ಮನಿಲ: ಪರೀಕ್ಷೆಯ (Exam) ಸಮಯದಲ್ಲಿ ನಕಲು (Copy) ಮಾಡುವುದು ವಿದ್ಯಾರ್ಥಿಗಳ (Students) ಸಾಮಾನ್ಯ ಅಭ್ಯಾಸವಾಗಿದೆ. ಇಲ್ಲೊಂದು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡಬಾರದು ಎಂದು ಅವರಿಗೆ ಚಿತ್ರ ವಿಚಿತ್ರ ಕಿರೀಟ (Headgears) ಹಾಕಿಸಿದ್ದಾರೆ. ಈ ರೀತಿ ವಿದ್ಯಾರ್ಥಿಗಳಿಗೆ ವಿಭಿನ್ನ ರೀತಿಯಲ್ಲಿ ಪರೀಕ್ಷೆ ಬರೆಸಿರುವ ಫೋಟೋಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಫಿಲಿಪೈನ್ಸ್‌ನ ಬಿಕಾಲ್ ಯೂನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ವಿದ್ಯಾರ್ಥಿಗಳಿಗೆ ಈ ರೀತಿಯಾಗಿ ಕಿರೀಟಗಳನ್ನು ಧರಿಸಿ ಪರೀಕ್ಷೆ ಬರೆಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡಬಾರದು ಎಂದಾದರೆ ಇದೊಂದು ಒಳ್ಳೆಯ ಹಾಗೂ ವಿಭಿನ್ನವಾದ ಉಪಾಯವಾಗಿದೆ ಎಂದು ಅಲ್ಲಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪ್ರಾಧ್ಯಾಪಕ ಮೇರಿ ಜಾಯ್ ಮಂಡನೆ ಒರ್ಟಿಜ್ ಹೇಳಿದ್ದಾರೆ.
Advertisement
Advertisement
ವರದಿಗಳ ಪ್ರಕಾರ ಒರ್ಟಿಜ್ ತನ್ನ ವಿದ್ಯಾರ್ಥಿಗಳಳಿಗೆ ಪರೀಕ್ಷೆಗಾಗಿ ಕಿರೀಟಗಳನ್ನು ತಾವೇ ತಯಾರಿಸುವಂತೆ ಕೇಳಿದ್ದಾರೆ. ಬಳಿಕ ಪರೀಕ್ಷೆಗೆ ತಯಾರಾಗಿ ಬಂದ ವಿದ್ಯಾರ್ಥಿಗಳು ತಾವೇ ತಯಾರಿಸಿದ ಭಿನ್ನ ವಿಭಿನ್ನ ರೀತಿಯ ಕಿರೀಟಗಳೊಂದಿಗೆ ಹಾಜರಾಗಿದ್ದಾರೆ. ಪರೀಕ್ಷೆಯ ಒತ್ತಡದ ನಡುವೆಯೂ ವಿದ್ಯಾರ್ಥಿಗಳು ತಮ್ಮ ಮಾತಿಗೆ ಬೆಲೆ ನೀಡಿ, ಕಿರೀಟಗಳನ್ನು ತಾವೇ ತಯಾರಿಸಿ ಬಂದಿದ್ದಕ್ಕೆ ಪ್ರಾಧ್ಯಾಪಕರು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾನು ನನ್ನ ತಂದೆ ಬಗ್ಗೆ ಮಾತ್ರ ಯೋಚಿಸುತ್ತೇನೆ – ಗ್ರೌಂಡ್‌ನಲ್ಲೇ ಕಣ್ಣೀರಿಟ್ಟ ಪಾಂಡ್ಯ
Advertisement
Advertisement
ಕೆಲ ವರ್ಷಗಳ ಹಿಂದೆ ಥೈಲ್ಯಾಂಡ್‌ನಲ್ಲಿಯೂ ವಿದ್ಯಾರ್ಥಿಗಳು ನಕಲು ಮಾಡಬಾರದು ಎಂದು ಇದೇ ರೀತಿಯ ಉಪಾಯ ಮಾಡಲಾಗಿತ್ತು. ಬ್ಯಾಂಕಾಕ್‌ನ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ಕಿರೀಟಗಳನ್ನು ಧರಿಸಿ ಪರೀಕ್ಷೆ ಬರೆದಿದ್ದ ಫೋಟೋಗಳು ವೈರಲ್ ಆಗಿದ್ದವು. ಇದನ್ನೂ ಓದಿ: ದೀಪಾವಳಿ ಎಂದರೆ ಭಯೋತ್ಪಾದನೆಯ ಅಂತ್ಯದ ಹಬ್ಬ: ಮೋದಿ