ಸದಾ ಇನ್ಸ್ಟಾದಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದ ತಮಿಳು ನಟಿ ದಿವ್ಯಾ ಭಾರತಿ (Actress Divya Bharathi), ಈ ಬಾರಿ ಸ್ಟೈಲೀಶ್ ಆಗಿ ಸೀರೆ ಉಟ್ಟು ಫೋಟೋಶೂಟ್ ಮಾಡಿಸಿದ್ದಾರೆ. ಇನ್ಸ್ಟಾದಲ್ಲಿ ರೆಡ್ ಸೀರೆಯಲ್ಲಿ ಮಿಂಚುತ್ತಿರುವ ಫೋಟೋಗಳು ಸೌಂದರ್ಯ ಪ್ರಿಯರ ಕಣ್ಣನ್ನು ಕುಕ್ಕುತ್ತಿವೆ.
‘ಬ್ಯಾಚುಲರ್’ ಚಿತ್ರದ ಮೂಲಕ ನಟಿ ದಿವ್ಯ ಭಾರತಿ ಯುವಜನರ ಹೃದಯ ಕದ್ದಿದ್ದರು. ಇತ್ತೀಚೆಗೆ ಬಿಡುಗಡೆಯಾದ ಅವರ ‘ಕಿಂಗ್‌ಸ್ಟನ್’ ಚಿತ್ರದ ಮೇಲೆ ತುಂಬಾ ನಿರೀಕ್ಷೆ ಇಟ್ಟಿದ್ದರು. ಆದರೆ ಅದು ಅಷ್ಟು ಯಶಸ್ವಿಯಾಗಿರಲಿಲ್ಲ. ಇದನ್ನೂ ಓದಿ: ಅಭಿಮಾನಿ ಕಡೆ ಗನ್ ಇಟ್ಟ ದಳಪತಿ ವಿಜಯ್ ಬಾಡಿಗಾರ್ಡ್!
ತಮಿಳಿನಲ್ಲಿ ಸರಿಯಾದ ಅವಕಾಶಗಳು ಸಿಗದೆ ಪರದಾಡುತ್ತಿರುವ ದಿವ್ಯ ಈಗ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಗ್ಲಾಮರ್ ಆಗಿ ಆಧುನಿಕ ಶೈಲಿಯ ಸೀರೆಯಲ್ಲಿ ಪೋಸ್ ನೀಡಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣಗಳಿಗೆ ಕಿಚ್ಚು ಹಚ್ಚಿದ್ದಾರೆ. ಈ ಕಿಚ್ಚಿನಿಂದಲೇ ಮೂವತ್ತು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳ ಕಣ್ಣನ್ನು ತಂಪು ಮಾಡಿದ್ದಾರೆ.
ಕೆಂಪು ಬಣ್ಣದ ಮಾಡರ್ನ್ ಸೀರೆಯಲ್ಲಿ ವಿವಿಧ ಭಂಗಿಗಳಲ್ಲಿ ದಿವ್ಯ ಪೋಸ್ ನೀಡಿದ್ದಾರೆ. ಈ ರೀತಿಯ ಆಧುನಿಕ ಶೈಲಿ ಸೀರೆ ಪಾರ್ಟಿಗಳು ಮತ್ತು ಮದುವೆಗಳಂತಹ ಸಮಾರಂಭದಲ್ಲಿ ಎಲ್ಲರ ಕಣ್ಣು ನಿಮ್ಮ ಮೇಲೆ ಬೀಳುವಂತೆ ಮಾಡುತ್ತವೆ! ಸದ್ಯ ದಿವ್ಯಾ ಅವರ ಮನಮೋಹಕ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.
2021ರಲ್ಲಿ ‘ಬ್ಯಾಚುಲರ್’ ಸಿನಿಮಾದಲ್ಲಿ ಜಿ.ವಿ ಪ್ರಕಾಶ್ ಮತ್ತು ದಿವ್ಯಾ ಭಾರತಿ ಒಟ್ಟಿಗೆ ಕೆಲಸ ಮಾಡಿದ್ದರು. ಅಂದಿನಿಂದ ಇಬ್ಬರ ನಡುವೆ ಲವ್ವಿ ಡವ್ವಿ ಇದೆ ಎಂದೇ ಸುದ್ದಿ ಹಬ್ಬಿತ್ತು. ಈ ಗಾಸಿಪ್‌ನ್ನು ಇಬ್ಬರೂ ತಿರಸ್ಕರಿಸಿದ್ದರು. ಇನ್ನೂ ದಿವ್ಯಾ, ಮದುವೆಯಾದವರೊಂದಿಗೆ ನಾನೇಕೆ ಸುತ್ತಲಿ ಎಂದು ಹೇಳಿಕೊಂಡಿದ್ದರು. ಇದನ್ನೂ ಓದಿ: ವೇದಿಕೆಯಲ್ಲಿ ಸಮಂತಾ ಕಣ್ಣೀರಿಟ್ಟಿದ್ಯಾಕೆ?- ಪ್ರಚಾರದ ಗಿಮಿಕ್ ಎಂದವರಿಗೆ ನಟಿ ಸ್ಪಷ್ಟನೆ