Bengaluru City
ಎಟಿಎಂನಲ್ಲಿ ಬಂತು ಪೀಸ್ ಪೀಸ್ ನೋಟು – ಗ್ರಾಹಕ ಶಾಕ್

ಬೆಂಗಳೂರು: ಎಟಿಎಂನಲ್ಲಿ ಗರಿ ಗರಿ ನೋಟ್ ಬರುತ್ತೆ ಅಂತಾ ಡ್ರಾ ಮಾಡಿದ್ದ ಗ್ರಾಹಕನಿಗೆ ಪೀಸ್ ಪೀಸ್ ಆದ ನೋಟುಗಳು ಸಿಕ್ಕಿದೆ.
ನಗರದ ನಂದಿನಿ ಲೇಔಟ್‍ನ ಆಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ತೆಗೆದ ನೋಟು ಪೀಸ್ ಪೀಸ್ ಆಗಿ ಬಂದಿವೆ. ಗ್ರಾಹಕ ಜಯರಾಜ್ ಶನಿವಾರ ಹಣ ಡ್ರಾ ಮಾಡಿದ್ದಾರೆ. ಡ್ರಾ ಮಾಡಿದ ಹಣವನ್ನು ಮನೆಯಲ್ಲಿ ನೋಡಿದ್ದಾರೆ. ಅಲ್ಲಿ ಪುಡಿ ಪುಡಿಯಾಗಿ ನೋಟುಗಳು ಉದುರಿವೆ.
ಈ ಪುಡಿಯಾಗಿರುವ ಕಳಪೆ ನೋಟಿನ ಬಗ್ಗೆ ಆರ್ ಬಿಐ ಅಧಿಕಾರಿಗಳ ಗಮನಕ್ಕೆ ತರಲು ನಾನು ಮುಂದಾಗಿದ್ದೇನೆ. ಸೋಮವಾರ ಆರ್ ಬಿಐ ಅಧಿಕಾರಿಗಳನ್ನು ಭೇಟಿ ಮಾಡಿ ನೋಟು ನೀಡಿ ಪರಿಹಾರ ಕೇಳುತ್ತೇನೆ. ಹೊಸ ನೋಟು ಬಂದು ಒಂದು ವರ್ಷ ಆಗಿಲ್ಲ. ಆಗಲೇ ಈ ರೀತಿಯ ಕಳಪೆ ನೋಟುಗಳು ಬರುತ್ತಿರುವ ಕಾರಣ ಇದರ ಬಗ್ಗೆ ತನಿಖೆಯಾಗಬೇಕು ಎಂದು ಜಯರಾಜ್ ಆಗ್ರಹಿಸಿದ್ದಾರೆ.
