ವಿಜಯಪುರ: ಆಯತಪ್ಪಿ ರಸ್ತೆ ಮಧ್ಯೆ ಉರುಳಿ ಬಿದ್ದ ಕಬ್ಬು ತುಂಬಿದ ಲಾರಿಗೆ ಹಿಂದಿನಿಂದ ಬಂದ ಮಹಿಂದ್ರ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಇನೋರ್ವ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಘಟನೆ ಸಿಂದಗಿ ಪಟ್ಟಣದ ಹೊರವಲಯ ರಾಷ್ಟ್ರೀಯ ಹೆದ್ದಾರಿಯ ಚಿಕ್ಕಸಿಂದಗಿ ಬಳಿ ತಡರಾತ್ರಿ ನಡೆದಿದೆ.
ಮೃತರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಬಸವನಗರ ನಿವಾಸಿ ರೇಣುಕಾ ಉಕ್ಕಲಿ (48) ಮತ್ತು ಸಿಂದಗಿ ಪಟ್ಟಣದ ಪೆಟ್ರೋಲ್ ಪಂಪಿನ ವಾಚಮನ್ ಜಗದೇವಪ್ಪ (47) ಹಾಗೂ ಲಕ್ಷಣ ಚಿಕ್ಕರೂಗಿ (38)ಯವರು ಎಂದು ತಿಳಿದು ಬಂದಿದೆ.
ಇನ್ನು ಬಸವನ ಬಾಗೇವಾಡಿಯ ಬುಲೊರೋ ಪಿಕಪ್ ಚಾಲಕ ದಾವುದಹಮ್ಮದ್ ರಫೀಕ್ ಬಳಗಾನೂರ (28) ಗಂಭೀರವಾಗಿ ಗಾಯಗೊಂಡಿದ್ದು, ಸಿಂದಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.