ಬೆಳಗಾವಿ: ಮೊನ್ನೆಯಿಂದ ನಾನು ಕೂಡ ಮಾಧ್ಯಮಗಳಲ್ಲಿ ನನ್ನ ಫೋಟೋ ನೋಡುತ್ತಿದ್ದೇನೆ. ಸಂತೋಷ್ ಪಾಟೀಲ್ ಅನ್ನುವ ವ್ಯಕ್ತಿಗೂ ನಮಗೂ ಯಾವುದೇ ರೀತಿ ಸಂಬಂಧಗಳು ಇಲ್ಲ ಎಂದು ಬೈಲಹೊಂಗಲದ ಡಾ. ವೇದಮೂರ್ತಿ ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ ಹೇಳಿದರು.
ಸಚಿವ ಈಶ್ವರಪ್ಪ ಹಾಗೂ ಸಂತೋಷ್ ಪಾಟೀಲ್ ಭೇಟಿ ವೇಳೆ ಆರಾದ್ರಿಮಠ ಫೋಟೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, 2021ರ ಜಾತ್ರಾ ಮಹೋತ್ಸವಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಚಾನಕ್ ಆಗಿ ಈಶ್ವರಪ್ಪ ಭೇಟಿಯಾಗಲು ಹೋಗಿದ್ದೆ. ನೀವು ಬೈಲಹೊಂಗಲ ಸ್ವಾಮೀಜಿ ಅಲ್ವಾ ಎಂದರು. ಹೌದು ಅಂದೆ. ಒಂದು ಫೋಟೋ ತೆಗೆಸಿಕೊಳ್ಳೋಣ ಅಂತಾ ಫೋಟೋ ತೆಗೆಸಿಕೊಂಡಿದ್ದೇನೆ ಎಂದರು. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆ ಯಾವಾಗ? – ಬಿಜೆಪಿಯ ನೈತಿಕತೆ ಎಲ್ಲಿ ಹೋಯ್ತು?
ಫೋಟೋ ತೆಗೆಸಿಕೊಂಡಿರೋದು ಮಾತ್ರ ನಮಗೆ ಗೊತ್ತು. ಅದಕ್ಕಿಂತ ಪೂರ್ವದಲ್ಲಿ ಸಂತೋಷ್ ಪಾಟೀಲ್‍ಗಾಗಲಿ ನಮಗಾಗಲಿ ಭೇಟಿ, ಸಂಭಾಷಣೆ ಇಲ್ಲ. ಮಾಧ್ಯಮಗಳಲ್ಲಿ ಒನ್‍ಸೈಡ್ ಫೋಟೋ ಮಾತ್ರ ಇದೆ. ಇನ್ನೊಂದೆಡೆ ನಮ್ಮ ಪುರೋಹಿತರು ಇರುವ ಫೋಟೋ ಕಟ್ ಮಾಡಿ ಮಾಧ್ಯಮಗಳಲ್ಲಿ ತೋರಿಸುತ್ತಿದ್ದಾರೆ. ಇದಕ್ಕೂ ನಮಗೂ ಸಂಬಂಧ ಇರದ ವಿಷಯ ಎಂದು ಹೇಳಿದರು. ಇದನ್ನೂ ಓದಿ: ಸಂತೋಷ್ ಕೇಸ್ ಹಿಂದೆಯೂ ‘ಮಹಾನಾಯಕ’ ಇದ್ದಾನೆ: ರಮೇಶ್ ಜಾರಕಿಹೊಳಿ