ಪಟ್ಟಾ: ಬಿಹಾರದ ದರ್ಭಾಂಗನಲ್ಲಿರುವ ಲಲಿತ್ ನಾರಾಯಣ್ ಮಿಥಿಲಾ ವಿಶ್ವವಿದ್ಯಾಲಯ (University) ವಿದ್ಯಾರ್ಥಿಗಳಿಗೆ ವಿತರಿಸಿದ ಪರೀಕ್ಷೆಯ ಪ್ರವೇಶ ಪತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, (Narendra Modi) ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಮತ್ತು ಬಿಹಾರದ ರಾಜ್ಯಪಾಲ ವಾಗು ಚೌವಾಣ್ (Phagu Chauhan) ಅವರ ಫೋಟೋಗಳನ್ನು ಹಾಕಿ ಪೇಚಿಗೆ ಸಿಲುಕಿದೆ.
Advertisement
ಮಧುಬನಿ, ನಮಸ್ಸಿಪುರ ಮತ್ತು ಬೇಗುಸುರೈ ಜಿಲ್ಲೆಗಳಲ್ಲಿರುವ ಕಾಲೇಜುಗಳಲ್ಲಿ ಬಿ.ಎ ಪದವಿಯ ಮೂರನೇ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತಿದ್ದ ವೇಳೆ ಈ ಫೋಟೋ ಇರುವ ಪ್ರವೇಶ ಪತ್ರ (Admit Card) ಕಂಡು ಬಂದಿದೆ. ಇದನ್ನು ವಿದ್ಯಾರ್ಥಿಗಳ ತಂಡವೊಂದು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿದೆ. ಆ ಬಳಿಕ ಇದೀಗ ಪ್ರವೇಶ ಪತ್ರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಆರ್ಟಿಕಲ್ 370ಯನ್ನು ಮತ್ತೆ ತರುವ ಭರವಸೆ ನಾನು ನೀಡಲ್ಲ: ಆಜಾದ್
Advertisement
Advertisement
ಸಾಮಾಜಿಕ ಜಾಲತಾಣಗಳ ಕಾಲೇಜಿನ ಪ್ರವೇಶ ಪತ್ರವನ್ನು ಹರಿಬಿಟ್ಟಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ಕುರಿತು ತನಿಖೆಗೆ ಆದೇಶಿಸಲಾಗಿದೆ, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಬಿಟ್ಟ ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅಲ್ಲದೇ ಎಫ್‍ಐಆರ್ ಕೂಡ ದಾಖಲಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಸಚಿವ ಮುಸ್ತಾಕ್ ಅಹ್ಮದ್ ಈ ಬಗ್ಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ – ಉದ್ಧವ್ ಬಣದ ಐವರು ಅರೆಸ್ಟ್, 40 ಮಂದಿ ವಿರುದ್ಧ FIR
Advertisement
Dakhe modi g bihar ke lnmu University ka hal student ke admit card par aapka photo or signature @narendramodi pic.twitter.com/Ar1YNp74Dv
— stuti singh (@stutisi68905863) September 11, 2022
ಪ್ರವೇಶ ಪತ್ರಗಳನ್ನು ಆನ್‍ಲೈನ್ ಮೂಲಕ ವಿತರಿಸಲಾಗಿದ್ದು, ವಿಶಿಷ್ಟ ಬಳಕೆದಾರರ ಗುರುತಿನ ಸಂಖ್ಯೆಯನ್ನು ಬಳಸಿ ಸಂಬಂಧಿಸಿದ ವಿದ್ಯಾರ್ಥಿಗಳು ಮಾತ್ರ ಇವುಗಳನ್ನು ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು, ವಿದ್ಯಾರ್ಥಿಗಳ ತಮ್ಮ ಭಾವಚಿತ್ರ ಹಾಗೂ ಇತರ ಮಾಹಿತಿಗಳನ್ನು ಆನ್‍ಲೈನ್ ಮೂಲಕ ಅಪ್‍ಲೋಡ್ ಮಾಡಬೇಕಿತ್ತು. ಈ ವೇಳೆ ಕೆಲವರು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಈ ಘಟನೆಯಿಂದ ವಿಶ್ವವಿದ್ಯಾಲಯಕ್ಕೆ ಕೆಟ್ಟ ಹೆಸರು ಬರುತ್ತದೆ. ನರೇಂದ್ರ ಮೋದಿ, ಧೋನಿ ಹಾಗೂ ವಾಗು ಚೌಹಾಣ್ ಅವರ ಫೋಟೋ ಬಳಕೆಯ ಕುರಿತು ತನಿಖೆಗೆ ತಿಳಿಸಿದ್ದೇವೆ ಎಂದರು.