ಪಾಕ್‌ಗೆ ಪುರಿ ಜಗನ್ನಾಥ ದೇವಾಲಯದ ಫೋಟೋ, ವಿಡಿಯೋ ಸೋರಿಕೆ ­- ಜ್ಯೋತಿ ಸಂಪರ್ಕದಲ್ಲಿದ್ದ ಮತ್ತೊಬ್ಬ ಯೂಟ್ಯೂಬರ್‌ಗೆ IB ಡ್ರಿಲ್‌

Public TV
2 Min Read
Jyoti Malhotra 1

ನವದೆಹಲಿ: ಭಾರತದ ಸೇನಾ ರಹಸ್ಯಗಳು, ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಕ್ಕೆ (Pakistan) ಹಂಚಿಕೆ ಮಾಡಿದ ಆರೋಪದಡಿ ಬಂಧಿತಳಾಗಿರುವ ಹರಿಯಾಣ ಮೂಲದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳ (Jyoti Malhotra) ಮತ್ತಷ್ಟು ದೇಶದ್ರೋಹ ಕೃತ್ಯ ಬಯಲಾಗ್ತಿದೆ.

Haryana Youtuber Jyothi Arrest for spying pakistan Jyothi Malhotra

ಈ ನಡುವೆ ಪುರಿ ಮೂಲದ ಯೂಟ್ಯೂಬರ್ ಪ್ರಿಯಾಂಕಾ ಜೊತೆಗೂ ಜ್ಯೋತಿ ನಂಟಿದೆ ಎನ್ನುವ ರಹಸ್ಯ ಈಗ ಬೆಳಕಿಗೆ ಬಂದಿದೆ. ಒಡಿಶಾದ ಪ್ರಿಯಾಂಕಾ ಸೇನಾಪತಿ (Priyanka Senapati) ಜೊತೆ ಪುರಿ ದೇಗುಲದ ಸಮಗ್ರ ವಿಡಿಯೋ ಕೂಡ ಮಾಡಿದ್ದಾಳೆ. ಹೀಗಾಗಿ, ಗುಪ್ತ ಇಲಾಖೆ ಅಧಿಕಾರಿಗಳು ಪ್ರಿಯಾಂಕಾಳನ್ನೂ ವಿಚಾರಣೆ ನಡೆಸಿದ್ದಾರೆ ಅಂತ ತಿಳಿದು ಬಂದಿದೆ. ಇದನ್ನೂ ಓದಿ: ಪಾಕ್‌ ಹೈಕಮಿಷನ್‌ ಅಧಿಕಾರಿ ಜೊತೆ ಜ್ಯೋತಿ ಫೋಟೊ ರಿವೀಲ್ – ಪಾಕಿಸ್ತಾನಕ್ಕೆ ಬರ್ತೀನಿ ಎನ್ನುತ್ತಿದ್ದ ಯೂಟ್ಯೂಬರ್‌

Puri Jagannath Temple 1

ಪುರಿ ಜಗನ್ನಾಥ ದೇವಾಲಯದ ಮಾಹಿತಿ ಸೋರಿಕೆ:
ಮೂಲಗಳ ಪ್ರಕಾರ, ಜ್ಯೋತಿ ಮಲ್ಹೋತ್ರಾ 2024ರ ಸೆಪ್ಟೆಂಬರ್‌ನಲ್ಲಿ ಪುರಿಗೆ ಭೇಟಿ ನೀಡಿದ್ದಳು. ಈ ಸಮಯದಲ್ಲಿ ಜಗನ್ನಾಥ ದೇವಾಲಯ ಮತ್ತು ಅದರ ಸುತ್ತಲಿನ ಸರ್ಕಾರಿ ಆವರಣದ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿದಿದ್ದಳು. ಜೊತೆಗೆ ಈ ಸ್ಥಳಗಳ ಮಾಹಿತಿ ಸಂಗ್ರಹಿಸಿ ಸೋಷಿಯಲ್‌ ಮೀಡಿಯಾಗಳ ಮೂಲಕ ಪಾಕಿಸ್ತಾನದ ಕಾರ್ಯಕರ್ತರಿಗೆ ಕಳುಹಿಸಿದ್ದಾಳೆ ಎಂದು ಗುಪ್ತಚರ ಸಂಸ್ಥೆ ಶಂಕಿಸಿದೆ. ಇದೇ ಸಂದರ್ಭದಲ್ಲಿ ಜ್ಯೋತಿ ಪ್ರಿಯಾಂಕಾ ಸೇನಾಪತಿಯನ್ನ ಭೇಟಿಯಾಗಿದ್ದಾಳೆ. ಆಗಿನಿಂದಲೂ ಪ್ರಿಯಾಂಕ ಜೊತೆಗೆ ಸಂಪರ್ಕ ಬೆಳೆದಿತ್ತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಪಹಲ್ಗಾಮ್‌ಗೂ ಭೇಟಿ ನೀಡಿದ್ದಳು ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾ!

Jyoti Malhotra

ಇವರಿಬ್ಬರ ಪರಿಚಯ ಭಾರೀ ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಅನುಮಾನಗೊಂಡ ಗುಪ್ತಚರ ಸಂಸ್ಥೆ ಹಾಗೂ ಪುರಿ ಪೊಲೀಸರು ಪ್ರಿಯಾಂಕಾ ಸೇನಾಪತಿಯ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಬೀದಿಯಲ್ಲಿ ಬಿದ್ದಿದ್ದ ಮಗು ತಂದು ಸಾಕಿದ್ದ ತಾಯಿ – 13 ವರ್ಷಕ್ಕೆ ಅದೇ ಮಗಳಿಂದ ಹೋಯ್ತು ಜೀವ!

ಪ್ರಿಯಾಂಕಾ ಸ್ಪಷ್ಟನೆ ಏನು?
ಪೊಲೀಸರ ವಿಚಾರಣೆ ಎದುರಿಸಿದ ಬಳಿಕ ಸೋಷಿಯಲ್‌ ಮೀಡಿಯಾ ಲೈವ್‌ನಲ್ಲಿ ಪ್ರಿಯಾಂಕಾ ಸ್ಪಷ್ಟನೆ ನೀಡಿದ್ದಾರೆ. ಜ್ಯೋತಿ ನನ್ನ ಸ್ನೇಹಿತೆ ಅಷ್ಟೇ, ಹೊರತಾಗಿ ಅವಳ ಯಾವುದೇ ಕೃತ್ಯಗಳ ಬಗ್ಗೆ ನನಗೆ ತಿಳಿದಿರಲಿಲ್ಲ. ಶತ್ರು ದೇಶಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದಾಳೆಂಬುದು ಗೊತ್ತದ್ದರೆ, ಮಾತೇ ಆಡುತ್ತಿರಲಿಲ್ಲ. ಅವಳ ಬಗ್ಗೆ ಕೇಳಿ ನಾನೇ ಆಘಾತಕ್ಕೊಳಗಾಗಿದ್ದೇನೆ. ಪೊಲೀಸರಿಗೆ ನಾನು ಎಲ್ಲ ರೀತಿಯಲ್ಲೂ ತನಿಖೆಗೆ ಸಹಕರಿಸಲು ಸಿದ್ಧಳಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

Haryana Youtuber Arrest For Spying Pakistan Jyothi Malhotra

ಜ್ಯೋತಿ ಬಂಧನ ಮತ್ತು ಪ್ರಿಯಾಂಕಾ ವಿಚಾರಣೆ ಬೆನ್ನಲ್ಲೇ, ಗುಪ್ತಚರ ಸಂಸ್ಥೆಗಳು ಪುರಿ ದೇವಾಲಯದ ಆವರಣದಲ್ಲಿ ಅನುಮಾನಾಸ್ಪದ ಜನರ ಓಡಾಟದ ಬಗ್ಗೆ ನಿಗಾ ವಹಿಸಿವೆ. ಇದನ್ನೂ ಓದಿ: ಕಾಲೇಜಿನ ನಾಲ್ಕನೇ ಮಹಡಿಯಿಂದ ಬಿದ್ದು ಏರೋಸ್ಪೇಸ್ ಎಂಜಿನಿಯರ್ ಸಾವು

Share This Article