ಮಹಿಳಾ ಪೈಲಟ್, ಪತಿಗೆ ಹಿಗ್ಗಾಮುಗ್ಗ ಥಳಿಸಿದ ಗುಂಪು- ವೀಡಿಯೋ ವೈರಲ್

Public TV
2 Min Read
PILOT THRASH BY MOB

ನವದೆಹಲಿ: ಮಹಿಳಾ ಪೈಲಟ್ (Woman Pilot), ಆಕೆಯ ಪತಿ ಹಾಗೂ ಏರ್ ಲೈನ್ಸ್ (Airlines) ಸಿಬ್ಬಂದಿಗೆ ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸಿದ ಘಟನೆ ದೆಹಲಿಯ ದ್ವಾರಕಾದಲ್ಲಿ (Dwaraka) ನಡೆದಿದೆ.

10 ವರ್ಷದ ಬಾಲಕಿಯನ್ನು ಮನೆಗೆಲಸಕ್ಕೆಂದು ಇಟ್ಟುಕೊಂಡು ಆಕೆಗೆ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಗುಂಪು ಹಲ್ಲೆಗೈದಿದೆ. ದಂಪತಿಗೆ ಹಲ್ಲೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Video Viral) ಆಗುತ್ತಿದೆ.

ವೀಡಿಯೋದಲ್ಲಿ ಮಹಿಳೆಯೊಬ್ಬಳು ಸಮವಸ್ತ್ರದಲ್ಲಿದ್ದ ಪೈಲಟ್ ಕೆನ್ನೆಗೆ ಬಾರಿಸುತ್ತಿದ್ದಾಳೆ. ಅಲ್ಲದೆ ತಲೆಕೂದಲು ಎಳೆದಾಡಿ ಹೊಡೆದಿದ್ದಾಳೆ. ಈ ವೇಳೆ ಪೈಲಟ್ ಸಹಾಯಕ್ಕಾಗಿ ಕಿರುಚಾಡುವುದು ಹಾಗೂ ನನ್ನನ್ನು ಕ್ಷಮಿಸಿ ಎಂದು ಪರಿ ಪರಿಯಾಗಿ ಬೇಡಿದರೂ ಆಕೆಯ ಮೇಲೆ ಹಲ್ಲೆಯಾಗುತ್ತಿರುವುದನ್ನು ಕಾಣಬಹುದಾಗಿದೆ.

ಇನ್ನೊಂದೆಡೆ ಆಕೆಯ ಪತಿಗೂ ಗುಂಪು ಹಿಗ್ಗಾಮುಗ್ಗವಾಗಿ ಥಳಿಸಿದೆ. ಪತ್ನಿ ಮೇಲೆ ಹಲ್ಲೆಯಾಗುವುದನ್ನು ತಪ್ಪಿಸಲು ಯತ್ನಿಸಿದರೂ ಸಾರ್ವಜನಿಕರು ಬಿಡದೇ ಥಳಿಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ಆಕೆ ಸಾಯುತ್ತಾಳೆ ಎಂದು ಕೂಗಾಡುತ್ತಿರುವುದು ಕೂಡ ವೈರಲ್ ಆದ ವೀಡಿಯೋದಲ್ಲಿ ಸೆರೆಯಾಗಿದೆ.

ಏನಿದು ಘಟನೆ..?: ಎರಡು ತಿಂಗಳ ಹಿಂದೆ ಪೈಲಟ್ ದಂಪತಿ 10 ವರ್ಷದ ಬಾಲಕಿಯನ್ನು ಮನೆ ಕೆಲಸಕ್ಕೆಂದು ಇಟ್ಟುಕೊಂಡಿದ್ದರು. ಆದರೆ ಇಂದು ಬಾಲಕಿ ಕೈಯಲ್ಲಿ ಗಾಯದ ಗುರುತುಗಳು ಇರುವುದನ್ನು ಗಮನಿಸಿ ಆಕೆಯ ಸಂಬಂಧಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆಯೇ ದಂಪತಿ ಬಾಲಕಿಗೆ ಚಿತ್ರಹಿಂಸೆ ನೀಡುತ್ತಾರೆ ಮತ್ತು ಥಳಿಸುತ್ತಾರೆ ಎಂಬ ಆರೋಪ ಸ್ಥಳೀಯ ನಿವಾಸಿಗಳಿಗೆ ಕೇಳಿಬಂದಿದೆ. ಬಾಲಕಿಯ ಕೈಗಳ ಮೇಲೆ ಮತ್ತು ಆಕೆಯ ಕಣ್ಣುಗಳ ಕೆಳಗೆ ಗಾಯದ ಗುರುತುಗಳನ್ನು ನೋಡುತ್ತಿದ್ದಂತೆ ಗುಂಪೊಂದು ಜಮಾಯಿಸಿ ದಂಪತಿಯ ಮೇಲೆ ಹಲ್ಲೆ ನಡೆಸಿತು. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ದಂಪತಿಯನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ದ್ವಾರಕಾದ ಹಿರಿಯ ಪೊಲೀಸ್ ಅಧಿಕಾರಿ ಎಂ ಹರ್ಷವರ್ಧನ್ ಈ ಸಂಬಂಧ ಪ್ರತಿಕ್ರಿಯಿಸಿ, ಬಾಲಕಿಯ ಕೈಗಳಲ್ಲಿ ಸುಟ್ಟ ಗಾಯದ ಗುರುತುಗಳನ್ನು ಸಂಬಂಧಿ ಗುರುತಿಸಿದ್ದಾರೆ. ಸದ್ಯ ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಕೌನ್ಸೆಲಿಂಗ್ ಕೂಡ ನೀಡಲಾಗಿದೆ. ಆಕೆಯ ಹೇಳಿಕೆಯನ್ನು ಆಧರಿಸಿ, ಐಪಿಸಿ ಸೆಕ್ಷನ್ ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ಮತ್ತು ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಡಿ ದೂರು ದಾಖಲಿಸಿದ್ದೇವೆ ಎಂದು ತಿಳಿಸಿದರು.

ಒಟ್ಟಿನಲ್ಲಿ ಮಕ್ಕಳನ್ನು ಮನೆಗೆಲಸಕ್ಕೆ ನೇಮಿಸಿಕೊಳ್ಳುವುದನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಆದರೂ ಈ ನಿಯಮವನ್ನು ಅನೇಕರು ಪದೇ ಪದೇ ಉಲ್ಲಂಘಿಸುತ್ತಾರೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article