InternationalLatestLeading NewsMain Post

ವೆಬ್‌ಸೈಟ್‌ಗೆ ಅರೆಬೆತ್ತಲೆ ಫೋಟೋ ಅಪ್‌ಲೋಡ್ ಮಾಡಿ ಸಿಕ್ಕಿಬಿದ್ದ ಶಿಕ್ಷಕಿ – ಶಾಲೆಗೆಲ್ಲಾ ಡಂಗೂರ ಸಾರಿದ ವಿದ್ಯಾರ್ಥಿ

ಎಡಿನ್ಬರ್ಗ್: ಫಿಸಿಕ್ಸ್ ಶಿಕ್ಷಕಿಯೊಬ್ಬರು (Physics Teacher) ಯಡವಟ್ಟು ಮಾಡಿಕೊಂಡು ಅಮಾನತಾಗಿರುವ ಘಟನೆ ಸ್ಕಾಟ್‌ಲ್ಯಾಂಡ್‌ನಲ್ಲಿ (Scotland) ನಡೆದಿದೆ.

ಕಿರ್ಸ್ಟಿ ಬುಕಾನ್ ಎಂಬ ಶಿಕ್ಷಕಿಯೊಬ್ಬರು (Teacher) ಅರೆಬೆತ್ತಲೆ ಫೋಟೋವನ್ನು ವೆಬ್‌ಸೈಟ್‌ನಲ್ಲಿ (Website) ಅಪ್ಲೋಡ್ ಮಾಡಿ ತನ್ನ ವಿದ್ಯಾರ್ಥಿಯೊಬ್ಬನಿಗೆ ಸಿಕ್ಕಿ ಬಿದ್ದಿದ್ದಾಳೆ. ಬಳಿಕ ಆ ವಿದ್ಯಾರ್ಥಿ ಅರೆಬೆತ್ತಲೆ ಫೋಟೋ ವಿಚಾರವನ್ನು ಶಾಲೆಗೆಲ್ಲಾ ಡಂಗೂರ ಸಾರಿದ್ದಾನೆ. ಈ ವಿಚಾರ ಆಡಳಿತ ಮಂಡಳಿ ಗಮನಕ್ಕೆ ಬಂದು ಶಿಕ್ಷಕಿಯನ್ನು ಅಮಾನತು ಮಾಡಿದೆ. ಇದನ್ನೂ ಓದಿ: ನನ್ನ ಸ್ನೇಹಿತ ಮೋದಿಯನ್ನು ನಂಬುತ್ತೇನೆ: ಫ್ರೆಂಚ್ ಅಧ್ಯಕ್ಷ

ವೆಬ್‌ಸೈಟ್‌ಗೆ ಅರೆಬೆತ್ತಲೆ ಫೋಟೋ ಅಪ್‌ಲೋಡ್ ಮಾಡಿ ಸಿಕ್ಕಿಬಿದ್ದ ಶಿಕ್ಷಕಿ - ಶಾಲೆಗೆಲ್ಲಾ ಡಂಗೂರ ಸಾರಿದ ವಿದ್ಯಾರ್ಥಿ

ಕಿರ್ಸ್ಟಿ ಬುಕಾನ್ ಸ್ಕಾಟ್‌ಲ್ಯಾಂಡ್‌ನ (Scotland) ಬ್ಯಾನರ್ಮನ್ ಹೈಸ್ಕೂಲ್‌ನಲ್ಲಿ ಫಿಸಿಕ್ಸ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದಳು. ಹಗಲು ಹೊತ್ತಿನಲ್ಲಿನ ಈಕೆಯ ಕೆಲಸಕ್ಕೂ ರಾತ್ರಿಯ ಕೆಲಸಕ್ಕೂ ಸಂಬಂಧವೇ ಇರಲಿಲ್ಲ. ಇತ್ತ ಬೆಳಗ್ಗೆ ಶಾಲೆಯಲ್ಲಿ ಪಾಠ ಮುಗಿಸಿ ಬರುತ್ತಿದ್ದ ಶಿಕ್ಷಕಿ, ಸಂಜೆ ಬೇರೆಯದ್ದೇ ಪಾಠ ಮಾಡುತ್ತಿದ್ದಳು. ಪ್ರತಿದಿನ ರಾತ್ರಿ ತನ್ನ ಬೆತ್ತಲೆ ಫೋಟೋವನ್ನು ವಿವಿಧ ವೆಬ್‌ಸೈಟ್‌ಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಳು. ಅಲ್ಲದೇ ವಿವಿಧ ವೆಬ್‌ಸೈಟ್‌ಗಳಿಗಾಗಿ ಅರೆಬೆತ್ತಲೆ ಅವತಾರದಲ್ಲಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಳು. ಇದರಿಂದ ದೊಡ್ಡ ಮೊತ್ತದ ಆದಾಯ ಗಳಿಸುತ್ತಿದ್ದಳು. ಇದನ್ನೂ ಓದಿ: ಕಿರಿಕಿರಿ ಎಂದು ರೋಗಿಗೆ ಹಾಕಿದ್ದ ವೆಂಟಿಲೇಟರ್‌ನ್ನೇ ಆಫ್ ಮಾಡಿದ ವೃದ್ಧೆ

ವೆಬ್‌ಸೈಟ್‌ಗೆ ಅರೆಬೆತ್ತಲೆ ಫೋಟೋ ಅಪ್‌ಲೋಡ್ ಮಾಡಿ ಸಿಕ್ಕಿಬಿದ್ದ ಶಿಕ್ಷಕಿ - ಶಾಲೆಗೆಲ್ಲಾ ಡಂಗೂರ ಸಾರಿದ ವಿದ್ಯಾರ್ಥಿ

ಹೀಗೆಯೇ ಎಂದಿನಂತೆ ಶಿಕ್ಷಕಿ ತನ್ನ ಅರೆಬೆತ್ತಲೆ ಫೋಟೋವನ್ನು ಅಪ್‌ಲೋಡ್ ಮಾಡುತ್ತಿದ್ದಾಗ, ವಿದ್ಯಾರ್ಥಿಯೊಬ್ಬ ಶಿಕ್ಷಕಿಯ ಫೋಟೋ ನೋಡಿದ್ದಾನೆ. ನಂತರ ಬಂದವನೇ ಇಡೀ ಶಾಲೆಗೆಲ್ಲಾ ಡಂಗೂರ ಸಾರಿದ್ದಾನೆ. ಇದರಿಂದ ಮುಜುಗರಕ್ಕೀಡಾದ ಶಾಲಾ ಆಡಳಿತ ಮಂಡಳಿ ಶಿಕ್ಷಕಿಯ ಮೇಲೆ ಶಿಸ್ತು ಕ್ರಮ ಜರುಗಿಸಿದೆ. ಇದನ್ನೂ ಓದಿ: ಏಲಿಯನ್ ಅಟ್ಯಾಕ್, ಸೋಲರ್ ಸುನಾಮಿ – ವಿಶ್ವದ ಅಂತ್ಯದ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ

ಸದ್ಯ ಕೆಲಸ ಕಳೆದುಕೊಂಡಿರುವ ಶಿಕ್ಷಕಿ, ನನಗೆ 11 ವರ್ಷ ವಯಸ್ಸಿನ ಮಗನಿದ್ದಾನೆ. ಅವನು ದೀರ್ಘಕಾಲದ ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಅವನ ಚಿಕಿತ್ಸೆಗಾಗಿ ಹೆಚ್ಚಿನ ಹಣ ಬೇಕಾಗುತ್ತದೆ. ಹೀಗಾಗಿ ನನ್ನ ಖಾಸಗಿ ಫೋಟೋಗಳನ್ನು ಮಾರಿಕೊಳ್ಳುತ್ತಿದ್ದೆ ಎಂದು ಹೇಳಿಕೊಂಡಿರುವುದಾಗಿ ವರದಿಯಾಗಿದೆ.

Live Tv

Leave a Reply

Your email address will not be published. Required fields are marked *

Back to top button