ನವದೆಹಲಿ: ದೆಹಲಿಯಲ್ಲಿ ಭೀಕರವಾಗಿ ಹತ್ಯೆಯಾದ ಮುಂಬೈ ಮೂಲದ ಯುವತಿ ಶ್ರದ್ಧಾ ವಾಕರ್ (Shraddha Walker) ಪ್ರಕರಣವನ್ನು ಸಿಬಿಐ (CBI) ತನಿಖೆಗೆ ವರ್ಗಾಯಿಸುವಂತೆ ದೆಹಲಿ ಹೈಕೋರ್ಟ್‌ಗೆ (Delhi HighCourt) ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದೆ.
ವಕೀಲ (Advocate) ಜೋಶಿನಿ ತುಲಿ (Joshini Tuli) ಈ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಲು ಮನವಿ ಮಾಡಲಾಗಿದೆ. ಇದನ್ನೂ ಓದಿ: ಪ್ರಬಲ ನಾಯಕನಿಲ್ಲದಿದ್ರೆ ಅಫ್ತಾಬ್‌ನಂಥ ಹಂತಕರು ಪ್ರತಿ ನಗರದಲ್ಲೂ ಹುಟ್ತಾರೆ – ಅಸ್ಸಾಂ ಸಿಎಂ
Advertisement
Advertisement
ಅರ್ಜಿಯಲ್ಲಿ ಏನಿದೆ?: ಶ್ರದ್ಧಾ ಹತ್ಯೆಯಾಗಿ 6 ತಿಂಗಳಾಗಿದೆ, ದೇಹದ ತುಂಡುಗಳನ್ನು ಹಲವು ಸ್ಥಳಗಳಲ್ಲಿ ಎಸೆಯಲಾಗಿದೆ. ಸಾಕ್ಷಿಗಳನ್ನು ಹುಡುಕಲು ದೆಹಲಿ ಪೊಲೀಸರ (Delhi Police) ಬಳಿ ಆಡಳಿತಾತ್ಮಕ ಅಥವಾ ಸಿಬ್ಬಂದಿ ಕೊರತೆ ಮತ್ತು ಸಾಕಷ್ಟು ತಾಂತ್ರಿಕ ಮತ್ತು ವೈಜ್ಞಾನಿಕ ಸಲಕರಣೆಗಳ ಕೊರತೆ ಇದೆ. ಈ ಹಿನ್ನಲೆ ಅವರು ಸಮರ್ಥವಾಗಿ ತನಿಖೆ ನಡೆಸಲಾಗುವುದಿಲ್ಲ. ಇದನ್ನೂ ಓದಿ: ಪೀಸ್ ಪೀಸ್ ಪ್ರೇಮಿಯ ಮತ್ತಷ್ಟು ಕ್ರೂರತೆ ಬಹಿರಂಗ- ದೆಹಲಿ ಮಾತ್ರವಲ್ಲ ಡೆಹ್ರಾಡೂನ್‍ನಲ್ಲೂ ದೇಹದ ತುಂಡು ಎಸೆತ
Advertisement
Advertisement
ಅಲ್ಲದೇ ದೆಹಲಿ ಪೊಲೀಸರು ತನಿಖೆಯ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ವಿವರಗಳನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಬಹಿರಂಗಪಡಿಸಿದ್ದಾರೆ. ಮಾಹಿತಿಯ ಪ್ರಕಾರ ತನಿಖೆಯ ಮುಂದುವರಿಕೆಗಾಗಿ ಆರೋಪಿಗಳನ್ನು ಐದು ವಿವಿಧ ರಾಜ್ಯಗಳಿಗೆ ಕರೆದೊಯ್ಯಲಾಗುವುದು ಎಂದು ಹೇಳಲಾಗಿದೆ. ಆದ್ದರಿಂದ ಈ ಪ್ರಕರಣವು ಅಂತರರಾಜ್ಯ ಮತ್ತು ದೆಹಲಿ ಪೊಲೀಸರ ಪ್ರಾದೇಶಿಕ ವ್ಯಾಪ್ತಿಯನ್ನು ಮೀರಿದೆ.
ಇದು ಸೈಬರ್ ಕ್ರೈಂ (Cyber Crime) ವ್ಯಾಪ್ತಿಗೂ ಬರಲಿದೆ. ಡೇಟಿಂಗ್ ಆ್ಯಪ್‌ಗಳ (Dating App) ಸುರಕ್ಷತೆಯ ಬಗ್ಗೆಯೂ ಯೋಚಿಸಬೇಕಿದೆ. ಎಲ್ಲ ಆಯಾಮದಲ್ಲಿ ತನಿಖೆ ನಡೆಯಲು ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವುದು ಸೂಕ್ತ, ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಬಗ್ಗೆ ಸೂಚನೆ ನೀಡಬೇಕು ಎಂದು ವಕೀಲರು ಮನವಿ ಮಾಡಿದ್ದಾರೆ.