ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯ ಮಸೀದಿ (Jamia Masjid Srirangapatna) ವಿವಾದ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಜಾಮಿಯ ಮಸೀದಿಯೋ ಅಥವಾ ಮಂದಿರವೋ ಎಂಬ ವಿಚಾರ ಇದೀಗ ತಾರ್ಕಿಕ ಅಂತ್ಯ ಕಾಣಲು ನ್ಯಾಯಾಲಯದ ಮೆಟ್ಟಿಲು ಏರಿದೆ.
Advertisement
ಜಾಮಿಯ ಮಸೀದಿಯ ವಿವಾದ ನಾಳೆ ಬೆಂಗಳೂರಿನ ಹೈಕೋರ್ಟ್ (HighCourt) ನಲ್ಲಿ ಭಜರಂಗ ಸೇನೆ ಪಿಐಎಲ್ (PIL) ಸಲ್ಲಿಕೆ ಮಾಡಲಿದೆ. ಭಜರಂಗ (Bhajrangdal) ಸೇನೆಯಿಂದ ದಾವೆ ಹೂಡಿದ್ದು, ನಾಳೆ ಹೈಕೋರ್ಟ್‍ನಲ್ಲಿ ಜಾಮಿಯ ವಿವಾದ ಅಡ್ಮಿಶನ್ ಆಗಲಿರುವ ಆಗಲಿದೆ. ಐದು ಮಂದಿ ವಕೀಲರ ತಂಡದಿಂದ ಕಾನೂನು ಹೋರಾಟ ನಡೆಯಲಿದ್ದು, ವಕೀಲ ರವಿಶಂಕರ್ ಹೆಚ್.ಎಸ್ ನೇತೃತ್ವದ ಐದು ಮಂದಿಯ ತಂಡ ಹೋರಾಟ ನಡೆಸಲಿದೆ. ಇದನ್ನೂ ಓದಿ: ಮದುವೆಯಾಗಲು ಹುಡುಗಿಗಾಗಿ ಕ್ಯೂ ನಿಂತ ಮಂಡ್ಯ ಯುವ ರೈತರು
Advertisement
Advertisement
ಒಂದು ಕಡೆ ನಾಳೆ ಕೋರ್ಟ್‍ಲ್ಲಿ ಪಿಐಎಲ್ ಸಲ್ಲಿಕೆಯಾಗಲಿದ್ದು, ಶನಿವಾರ ಭಜರಂಗ ಸೇನೆಯ ಕಾರ್ಯಕರ್ತರು ಹಾಗೂ ಹನುಮ ಭಕ್ತರಿಂದ ಹರಕೆಯ ಪಾದಯಾತ್ರೆ ನಡೆಸಲಿದ್ದಾರೆ. ನ್ಯಾಯಾಲಯದ ಪಿಟಿಶನ್ ಹಿಡಿದುಕೊಂಡು ಮಂಡ್ಯದಿಂದ ಶ್ರೀರಂಗಪಟ್ಟಣದ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ (Aanjaneyaswamy Temple) ದ ವರೆಗೆ ಪಾದಯಾತ್ರೆ ನಡೆಯಲಿದೆ.
Advertisement
ಪಿಟಿಶನ್‍ನನ್ನು ಆಂಜನೇಯಸ್ವಾಮಿ ಪಾದದಲ್ಲಿ ಇಟ್ಟು ವಿಶೇಷ ಪೂಜೆ ಸಲ್ಲಿಸಿ, ವಾಪಸ್ ನೀನು ಮೂಲ ಸ್ಥಳಕ್ಕೆ ಹೋಗಬೇಕು. ಈ ಕಾನೂನು ಹೋರಾಟದಲ್ಲಿ ಗೆಲುವು ಆಗಬೇಕೆಂದು ಆಂಜನೇಯಸ್ವಾಮಿಯ ಬಳಿ ಹರಕೆ ಕಟ್ಟಿಕೊಳ್ಳಲಿರುವ ಹನುಮ ಭಕ್ತರು ಪ್ರಾರ್ಥನೆ ಸಲ್ಲಿಸಲಿದ್ದಾರೆಂದು ಭಜರಂಗ ಸೇನೆಯ ರಾಜ್ಯಾಧ್ಯಕ್ಷ ಮಂಜುನಾಥ್ ಮಂಡ್ಯರವರು ಹೇಳಿದ್ದಾರೆ.