ಬೆಂಗಳೂರು: ತಾಂತ್ರಿಕ ದೋಷದಿಂದ ವಾಯುಪಡೆಯ ಮಿರಾಜ್-2000 ನಂಬರ್‍ನ ಯುದ್ಧ ವಿಮಾನ ಬೆಂಗಳೂರಿನ ಎಚ್‍ಎಎಲ್‍ನ ಯಮಲೂರು ಬಳಿ ಪತನಗೊಂಡು ಇಬ್ಬರು ಪೈಲಟ್‍ಗಳು ಶುಕ್ರವಾರ ಸಾವನ್ನಪ್ಪಿದ್ದರು. ಆದರೆ ಪೈಲಟ್ ಗಳು ತಮ್ಮ ಜೀವತೆತ್ತು ಸಂಭವಿಸಬಹುದಾದ ಭಾರೀ ಅವಘಡವನ್ನು ತಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಪ್ರಾಯೋಗಿಕ ಹಾರಾಟ ವೇಳೆ ಈ ಅವಘಡ ಸಂಭವಿಸಿದ್ದು, ರನ್‍ವೇಯಲ್ಲಿ ಹಾರಾಟ ನಡೆಸಿದ್ದ ವಿಮಾನ ಟೇಕಾಫ್ ಆಗಿದ್ದರೆ ವಸತಿ ಹೆಚ್ಚಾಗಿರುವ ಪ್ರದೇಶದಲ್ಲಿ ಬೀಳುವ ಸಾಧ್ಯತೆ ಇತ್ತು. ಆದರೆ ಇದನ್ನು ಮನಗಂಡ ಫೈಲಟ್‍ಗಳು ವಿಮಾನ ಎತ್ತರಕ್ಕೆ ಟೇಕಾಫ್ ಮಾಡದಿರಲು ನಿರ್ಧರಿಸಿ ಹೊರ ಬರಲು ಪ್ರಯತ್ನಿಸಿದ್ದರು.
As @IAF_MCC bids farewell to Squadron Leader Siddhartha Negi in Bengaluru. We lost the life of Siddharth when Mirage crashed yesterday which was upgraded by #HAL. Now will #HAL take the responsibility. @nsitharaman @RajeevPatrakar pic.twitter.com/jYA2Oz0JMh
— Manish Kumar (@iammanish1212) February 2, 2019
ಅಂತಿಮ ಕ್ಷಣದಲ್ಲಿ ತಮ್ಮ ಪ್ರಾಣ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದ ಪೈಲಟ್ ಗಳು ಪ್ಯಾರಚೂಟ್ ಬಳಸಿ ಹಾರಲು ಯತ್ನಿಸಿದ್ದರು. ಆದರೆ ಆ ವೇಳೆಗೆ ವಿಮಾನ ಸ್ಫೋಟಗೊಂಡಿತ್ತು. ಪರಿಣಾಮ ಸಿದ್ದಾರ್ಥ್ ನೇಗಿ (31), ಸಮೀರ್ ಅಬ್ರೋಲ್(33) ಜೀವ ಕಳೆದುಕೊಂಡಿದ್ದಾರೆ. ಸಮೀರ್ ಬೆಂಕಿ ಹೊತ್ತಿಕೊಂಡಿದ್ದ ಪ್ಯಾರಚೂಟ್ ಮೇಲೆಯೇ ಬಿದ್ದ ಪರಿಣಾಮ ಸುಟ್ಟು ಕರಕಲಾದರೆ, ತೀವ್ರ ಗಾಯಗೊಂಡಿದ್ದ ನೇಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದರು.
ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದು, ಒಂದೊಮ್ಮೆ ವಿಮಾನ ಜನ ವಸತಿ ಪ್ರದೇಶದಲ್ಲಿ ಪತನವಾಗಿದ್ದರೆ ಭಾರೀ ಅವಘಡ ಸಂಭವಿಸುತ್ತಿತ್ತು ಎಂದು ತಿಳಿಸಿದ್ದಾರೆ. ಅಲ್ಲದೇ ಈ ಕುರಿತು ಮಾಹಿತಿ ನೀಡಿರುವ ಎಚ್‍ಎಎಲ್ ಅಧಿಕಾರಿಯೊಬ್ಬರು ರನ್‍ವೇಯಲ್ಲಿಯೇ ವಿಮಾನದ ಟೈರ್ ಕಳಚಿ ಬಿದ್ದ ಪರಿಣಾಮ ಮುಂಭಾಗ ರನ್ ವೇಗೆ ಉಜ್ಜಿ ಬೆಂಕಿ ಕಿಡಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡಿತ್ತು ಎಂದು ವಿವರಿಸಿದ್ದಾರೆ.
ವಿಮಾನ ಸ್ಫೋಟಗೊಂಡ ಅಲ್ಪ ದೂರದಲ್ಲೇ ಜನ ವಸತಿ ಪ್ರದೇಶಗಳಿದ್ದು, ಶಾಲೆ, ಟೆಕ್ ಪಾರ್ಕ್, ರಸ್ತೆ ಸೇರಿದಂತೆ ಹಲವು ಪ್ರದೇಶಗಳಿದೆ. ಒಂದೊಮ್ಮೆ ಪೈಟಲ್‍ಗಳು ವಿಮಾನವನ್ನು ರನ್ ವೇಯಿಂದ ಟೇಕಾಫ್ ಆಗಿದ್ದರೆ ವಸತಿ ಪ್ರದೇಶದಲ್ಲಿ ಉರುಳುವ ಸಾಧ್ಯತೆ ಇತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv