ವಾಷಿಂಗ್ಟನ್: 271 ಪ್ರಯಾಣಿಕರೊಂದಿಗೆ ಮಿಯಾಮಿಯಿಂದ (Miami) ಚಿಲಿಗೆ ತೆರಳುತ್ತಿದ್ದ ವಿಮಾನದಲ್ಲಿ (Flight) ಪೈಲಟ್ (Pilot) ಬಾತ್‌ರೂಂನಲ್ಲಿ ಹೃದಯಾಘಾತದಿಂದ (Heart Attack) ಕುಸಿದು ಬಿದ್ದು, ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. ಘಟನೆ ಬಳಿ ತಕ್ಷಣ ಸಹ ಪೈಲಟ್ ವಿಮಾನವನ್ನು ಪನಾಮದಲ್ಲಿ (Panama) ತುರ್ತು ಭೂಸ್ಪರ್ಶ ಮಾಡಿದ್ದಾರೆ.
ವರದಿಗಳ ಪ್ರಕಾರ ಸ್ಯಾಂಟಿಯಾಗೊಗೆ ಹೊರಟಿದ್ದ ಎಲ್‌ಎಟಿಎಎಮ್ ವಿಮಾನದ ಕಮಾಂಡರ್ ಇವಾನ್ ಆಂಡೌರ್ (56) ಬಾತ್‌ರೂಂಗೆ ತೆರಳಿದ್ದಾಗ ತೀವ್ರ ಹೃದಯ ಸ್ತಂಭನವಾಗಿತ್ತು. ತಕ್ಷಣ ವಿಮಾನದ ಸಹ ಪೈಲಟ್‌ಗಳು ಪನಾಮ ನಗರದ ಟೊಕುಮೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ.
ತಕ್ಷಣ ಪೈಲಟ್‌ಗೆ ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆ ಮಾಡಲಾಯಿತು. ದುರದೃಷ್ಟವಶಾತ್ ಅಷ್ಟರಲ್ಲಾಗಲೇ ಪೈಲಟ್ ಸಾವನ್ನಪ್ಪಿದ್ದರು. ಇತ್ತ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಪನಾಮ ಸಿಟಿಯ ಹೋಟೆಲ್‌ಗಳಲ್ಲಿ ವಸತಿ ಕಲ್ಪಿಸಿ ಬಳಿಕ ಮಂಗಳವಾರ ವಿಮಾನ ಕಾರ್ಯಾಚರಣೆಯನ್ನು ಪುನರಾರಂಭಗೊಳಿಸಲಾಯಿತು. ಇದನ್ನೂ ಓದಿ: ಚಂದ್ರಯಾನ-3: ಇಂದು ಮಧ್ಯಾಹ್ನ 1 ಗಂಟೆಗೆ ಮಹತ್ವದ ಬೆಳವಣಿಗೆ
ದುರದೃಷ್ಟಕರ ಘಟನೆಯ ಬಗ್ಗೆ ಎಲ್‌ಎಟಿಎಎಮ್ ಗ್ರೂಪ್ ತೀವ್ರ ದುಃಖ ವ್ಯಕ್ತಪಡಿಸಿದೆ. ಅಗಲಿದ ಪೈಲಟ್‌ನ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದೆ. ಇದನ್ನೂ ಓದಿ: ಸೇನೆಗೆ ಪ್ರಬಲ ಶಸ್ತ್ರಾಸ್ತ್ರಗಳ ಬಲ ನೀಡಿದ್ದ DRDO ಮಾಜಿ ಮುಖ್ಯಸ್ಥ ನಿಧನ
Web Stories