್ಕೆ 1 ಡಾಲರ್‌ ತೆರಿಗೆ – ಕ್ರಿಪ್ಟೋ ಕರೆನ್ಸಿಯಲ್ಲಿ ಟ್ಯಾಕ್ಸ್‌ ಪಾವತಿಗೆ ಇರಾನ್‌ ಡಿಮ್ಯಾಂಡ್‌

Public TV
By Public TV
6 hours ago
Sanjay Malhotra
Latest

ರೆಪೋ ದರ ಯಥಾಸ್ಥಿತಿ ಮುಂದುವರಿಸಲು RBI ನಿರ್ಧಾರ

Public TV
By Public TV
6 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?