ವಾಷಿಂಗ್ಟನ್: ಅಮೆರಿಕದ ಟುಪೆಲೋ ವಿಮಾನ ನಿಲ್ದಾಣದಿಂದ ಪೈಲಟ್ ಒಬ್ಬ ಏರೋಪ್ಲೇನ್ ಕದ್ದು ಅದರಿಂದ ಅಮೆರಿಕದ ವಾಲ್‌ಮಾರ್ಟ್ಗೆ ಅಪ್ಪಳಿಸುವುದಾಗಿ ಬೆದರಿಕೆ ಹಾಕಿದ್ದಾನೆ.
ಟುಪೆಲೋ ವಿಮಾನ ನಿಲ್ದಾಣದಿಂದ ಬೀಚ್‌ಕ್ರಾಫ್ಟ್ ಕಿಂಗ್ ಏರ್-90 ಸಣ್ಣ ಏರೋಪ್ಲೇನ್ ಅನ್ನು ಕದ್ದೊಯ್ದಿದ್ದು, ಉದ್ದೇಶ ಪೂರ್ವಕವಾಗಿ ಮಿಸ್ಸಿಸ್ಸಿಪ್ಪಿಯ ವಾಲ್‌ಮಾರ್ಟ್ಗೆ ಅಪ್ಪಳಿಸುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಸಹ ಕೆಟ್ಟ ಸಂಬಂಧ ಹೊಂದಿದ್ದೆ ಎಂದ ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ
Advertisement
Currently we have a 29yr old who stole this plane & is threatening to crash it into something. Polices ,ambulances ,& fire trucks are everywhere. Everything is shutdown rn pic.twitter.com/AzebdIa3tP
— K.I.N.G (@CityKing_Gank_) September 3, 2022
Advertisement
ಬೆದರಿಕೆ ಬಂದ ಬೆನ್ನಲ್ಲೇ ವಾಲ್‌ಮಾರ್ಟ್ ಹಾಗೂ ಸುತ್ತಮುತ್ತಲಿನ ಪ್ರದೇಶದ ಅಂಗಡಿ ಮುಂಗಟ್ಟುಗಳನ್ನು ಸ್ಥಳಾಂತರಿಸಲಾಗಿದೆ. ಪೈಲಟ್‌ನೊಂದಿಗೆ ನೇರವಾಗಿ ಮಾತುಕತೆ ನಡೆಸಲು ಪ್ರಯತ್ನಿಸಲಾಗುತ್ತಿದೆ. ಇದರೊಂದಿಗೆ ಭದ್ರತೆಯ ದೃಷ್ಟಿಯಿಂದ ವಾಲ್‌ಮಾರ್ಟ್ ಪ್ರದೇಶದ ವ್ಯಾಪ್ತಿಯ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ.
Advertisement
ವಿಮಾನದ ಅಪಾಯ ವಲಯವು ಹೆಚ್ಚಿನದ್ದಾಗಿರುವುದರಿಂದ ರಾಜ್ಯ ಕಾನೂನು ಜಾರಿ ಮತ್ತು ತುರ್ತು ನಿರ್ವಾಹಕರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಗರದ ಸುತ್ತಲೂ ಪೊಲೀಸ್, ಅಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳನ್ನು ನಿಯೋಜನೆಗೊಳಿಸಲಾಗಿದೆ. ಎಲ್ಲಾ ತುರ್ತು ಸೇವೆಗಳೂ ಫುಲ್ ಅಲರ್ಟ್ ಆಗಿವೆ. ಇದನ್ನೂ ಓದಿ: ತ್ಯಾಜ್ಯ ವಿಲೇವಾರಿಯಲ್ಲಿ ಎಡವಟ್ಟು – ಮಮತಾ ಸರ್ಕಾರಕ್ಕೆ 3,500 ಕೋಟಿ ದಂಡ
Advertisement
ವರದಿಯ ಪ್ರಕಾರ, ಏರೋಪ್ಲೇನ್ ಬೆಳಿಗ್ಗೆ 5 ಗಂಟೆಯಿಂದಲೇ ಸುತ್ತಲು ಪ್ರಾರಂಭಿಸಿದೆ. ಇದೇ ವೇಳೆ ಪೈಲಟ್ 911ಗೆ ಕರೆ ಮಾಡಿ ಉದ್ದೇಶಪೂರ್ವಕವಾಗಿ ವೆಸ್ಟ್ಮೇನ್ ನಲ್ಲಿರುವ ವಾಲ್-ಮಾರ್ಟ್ಗೆ ಅಪ್ಪಳಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.