ಪುಣೆ: ಟ್ರಾಫಿಕ್ (Traffic) ಕ್ಲಿಯರ್ ಮಾಡುತ್ತಿದ್ದ ಟ್ರಾಫಿಕ್ ಪೊಲೀಸ್ (Traffic Police) ಒಬ್ಬರಿಗೆ ಯುವಕನೋರ್ವ ಬಿಯರ್ ಬಾಟಲ್‍ನಲ್ಲಿ (Beer Bottle) ಹೊಡೆದು ಹಲ್ಲೆ ನಡೆಸಿರುವ ಘಟನೆ ಪಿಂಪ್ರಿ-ಚಿಂಚ್‍ವಾಡ್‍ನ ಕಾಲೆವಾಡಿ ಪ್ರದೇಶದಲ್ಲಿ ನಡೆದಿದೆ.
ಟ್ರಾಫಿಕ್ ಪೊಲೀಸ್ ರಮೇಶ್ ಜಾಧವ್ (52) ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಟ್ರಾಫಿಕ್ ಕ್ಲಿಯರ್ ಆಗಿಲ್ಲ ಎಂದು ಸಿಟ್ಟಿಗೆದ್ದ ವೈಭವ್ ಗಾಯಕ್ವಾಡ್ (19) ಎಂಬಾತ ಬಿಯರ್ ಬಾಟಲ್‍ನಿಂದ ರಮೇಶ್ ಜಾಧವ್ ತಲೆಗೆ ಹಲ್ಲೆ ನಡೆಸಿದ್ದಾನೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಜಾಧವ್, ರಹತ್ನಿ ಚೌಕ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸ್ಥಳದಲ್ಲಿ ಹೆಚ್ಚಿನ ವಾಹನ ದಟ್ಟಣೆ ಇತ್ತು. ಇದನ್ನು ನಿಯಂತ್ರಿಸಲು ಜಾಧವ್ ಚಿಂಚ್‍ವಾಡ್‍ನಿಂದ ಬರುವ ವಾಹನಗಳಿಗೆ ತೆರಳಲು ಅವಕಾಶ ಮಾಡಿಕೊಟ್ಟು ತಪ್‍ಕೀರ್ ಚೌಕ್‍ನಿಂದ ಎಂಎಂ ಚೌಕ್‍ಗೆ ಬರುತ್ತಿದ್ದ ಸಂಚಾರವನ್ನು ನಿಲ್ಲಿಸಿದರು. ಈ ವೇಳೆ ಗಾಯಕ್ವಾಡ್ ಈ ಬಗ್ಗೆ ಪ್ರಶ್ನಿಸಿ ಬೈದಿದ್ದಾನೆ. ಬಳಿಕ ತನ್ನ ಬಳಿ ಇದ್ದ ಬಿಯರ್ ಬಾಟಲ್‍ನಿಂದ ಜಾಧವ್ ತಲೆಗೆ ಹೊಡೆದಿದ್ದಾನೆ.
ಬಳಿಕ ರಕ್ತಸ್ರಾವದಿಂದ ಕೆಳಕ್ಕೆ ಬಿದ್ದ ಜಾಧವ್ ಬಳಿ ಯಾರು ಕೂಡ ಬರಬಾರದು ಎಂದು ಸ್ಥಳದಲ್ಲಿದ್ದವರಿಗೆ ಗಾಯಕ್ವಾಡ್ ಬೆದರಿಕೆ ಹಾಕಿದ್ದು ಕೊನೆಗೆ ಸ್ಥಳಕ್ಕೆ ಬಂದು ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕೊಡಲೇ ಜಾಧವ್‍ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]