ಚಿತ್ರದುರ್ಗ: ಆಕೆ ಹೆತ್ತವರನ್ನ ಕಳೆದುಕೊಂಡು ತಬ್ಬಲಿಯಾಗಿದ್ಲು. ವಯಸ್ಸಿಗೆ ಬರೋ ಮುಂಚೆನೇ ಆಕೆಗೆ ಸಂಬಂಧಿಕರೆಲ್ಲಾ ಸೇರಿ ತನಗಿಂತ ಹಿರಿಯ ವಯಸ್ಸಿನ ವ್ಯಕ್ತಿಯೊಂದಿಗೆ ಮದುವೆ ಮಾಡಿಬಿಟ್ರು. ತನ್ನ ಗಂಡ ವೇಶ್ಯಾವಾಟಿಕೆ ನಡೆಸೋ ಪಿಂಪ್ ಅಂತ ಗೊತ್ತಾದಾಗ ಆಕೆ ಆಘಾತಕ್ಕೆ ಒಳಗಾದ್ಲು.
Advertisement
ಚಿತ್ರದುರ್ಗದ ಮುದ್ದಾಪುರ ಗ್ರಾಮದ ನಿವಾಸಿಯಾದ ತಿಪ್ಪೇಸ್ವಾಮಿ ಪತ್ನಿಯನ್ನ ಆರಂಭದಲ್ಲಿ ಚೆನ್ನಾಗಿಯೇ ನೋಡಿಕೊಂಡಿದ್ದ. ಕೊನೆಗೆ ತಾನೊಬ್ಬ ವೇಶ್ಯಾವಾಟಿಕೆ ಪಿಂಪ್ ಅನ್ನೋದು ಪತ್ನಿಗೆ ತಿಳಿಯುತ್ತಿದ್ದಂತೆ ಕಿರಿಕ್ ಶುರು ಮಾಡ್ದ. ಹಂತ ಹಂತವಾಗಿ ತನ್ನ ಪತ್ನಿಯನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಲು ಮುಂದಾದ.
Advertisement
Advertisement
ನೊಂದ ಮಹಿಳೆ ವೇಶ್ಯಾವಾಟಿಕೆ ದಂಧೆಯ ಬಗ್ಗೆ ತನ್ನ ಗಂಡ, ಹಲವಾರು ಮಹಿಳೆಯರು ಹಾಗೂ ಗ್ರಾಹಕರ ಜೊತೆ ಮೊಬೈಲ್ ಸಂಭಾಷಣೆ ನಡೆಸಿದ್ದನ್ನ ಪಬ್ಲಿಕ್ ಟಿವಿಗೆ ನೀಡಿದ್ದಾರೆ. ಅಲ್ದೇ ದಂಧೆಯಲ್ಲಿ ವೈದ್ಯರು ಹಾಗೂ ವಿಧ್ಯಾರ್ಥಿನಿಯರು ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
Advertisement
ಈ ಅಮಾಯಕ ಮಹಿಳೆಯ ಅಸಹಾಯಕತೆ ಕಂಡು ಮಾನವೀಯತೆ ತೋರಿರುವ ಆಕೆಯ ಹತ್ತಿರದ ಸಂಬಂಧಿ ಯುವಕ ಆಶ್ರಯ ನೀಡಿದ್ದಾರೆ. ಪೊಲೀಸರೂ ಕೂಡ ದೂರು ಪಡೆಯಲು ನಿರಾಕರಿಸಿದ್ದಾರೆ. ಈಗ ಕೋರ್ಟ್ ಮೊರೆ ಹೋಗಿರೋ ಮಹಿಳೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.