ಬಾಗಲಕೋಟೆ: ಹಂದಿಯೊಂದು ಮನೆಯ ಹತ್ತಿರ ಆಟವಾಡುತ್ತಿದ್ದ ಮಗುವಿನ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿರುವ ಘಟನೆ ನಗರದ ಊಟಿ ಸಾಬನ್ನವರ್ ಓಣಿಯಲ್ಲಿ ನಡೆದಿದೆ.
ಚಂದ್ರ ವಾಲೀಕಾರ್(3) ದಾಳಿಗೊಳಗಾದ ಮಗುವಾಗಿದೆ. ಬುಧವಾರ ನಗರದ ಊಟಿ ಸಾಬನ್ನವರ ಓಣಿಯ ಮನೆಯ ಹತ್ತಿರ ಮಗು ಆಟವಾಡುತ್ತಿದ್ದಾಗ ಏಕಾಏಕಿ ಹಂದಿಗಳ ಹಿಂಡು ದಾಳಿ ನಡೆಸಿವೆ. ದಾಳಿ ವೇಳೆ ಮಗುವಿನ ಕಣ್ಣಿನ ಭಾಗ ಸೇರಿದಂತೆ ಮುಖ ಹಾಗೂ ಕೈಕಾಲುಗಳನ್ನು ಕಚ್ಚಿ ಗಾಯಗೊಳಿಸಿವೆ.
ಇದನ್ನು ಕಂಡ ಸ್ಥಳೀಯರು ಹಂದಿಗಳ ಹಿಂಡನ್ನು ಓಡಿಸಿ, ಮಗುವನ್ನು ಪ್ರಾಣಾಪಾಯದಿಂದ ಪಾರುಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಮಗುವಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ.
ನಗರದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ನಗರಸಭೆಯವರು ಈ ಕುರಿತು ಸೂಕ್ತ ಕ್ರಮ ಕೈಗೊಂಡು ನಗರದಿಂದ ಹೊರಕ್ಕೆ ಹಾಕಬೇಕೆಂದು ಆಗ್ರಹಿಸಿದ್ದಾರೆ.