ಮಂಗಳೂರು: ಟೋಲ್ ಗೇಟ್ ತಪ್ಪಿಸಲು ಟೋಲ್ ಸಿಬ್ಬಂದಿಗೆ ಗುದ್ದಿಸಿಕೊಂಡು ಹೋದ ಪಿಕಪ್ ವಾಹನ ಚಾಲಕನಿಗೆ ಪಾದಚಾರಿ ಕಪಾಳಮೋಕ್ಷ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಟೋಲ್ ಬಳಿ ಘಟನೆ ನಡೆದಿದೆ. ಟೋಲ್ ತಪ್ಪಿಸಲು ರಾಂಗ್ ಸೈಡ್‌ನಲ್ಲಿ ಪಿಕಪ್ ಚಾಲಕ ಬಂದಿದ್ದಾನೆ. ಇದನ್ನು ತಡೆಯಲು ಹೋದ ಸಿಬ್ಬಂದಿಗೆ ಗುದ್ದಿಸಿ ಪಿಕಪ್ ಚಾಲಕ ಎಸ್ಕೇಪ್ ಆಗಿದ್ದಾನೆ. ಇದೇ ವೇಳೆ ಪಕ್ಕದಲ್ಲೇ ಹೋಗುತ್ತಿದ್ದ ಪಾದಚಾರಿಗೂ ಗುದ್ದಿಸಿದ್ದಾನೆ.
Advertisement
ಇದರಿಂದ ಸಿಟ್ಟಿಗೆದ್ದ ಪಾದಚಾರಿ, ಪಿಕಪ್ ಡ್ರೈವರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಟೋಲ್ ಕೊಡದೇ ರಾಂಗ್ ಸೈಡ್‌ನಲ್ಲಿ ಚಾಲಕ ಎಸ್ಕೇಪ್ ಆಗಿದ್ದಾನೆ. ಬಿ.ಸಿ. ರೋಡ್ ಕಡೆಯಿಂದ ಮಂಗಳೂರು ಕಡೆಗೆ ಕೆಎ 19 ಎಎ 7484 ನೋಂದಣಿಯ ಪಿಕಪ್ ವಾಹನ ಹೋಗಿದೆ.
Advertisement
ಈ ಸಂಬಂಧ ಟೋಲ್ ಸಿಬ್ಬಂದಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.