ನಟ ಕಮಲ್ ಹಾಸನ್ (Kamal Haasan) ಅಭಿನಯದ ಚಿತ್ರ `ಥಗ್ ಲೈಫ್’ (Thug Life) ಸುರಕ್ಷಿತವಾಗಿ ಬಿಡುಗಡೆಗೆ ಅವಕಾಶ ನೀಡಿ ಎಂದು ಸುಪ್ರೀಂಕೋರ್ಟ್ಗೆ (Supreme Court) ಪಿಐಎಲ್ ಸಲ್ಲಿಕೆಯಾಗಿದೆ.
ಥಗ್ ಲೈಫ್ ಚಿತ್ರವನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವಲ್ಲಿ ಕರ್ನಾಟಕ ವಿಫಲವಾಗಿದೆ ಎಂದು ಎತ್ತಿ ತೋರಿಸಲು ಈ ಪಿಐಎಲ್ ಸಲ್ಲಿಸಿರೋದಾಗಿ ವಕೀಲ ಅಥೇನಮ್ ವೇಲನ್ ಹೇಳಿಕೊಂಡಿದ್ದಾರೆ. ಕರ್ನಾಟಕದಲ್ಲಿ ಸಾಂವಿಧಾನಿಕ ಆಡಳಿತ ಕುಸಿತವಾಗಿದೆ. ಚಿತ್ರಮಂದಿರಗಳು, ನಾಗರಿಕರಿಗೆ ಬಹಿರಂಗವಾಗಿ ಬೆದರಿಕೆ ಹಾಕಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಇದು ಕಾನೂನಿನ ನಿಯಮವನ್ನು ಹಾಳು ಮಾಡುವ ಭಯದ ವಾತಾವರಣವನ್ನು ಸೃಷ್ಟಿಸಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಕನ್ನಡಿಗರ ವಿರೋಧ ಕಟ್ಟಿಕೊಂಡು ತಮಿಳಿನಾಡಿನಿಂದ ಎಲ್ಲಾ ದುಡ್ಡು ಬಾಚಿಕೊಳ್ಳುತ್ತೇನೆ ಎಂದು ಧಿಮಾಕು ತೋರಿಸಿದ್ದ ಕಮಲ್ ಹಾಸನ್ಗೆ ತಮಿಳಿಗರೇ ತಕ್ಕಪಾಠ ಕಲಿಸಿದ್ದಾರೆ. ಥಗ್ ಲೈಫ್ ಸಿನಿಮಾ ಬಗ್ಗೆ ತಮಿಳಿಗರೇ ನೆಗೆಟಿವ್ ಕಮೆಂಟ್ ಮಾಡ್ತಿದ್ದಾರೆ. ಸಿನಿಮಾ ಚೆನ್ನಾಗಿಲ್ಲ ಎಂದು ಛೀಮಾರಿ ಹಾಕಿದ್ದಾರೆ.
ಕನ್ನಡದ ಭಾಷೆಯ ಬಗ್ಗೆ ನಿರಾಧಾರ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿ ಕಮಲ್ ಹಾಸನ್ ಗುರಿಯಾಗಿದ್ದರು. ಇದರ ಬೆನ್ನಲ್ಲೇ ರಾಜ್ಯಾಧ್ಯಂತ ಕಮಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಕರ್ನಾಟಕದಲ್ಲಿ ‘ಥಗ್ಲೈಫ್’ ಚಿತ್ರ ರಿಲೀಸ್ ಮಾಡುವ ಕುರಿತು ಹೈಕೋರ್ಟ್ (High Court) ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಕಮಲ್ಗೆ ಫಿಲ್ಮ್ ಚೇಂಬರ್ ಬಳಿ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿತ್ತು. ಅಲ್ಲದೇ ಅರ್ಜಿದಾರರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಜೂನ್ 10ಕ್ಕೆ ಅರ್ಜಿ ವಿಚಾರಣೆ ಮುಂದೂಡಿತ್ತು. ಇದರಿಂದ ಕರ್ನಾಟಕದಲ್ಲಿ ಥಗ್ ಲೈಫ್ (Thug Life) ಚಿತ್ರ ಬಿಡುಗಡೆ 1 ವಾರ ಮುಂದೂಡಿಕೆಯಾಗಿದೆ.