ಗಾಂಧಿನಗರ: ಭಾರತೀಯ ವಾಯುಪಡೆಯ (ಐಎಎಫ್) ಯುದ್ಧ ವಿಮಾನವೊಂದು ಪತನಗೊಂಡ ಪರಿಣಾಮ ಪೈಲಟ್ ಸೇರಿದಂತೆ ಅನೇಕ ದನಕರುಗಳು ಮೃತಪಟ್ಟ ಘಟನೆ ಗುಜರಾತ್‍ನ ಕಛ್ ಸಮೀಪದಲ್ಲಿ ಮಂಗಳವಾರ ನಡೆದಿದೆ.
#Gujarat: An aircraft has crashed in Kutch's Mundra, pilot missing. More details awaited. pic.twitter.com/2Q1SPxvMF0
— ANI (@ANI) June 5, 2018
Advertisement
ವಾಯುಪಡೆ ಕಮಾಂಡರ್ ಸಂಜಯ್ ಚೌಹಾನ್ ಮೃತಪಟ್ಟಿದ್ದಾರೆ. ಜಾಗ್ವಾರ್ ಪತನಗೊಂಡ ಯುದ್ಧ ವಿಮಾನವಾಗಿದ್ದು, ವೈಮಾನಿಕ ಪರೀಕ್ಷೆಗಾಗಿ ಜಾಮ್‍ನಗರನಿಂದ ಹಾರಾಟ ನಡೆಸಿತ್ತು. ಕಛ್ ಸಮೀಪದ ಗ್ರಾಮವೊಂದರ ಗೋಮಾಳದಲ್ಲಿ ವಿಮಾನ ಪತನಗೊಂಡ ಪರಿಣಾಮ ಪೈಲಟ್ ಸೇರಿದಂತೆ ಅನೇಕ ದನಕರುಗಳು ಮೃತಪಟ್ಟಿವೆ.
Advertisement
Advertisement
ಎಂದಿನಂತೆ ಇಂದು ಬೆಳಿಗ್ಗೆ 10:30 ಗಂಟೆಗೆ ವೈಮಾನಿಕ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು, ವಿಮಾನ ಪತನದ ಕುರಿತು ತನಿಖೆ ನಡೆಸುವಂತೆ ವಾಯುಪಡೆ ಆದೇಶಿಸಿದೆ. ಜಾಗ್ವಾರ್ ಯುದ್ಧ ವಿಮಾನವು ಎರಡು ಎಂಜಿನ್ ಹೊಂದಿದ್ದು, ಶತ್ರುಪಡೆಗಳ ಮೇಲೆ ಬಾಂಬ್ ದಾಳಿ ನಡೆಸಲು ಬಳಕೆ ಮಾಡಲಾಗುತಿತ್ತು.
Advertisement
ಪ್ರತಿ ಗಂಟೆಗೆ 1,350 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದ ಜಾಗ್ವಾರ್ 1979ರಲ್ಲಿಯೇ ವಾಯುಪಡೆ ಸೇರಿತ್ತು.
#Gujarat: Wreckage of IAF's Jaguar fighter jet that crashed in Kutch's Mundra, the aircraft was on a routine training mission from Jamnagar. The Pilot, Air Cmde Sanjay Chauhan, lost his life in the crash. Court of Inquiry ordered to investigate cause of accident. pic.twitter.com/bGBiE2L53k
— ANI (@ANI) June 5, 2018