ಹೈದರಾಬಾದ್: ಕೆಲಸ ಕೊಡಿಸ್ತೀನಿ ಅಂತ ಹೇಳಿ ಹಲವು ತಿಂಗಳಿನಿಂದ 29 ವರ್ಷದ ವಿಕಲಚೇತನ ಮಹಿಳೆಗೆ ವಂಚಿಸಿ ಬಳಿಕ ಅತ್ಯಾಚಾರವೆಸಗಿ ಮೋಸ ಮಾಡಿದ ವ್ಯಕ್ತಿಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಸೋಮ ಸೈಲು ಎಂದು ಗುರುತಿಸಲಾಗಿದ್ದು, ಈತ ರಸ್ತೆ ಸಾರಿಗೆ ನಿಗಮ(ಆರ್‍ಟಿಸಿ)ದಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ಈತ ತನ್ನ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆ ಬಳಿಯಿಂದ 3 ಲಕ್ಷ ರೂ. ಹಣ ಹಾಗೂ ಕೆಲ ದಾಖಲೆಗಳನ್ನು ಕಳೆದ ವರ್ಷ ಪಡೆದಿದ್ದಾನೆ ಅಂತ ಮಹಿಳೆ ಆರೋಪಿಸಿದ್ದಾರೆ.
Advertisement
Advertisement
ಸೆಪ್ಟೆಂಬರ್ 16ರಂದು ಮಹಿಳೆ ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, `ತನ್ನ ಪತಿ ಆರ್‍ಟಿಸಿಯಲ್ಲಿ ಕೆಲಸ ಮಾಡುತ್ತಿದ್ದು, ಮೃತಪಟ್ಟಿದ್ದರು. ಗಂಡನ ಸಾವಿನ ಬಳಿಕ ತಾನು ಅಲ್ಲಿ ಕೆಲಸ ಪಡೆದುಕೊಳ್ಳಲು ಯತ್ನಿಸುತ್ತಿದ್ದೆ. ಈ ವೇಳೆ ಸೈಲು ಅವರನ್ನು ಭೇಟಿ ಮಾಡಿದ್ದು, ಆತ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದಾನೆ. ಇದೇ ವೇಳೆ ತಾನು, `ತನ್ನ ಕೆಲಸದ ಬಗ್ಗೆ ವಿಚಾರಿಸಿದೆ. ಆಗ ಆತ ನಕಲು ಐಡಿ ಹಾಗೂ ಸ್ಯಾಲರಿ ಸ್ಲಿಪ್ ಗಳನ್ನು ಮಾಡಿ ಕಚೇರಿ ಹೋಗದಿದ್ದರೂ ತಮ್ಮ ಅಕೌಂಟ್ ಗೆ ಹಣ ನೀಡುವುದಾಗಿ ಹೇಳಿದ್ದಾನೆ ಅಂತ ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.
Advertisement
Advertisement
ಇಷ್ಟು ಮಾತ್ರವಲ್ಲದೇ ಸೈಲು ಒಂದು ದಿನ ತನ್ನ ಮನೆಗೆ ಬಂದು ಸ್ವೀಟ್ಸ್ ಹಾಗೂ ಚಾಕ್ಲೇಟ್ ಡಬ್ಬ ಕೊಟ್ಟಿದ್ದನು. ಈ ವೇಳೆ ಅದರಿಂದ ತೆಗೆದು ಸಿಹಿ ತಿಂದಿದ್ದೆ. ಬಳಿಕ ನಾನು ಪ್ರಜ್ಞೆ ತಪ್ಪಿ ಬಿದ್ದಿದ್ದೆನು. ಇದನ್ನೇ ಸದುಪಯೋಗಪಡಿಸಿಕೊಂಡ ಆತ ತನ್ನ ಮೇಲೆ ಅತ್ಯಾಚಾರವೆಗಿದ್ದಾನೆ. ಅಲ್ಲದೇ ಈ ವಿಚಾರ ಯಾರ ಬಳಿಯೂ ಹೇಳದಂತೆ ತಾಕೀತು ಮಾಡಿದ್ದನು ಅಂತ ಮಹಿಳೆಗೆ ಪೊಲೀಸರ ಮುಂದೆ ತನ್ನ ಅಳಲು ತೋಡಿಕೊಂಡಿದ್ದಾರೆ.
ಇಷ್ಟೆಲ್ಲಾ ಮಾಡಿದ ಸೈಲು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಈ ರೀತಿ ಬೆದರಿಕೆಗಳನ್ನು ಹಾಕುತ್ತಾ ಹಲವು ಬಾರಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಅಂತ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಸದ್ಯ ಮಹಿಳೆಯ ದೂರಿನಂತೆ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಅತ್ಯಾಚಾರ ಹಾಗೂ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv