ಮೈಸೂರು: ನಗರದ ಅರಮನೆಯಲ್ಲಿ ಈ ಹಿಂದೆ ವಿವಿಧ ರೀತಿಯ ಫೋಟೋ ಶೂಟ್ ಗಳು ನಡೆದಿವೆ. ಆದರೆ ಇದೇ ಮೊದಲ ಬಾರಿಗೆ ತುಂಬಾ ವಿಭಿನ್ನವಾದ ಫೋಟೋ ಶೂಟ್ ಅರಮನೆಯ ಮುಂಭಾಗದಲ್ಲಿ ನಡೆದಿದೆ.
ಕ್ಯಾಪ್ಟನ್ ಅರ್ಜುನ ಮತ್ತು ತಂಡದ ಆನೆಗಳಿಗೆ ಅರಮನೆ ಮುಂಭಾಗ ವಿಭಿನ್ನ ರೀತಿಯ ಫೋಟೋ ಶೂಟ್ ನಡೆದಿದೆ. ಆನೆಗಳು ಕ್ಯಾಮೆರಾಕ್ಕೆ ವಿವಿಧ ಭಂಗಿಯಲ್ಲಿ ಪೋಸ್ ನೀಡಿವೆ. ಸೊಂಡಿಲೆತ್ತಿ ಸಲ್ಯೂಟ್ ಮಾಡಿ ಫೋಟೋಗೆ ಪೋಸ್ ಕೊಟ್ಟಿವೆ. ಕೆಎಸ್‍ಟಿಡಿಸಿ ಬ್ರೌಚರ್ ಗಾಗಿ ಈ ಫೋಟೋ ಶೂಟ್ ನಡೆಸಲಾಗಿದೆ.
Advertisement
Advertisement
ಕರ್ನಾಟಕ ಪ್ರವಾಸಿ ತಾಣಗಳು ಹಾಗೂ ಕರ್ನಾಟಕ ಸಂಸ್ಕೃತಿ ಬಿಂಬಿಸುವ ಛಾಯಾಚಿತ್ರ ಬಳಸಿ ಬ್ರೌಚರ್ ಸಿದ್ಧಪಡಿಸಲಾಗುತ್ತಿದೆ. ಇದಕ್ಕಾಗಿ ಮೊದಲ ಬಾರಿಗೆ ಅರಮನೆ ಮುಂದೆ ಗಜಪಡೆ ನಿಲ್ಲಿಸಿ ಫೋಟೋ ಶೂಟ್ ಮಾಡಲಾಯಿತು. ಫೋಟೋ ಶೂಟ್‍ನಲ್ಲಿ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ 6 ಆನೆಗಳು ಭಾಗಿಯಾಗಿದ್ದವು. ಆನೆಗಳ ಮುಂದೆ ಮಾಡೆಲ್ ಗಳು, ಯಕ್ಷಗಾನ ಕಲಾವಿದರು, ಭರತ ನಾಟ್ಯ ಕಲಾವಿದರನ್ನ ನಿಲ್ಲಿಸಿ ಫೋಟೋ ಶೂಟ್ ಮಾಡಲಾಯಿತು. ಇಷ್ಟು ದಿನ ಅರಮನೆ ಮುಂದೆ ನವ ಜೋಡಿಗಳು ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದರು. ಇದೀಗ ದಸರಾ ಗಜಪಡೆಯು ಫೋಟೋ ಶೂಟ್ ನಲ್ಲಿ ಭಾಗಿಯಾಗಿರುವುದು ತುಂಬಾ ವಿಶೇಷವಾಗಿತ್ತು.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv