ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ಇಸ್ರೇಲ್ (Israel) ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರಿಗೆ ಕರೆ ಮಾಡಿದ್ದು, ಇಸ್ರೇಲ್ ಮತ್ತು ಹಮಾಸ್ (Hamas Militants) ನಡುವಿನ ಸಂಘರ್ಷದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ್ದು, ಇಲ್ಲಿಯವರೆಗೆ 1,600ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಈ ಕಷ್ಟದ ಸಮಯದಲ್ಲಿ ಭಾರತ ಇಸ್ರೇಲ್‌ನೊಂದಿಗೆ ನಿಂತಿದೆ ಎಂದು ಪ್ರಧಾನಿ ಮೋದಿ ನೆತನ್ಯಾಹು ಅವರಿಗೆ ಭರವಸೆ ನೀಡಿದ್ದಾರೆ. ಅಲ್ಲದೇ ಭಾರತ ಎಲ್ಲಾ ರೀತಿಯ ಭಯೋತ್ಪಾದನೆಯನ್ನು (Terrorism) ಬಲವಾಗಿ ಖಂಡಿಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಹಮಾಸ್ ಉಗ್ರರ ನಡೆಗೆ ಮೋದಿ ಖಂಡನೆ- ಇಸ್ರೇಲ್ ಪರ ನಿಂತ ಭಾರತ
Advertisement
I thank Prime Minister @netanyahu for his phone call and providing an update on the ongoing situation. People of India stand firmly with Israel in this difficult hour. India strongly and unequivocally condemns terrorism in all its forms and manifestations.
— Narendra Modi (@narendramodi) October 10, 2023
Advertisement
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ (X) ನೆತನ್ಯಾಹು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ದೂರವಾಣಿ ಕರೆ (Phone Call) ಮಾಡಿದ್ದಕ್ಕಾಗಿ ಮತ್ತು ಅಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಕುರಿತು ಅಪ್ಡೇಟ್ ಒದಗಿಸಿದ್ದಕ್ಕಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಕಷ್ಟದ ಸಮಯದಲ್ಲಿ ಭಾರತದ ಜನರು ಇಸ್ರೇಲ್‌ನೊಂದಿಗೆ ದೃಢವಾಗಿ ನಿಂತಿದ್ದಾರೆ. ಭಾರತವು ಭಯೋತ್ಪಾದನೆಯನ್ನು ಬಲವಾಗಿ ಮತ್ತು ಸಂದಿಗ್ಧವಾಗಿ ಖಂಡಿಸುತ್ತದೆ ಎಂದು ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಪ್ಯಾಲೆಸ್ಟೈನ್ ಬೆಂಬಲಿಸಿ ನಿರ್ಣಯ ಕೈಗೊಂಡ ಕಾಂಗ್ರೆಸ್
Advertisement
Advertisement
ಪ್ರಧಾನಿ ಮೋದಿ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರತದ ಜನರಿಂದ ಹಮಾಸ್ ಉಗ್ರರ ಪೈಶಾಚಿಕ ರಕ್ಕಸ ವರ್ತನೆಗೆ ವಿರೋಧ ವ್ಯಕ್ತವಾಗಿದೆ. ಭಾರತೀಯರ ಟ್ವೀಟ್ ಮಹಾಮಳೆಗೆ ಇಸ್ರೇಲ್ ಕೂಡ ಭಾವುಕವಾಗಿದೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ಜೊತೆ ನಿಲ್ಲೋಣ ಎನ್ನುವ ಸಂದೇಶವನ್ನು ಭಾರತೀಯರು ನೀಡಿದ್ದು, ಭಯೋತ್ಪಾದನೆಯ ಹಾಗೂ ಮತಾಂಧತೆಯ ವಿರುದ್ಧ ಹೋರಾಡುವಂತೆ ಕರೆ ನೀಡಲಾಗಿದೆ. ‘ವಿ ಆರ್ ವಿತ್ ಇಸ್ರೇಲ್’ ಕ್ಯಾಂಪೇನ್ ಮೂಲಕ ಭಾರತೀಯರಿಂದ ಇಸ್ರೇಲ್ ಪರ ಧ್ವನಿ ಎತ್ತಲಾಗಿದೆ. ಇದನ್ನೂ ಓದಿ: ಇಸ್ರೇಲ್‍ನಲ್ಲಿ ಸಿಲುಕಿದ್ದ 18,000 ಭಾರತೀಯರು ಸೇಫ್
ಪ್ಯಾಲೆಸ್ಟೈನ್ ಹಮಾಸ್ ಉಗ್ರಗಾಮಿಗಳು ಗಾಜಾಪಟ್ಟಿಯಿಂದ ಆಪರೇಷನ್ ಅಲ್-ಅಕ್ಸಾ ಫ್ಲಡ್ ಹೆಸರಿನಲ್ಲಿ ನಿದ್ದೆಯಲ್ಲಿ ಮಲಗಿದ್ದ ಇಸ್ರೇಲಿಗರ ಮೇಲೆ 5 ಸಾವಿರ ರಾಕೆಟ್ ಮಳೆಗರೆದಿದ್ದಾರೆ. ಇಸ್ರೇಲ್‌ನ ದಕ್ಷಿಣ ಇಸ್ರೇಲ್, ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಅಪಾರ ಸಾವು-ನೋವಾಗಿದೆ. ಈ ದಾಳಿಗೆ ಪ್ರತಿಯಾಗಿ ಇಸ್ರೇಲ್ ಸೇನೆ ಕೂಡ ಗಾಜಾ ಪಟ್ಟಿ ಮೇಲೆ ವೈಮಾನಿಕ ದಾಳಿ ಮಾಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಕ್ರೋಶಗೊಂಡಿದ್ದು, ಸ್ವೋರ್ಡ್ ಆಫ್ ಐರನ್ ಹೆಸರಿನಲ್ಲಿ ಆಪರೇಷನ್ ಆರಂಭಿಸಿ, ಪ್ಯಾಲೆಸ್ತೀನ್‌ನ ಹಮಾಸ್ ಮೇಲೆ ಸಮರ ಸಾರಿದ್ದಾರೆ. ಇದನ್ನೂ ಓದಿ: ಕಷ್ಟದ ಸಮಯದಲ್ಲಿ ಇಸ್ರೇಲ್ ಪರ ಒಗ್ಗಟ್ಟಿನಿಂದ ನಿಲ್ಲುತ್ತೇವೆ: ನರೇಂದ್ರ ಮೋದಿ
Web Stories