ವಾಷಿಂಗ್ಟನ್: ಮಕ್ಕಳಿಗೆ ಆಸೆ ಹೆಚ್ಚು, ಅವುಗಳನ್ನು ನೆರೆವೇರಿಸುವವರು ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟು ಖಷಿಯಾಗುತ್ತಾರೆ. ಇಲ್ಲೊಂದು 2 ವರ್ಷದ ಮಗು, ಮೊದಲ ವಿಮಾನ ಪ್ರಯಾಣ ಮಾಡುತ್ತಿದೆ. ಈ ವೇಳೆ ಫ್ಲೈಟ್ ಚಾಲನೆ ಮಾಡುವ ಸ್ಥಳದಲ್ಲಿ ಕುಳಿತು ಖುಷಿಪಟ್ಟಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಮೊದಲ ಬಾರಿಗೆ (cockpit) ಕಾಕ್ಪಿಟ್ಗೆ(ವಿಮಾನ ಚಾಲನೆ ಮಾಡುವ ಸ್ಥಳ) ಪ್ರವೇಶಿಸಿದ ಮಗು ಅಲ್ಲಿಯ ಉಪಕರಣಗಳನ್ನು ನೋಡಿ ವಾವ್ ಎಂದು ಹೇಳುತ್ತಾ ಖುಷಿ ಪಟ್ಟಿದೆ. ಭವಿಷ್ಯದ ಪೈಲಟ್ ಆಗುವಂತೆ ಕಾಣುತ್ತಿದ್ದಾನೆ ಎಂದು ಕ್ಯಾಪ್ಷನ್ ನೀಡುವ ಮೂಲಕ ಗುಡ್ ನ್ಯೂಸ್ ಮೂವ್ಮೆಂಟ್ ವೀಡಿಯೋ ಹಂಚಿಕೊಂಡಿದೆ. ಸದ್ಯ ನೆಟ್ಟಿಗರು ಮಗುವಿನ ಆಸಕ್ತಿ ನಿಜಕ್ಕೂ ಮೆಚ್ಚುವಂತದ್ದು ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಪ್ರಕ್ಷುಬ್ಧಗೊಂಡ ಶಿವಮೊಗ್ಗದಲ್ಲಿ 2 ದಿನ ಕರ್ಫ್ಯೂ – ನಾಳೆ ಬೆಳಗ್ಗೆವರೆಗೂ ನಿಷೇಧಾಜ್ಞೆ, ಖಾಕಿ ಭದ್ರತೆ
Advertisement
View this post on Instagram
Advertisement
ವೀಡಿಯೋದಲ್ಲಿ ಏನಿದೆ?: ಮೊದಲು ಮಗು ಕಾಕ್ಪಿಟ್ನೊಳಗೆ ಪ್ರವೇಶಿಸುತ್ತದೆ. ಅಲ್ಲಿದ್ದ ಪೈಲೆಟ್ ಮಗುವನ್ನು ಎತ್ತು ಸೀಟ್ ಮೇಲೆ ಕೂರಿಸುತ್ತಾರೆ. ಅಲ್ಲಿರುವ ಉಪಕರಣಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎನ್ನುವುದನ್ನು ವಿವರಿಸುತ್ತಾರೆ. ಅದನ್ನು ಕೇಳಿ ಮಗು ಅಚ್ಚರಿಯಿಂದ ಕಣ್ಣರಳಿಸಿದೆ. ಈ ವೀಡಿಯೋ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.