ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ಮಾಧವನ್ ಕುಟುಂಬದ ಜೊತೆ ಸಖತ್ ಎಂಜಾಯ್ ಮಾಡುತ್ತಿದ್ದು, ಫೊಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಾಧವನ್, ಭಾಗ್ಯಶ್ರೀ ಮತ್ತು ರೋಹಿತ್ ರಾಯ್ ದುಬೈಗೆ ಹೋಗಿದ್ದಾರೆ. ದುಬೈಗೆ ಭಾಗ್ಯಶ್ರೀ ತನ್ನ ಪತಿ ಹಿಮಾಲಯ ದಾಸನಿಯೊಂದಿಗೆ ಬಂದಿದ್ದು, ಮಾಧವನ್ ಅವರ ಪತ್ನಿ ಸರಿತಾ ಬಿರ್ಜೆ ಜೊತೆಗೆ ಬಂದಿದ್ದರು. ಎಲ್ಲರೂ ಸೇರಿ ದುಬೈನಲ್ಲಿ ‘ನೈಟ್ ಔಟ್’ ಮಾಡಿದ್ದು, ಆ ಚಿತ್ರಗಳನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಭಾಗ್ಯ ಬಿಳಿ ಟಪ್ ಮತ್ತು ಕಪ್ಪು ಶಾರ್ಟ್ಸ್ ನಲ್ಲಿ ಸುಂದರವಾಗಿ ಕಾಣುತ್ತಿದ್ದರು. ಇದನ್ನೂ ಓದಿ: ರಾಯನ್‍ಗೆ 11 ತಿಂಗಳು- ಕ್ಯೂಟ್ ವೀಡಿಯೋ ಹಂಚಿಕೊಂಡ ಮೇಘನಾ
Advertisement
View this post on Instagram
Advertisement
ಮಾಧವನ್ ಕಪ್ಪು ಟೀ ಶರ್ಟ್ ಮತ್ತು ಬ್ರೌನ್ ಪ್ಯಾಂಟ್ ನಲ್ಲಿ ಮತ್ತು ನಟ ರೋಹಿತ್ ರಾಯ್ ಕಪ್ಪು ಟೀ ಶರ್ಟ್ ಮತ್ತು ಜೀನ್ಸ್ ಧರಿಸಿದ್ದು, ಇಬ್ಬರು ಹ್ಯಾಂಡ್ಸಮ್ ಆಗಿ ಕಾಣಿಸುತ್ತಿದ್ದಾರೆ.
Advertisement
ಈ ಫೊಟೋಗಳನ್ನು ಭಾಗ್ಯ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ, ‘ದುಬೈ ಡೈರೀಸ್’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
Advertisement
View this post on Instagram
ನಟ ರೋಹಿತ್ ರಾಯ್ ಅವರು ಕೂಡ ಇನ್‍ಸ್ಟಾದಲ್ಲಿ, ಸಹೋದರರು ಮರಳಿದ್ದಾರೆ. ಒಂದು ವರ್ಷದ ನಂತರ ಅದೇ ಸ್ಥಳದಲ್ಲಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ನೆರವಿಗೆ ಸಹಾಯ ಕೋರಿದ ಮಂಜು
ಮಾಧವನ್ ಹಿಂದಿ, ತಮಿಳು, ಕನ್ನಡ, ತೆಲುಗು ಮತ್ತು ಇಂಗ್ಲಿಷ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬಾಲಿವುಡ್ ಚಿತ್ರಗಳಲ್ಲಿ 3 ಈಡಿಯಟ್ಸ್, ರಂಗ್ ದೇ ಬಸಂತಿ, 13 ಬಿ, ತನು ವೆಡ್ಸ್ ಮನು, ಗುರು, ರೆಹನಾ ಹೈ ಟೆರ್ರೆ ದಿಲ್ ಮೇ ಮತ್ತು ಜೀರೋ ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳು. ಪ್ರಸ್ತುತ ಮಾಧವನ್ ರಾಕೆಟ್ರಿ: ದಿ ನಂಬಿ ಎಫೆಕ್ಟ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ.