ನ್ಯೂಯಾರ್ಕ್: ಲಾಸ್ ವೇಗಾಸ್‌ನಲ್ಲಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ (Donald Trump) ಸೇರಿದ ಹೋಟೆಲ್‌ನ ಹೊರಗೆ ಟೆಸ್ಲಾ ಸೈಬರ್‌ಟ್ರಕ್ ಸ್ಫೋಟವು (Tesla Cybertruck) ಭಯೋತ್ಪಾದನಾ ಕೃತ್ಯ ಎಂದು ಬಿಲಿಯನೇರ್ ಎಲಾನ್ ಮಸ್ಕ್ (Elon Musk) ಹೇಳಿದ್ದಾರೆ.
ಈ ಬಗ್ಗೆ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಎಲೆಕ್ಟ್ರಿಕ್ ವಾಹನದ ವಿನ್ಯಾಸವು ಸ್ಫೋಟದ ಪ್ರಭಾವವನ್ನು ಕಡಿಮೆ ಮಾಡಿದೆ. ಹೋಟೆಲ್‌ನ್ನು ಭಾರೀ ಹಾನಿಯಿಂದ ರಕ್ಷಿಸಿದೆ. ಭಯೋತ್ಪಾದಕರು ದಾಳಿಗೆ ತಪ್ಪು ವಾಹನವನ್ನು ಆರಿಸಿಕೊಂಡಿದ್ದಾರೆ. ಸ್ಫೋಟದಿಂದ ಗಾಜಿನ ಬಾಗಿಲುಗಳು ಸಹ ಮುರಿದಿಲ್ಲ ಎಂದು ಅವರು ಪೋಸ್ಟ್ ಬರೆದುಕೊಂಡಿದ್ದಾರೆ.
Advertisement
ಗುರುವಾರ ಮುಂಜಾನೆ ಈ ಸ್ಫೋಟ ಸಂಭವಿಸಿದೆ. ಟ್ರಂಪ್ ಇಂಟರ್‌ನ್ಯಾಶನಲ್ ಹೋಟೆಲ್‌ನ ಮುಖ್ಯ ದ್ವಾರದ ಹೊರಗೆ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಸ್ಫೋಟದಲ್ಲಿ ಒಬ್ಬ ಸಾವನ್ನಪ್ಪಿದ್ದು, ಏಳು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Advertisement
Advertisement
ಪಟಾಕಿ, ಗ್ಯಾಸ್ ಟ್ಯಾಂಕ್‌ಗಳು ಮತ್ತು ಕ್ಯಾಂಪಿಂಗ್ ಇಂಧನ ಸೇರಿದಂತೆ ಟ್ರಕ್‌ನ ಬೆಡ್‌ನಲ್ಲಿ ಸಂಗ್ರಹಿಸಲಾದ ವಸ್ತುಗಳಿಂದ ಸ್ಫೋಟ ಸಂಭವಿಸಿದೆ ಎಂದು ತನಿಖಾಧಿಕಾರಿಗಳು ಖಚಿತಪಡಿಸಿದ್ದಾರೆ.
Advertisement
ಹೋಟೆಲ್ ಪ್ರವೇಶದ್ವಾರದಲ್ಲಿ ನಿಲ್ಲಿಸಿದ ಸ್ಟೇನ್‌ಲೆಸ್ ಸ್ಟೀಲ್ ಟ್ರಕ್‌ಗೆ ಬೆಂಕಿ ಹೊತ್ತಿ ಉರಿಯುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಮೊದಲು ಬೆಂಕಿ ಹೊತ್ತಿಕೊಂಡು ನಂತರ ಸ್ಫೋಟ ಸಂಭವಿಸಿತ್ತು.