Connect with us

Latest

ಪ್ರತಿಭಟನೆ ನಡುವೆ ಪೊಲೀಸ್‍ಗೆ ಹೂ ಕೊಟ್ಟ ಯುವತಿ – ಫೋಟೋ ವೈರಲ್

Published

on

ನವದೆಹಲಿ: ಪೌರತ್ವ ಕಾಯ್ದೆ ವಿರೋಧಿಸಿ ದೇಶ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆ ನಡುವೆ ಯುವತಿಯೊಬ್ಬಳು ಪೊಲೀಸರಿಗೆ ಗುಲಾಬಿ ಹೂ ನೀಡುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವೈರಲ್ ಆಗಿರುವ ಫೋಟೋದಲ್ಲಿ ಯುವತಿ ಪೊಲೀಸ್‍ಗೆ ಗುಲಾಬಿ ಹೂ ನೀಡುತ್ತಿದ್ದಾರೆ. ಡ್ಯೂಟಿಯಲ್ಲಿದ್ದ ಕಾರಣ ಅವರು ಹೂ ಸ್ವೀಕರಿಸಲಿಲ್ಲ. ಆದರೆ ಯುವತಿ ಹೂ ನೀಡುವಾಗ ಪೊಲೀಸ್ ಮುಗುಳುನಗುತ್ತಿರುವುದು ಫೋಟೋದಲ್ಲಿ ಕಂಡು ಬಂದಿದೆ. ಇದನ್ನೂ ಓದಿ: ಪ್ರತಿಭಟನಾಕಾರರನ್ನು ಸಮಾಧಾನ ಮಾಡಲು ರಾಷ್ಟ್ರಗೀತೆ ಹಾಡಿದ ಡಿಸಿಪಿ: ವಿಡಿಯೋ

ಯುವತಿಯ ತನ್ನ ಇನ್ನೊಂದು ಕೈಯಲ್ಲಿ ಬೋರ್ಡ್ ಕೂಡ ಹಿಡಿದುಕೊಂಡಿದ್ದಾಳೆ. ಅದರಲ್ಲಿ, ನನ್ನ ತಂದೆ ನಾನು ಇತಿಹಾಸ ಓದುತ್ತಿದ್ದೇನೆ ಎಂದುಕೊಂಡಿದ್ದಾರೆ. ಆದರೆ ನಾನು ಇಲ್ಲಿ ಇತಿಹಾಸ ಸೃಷ್ಟಿಸುತ್ತಿದ್ದೇನೆ ಎಂದು ಬರೆಯಲಾಗಿದೆ.

ಈ ಫೋಟೋ ಸಾಕಷ್ಟು ವೈರಲ್ ಆಗುತ್ತಿದ್ದು, ನೆಟ್ಟಿಗರಿಗೆ ಬಹಳ ಇಷ್ಟವಾಗಿದೆ. ಅಲ್ಲದೆ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಹಾಗೂ ಹಿಂದಿ ಕಿರುತೆರೆ ನಟ ಕರಣ್‍ವೀರ್ ಬೊಹ್ರಾ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ನೆಟ್ಟಿಗರು ಈ ಫೋಟೋ ನೋಡಿ, ಒಂದು ಹೂ, ನಗುವವರು ನಾಲ್ವರು. ಎಂತಹ ಒಳ್ಳೆಯ ಫೋಟೋ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಪ್ರತಿಯೊಬ್ಬರ ಎದೆಯಲ್ಲಿ ಹೃದಯ ಇದೆ ಎಂದು ಕಮೆಂಟ್ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *