ಬೆಂಗಳೂರು: ನಗರದ ಕೇಂದ್ರ ನಗರಪಾಲಿಕೆಯು ಸೋಮವಾರ (ಜ.5) ನೇರ ಫೋನ್ ಇನ್ ಕಾರ್ಯಕ್ರಮ (Phone in programme) ಆಯೋಜಿಸಿದ್ದು, ಸಾರ್ವಜನಿಕರು ತಮ್ಮ ಏರಿಯಾ ಸಮಸ್ಯೆಗಳನ್ನು ತಿಳಿಸಿ, ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಸೋಮವಾರ ಸಂಜೆ 6 ರಿಂದ 7 ಗಂಟೆ ವರೆಗೆ ನೇರ ಫೋನ್ ಇನ್ ಕಾರ್ಯಕ್ರಮ ನಡೆಯಲಿದ್ದು, ಗ್ರಾಹಕರು ಸಹಾವಾಣಿ ಸಂ. 080-22975803 ಗೆ ಕರೆ ಮಾಡಿ ನೇರವಾಗಿ ಆಯುಕ್ತರಿಗೆ ಅಹವಾಲು ತಿಳಿಸಬಹುದಾಗಿದೆ.

ರಸ್ತೆ ಗುಂಡಿಗಳು ಮತ್ತು ರಸ್ತೆ ದುರಸ್ಥಿ ಕಾರ್ಯಗಳು, ಬೀದಿ ದೀಪಗಳ ನಿರ್ವಹಣೆ, ಕಸ ವಿಲೇವಾರಿ, ಒಣಗಿದ/ಅಪಾಯಕಾರಿ ಮರ/ಕೊಂಬೆಗಳ ಕತ್ತರಿಸುವಿಕೆ, ಉದ್ಯಾನವನಗಳ ನಿರ್ವಹಣೆ, ಇ-ಖಾತಾ ಸಂಬಂಧಿತ ವಿಷಯಗಳು, ಅನಧಿಕೃತ ಬ್ಯಾನರ್/ಪೋಸ್ಟರ್ ಗಳ ತೆರವು, ಪಾದಚಾರಿ ಮಾರ್ಗದ ನಿರ್ವಹಣೆ ಮತ್ತು ಒತ್ತುವರಿ ತೆರವು, ಚರಂಡಿ ಶುದ್ಧೀಕರಣ, ನಗರಪಾಲಿಕೆಯಿಂದ ಇನ್ನಿತರೆ ಮೂಲಭೂತ ಸೌಕರ್ಯಗಳ ಸಮಸ್ಯೆ ಕುರಿತು ಅಹವಾಲು ತಿಳಿಸಬಹುದು ರಾಜೇಂದ್ರ ಚೋಳನ್ ಹೇಳಿದ್ದಾರೆ.

