ನವದೆಹಲಿ: ಲಗೇಜ್ ಶುಲ್ಕ ತಪ್ಪಿಸಲು ಯುವತಿಯೊಬ್ಬಳು 2.5 ಕೆಜಿ ಬಟ್ಟೆ ಧರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ವಿಮಾನದಲ್ಲಿ ಪ್ರಯಾಣಿಸುವಾಗ 7 ಕೆಜಿ ಭಾರವಿರುವ ಲಗೇಜ್ ತೆಗೆದುಕೊಂಡು ಹೋಗಬೇಕು. ಒಂದು ವೇಳೆ ಹೆಚ್ಚುವರಿ ಲಗೇಜ್ ತೆಗೆದುಕೊಂಡು ಹೋಗಬೇಕಾದರೆ ಪ್ರಯಾಣಿಕರು ಅದಕ್ಕೆ ಶುಲ್ಕ ಪಾವತಿಸಬೇಕು. ಈ ಹೆಚ್ಚುವರಿ ಶುಲ್ಕದಿಂದ ತಪ್ಪಿಸಿಕೊಳ್ಳಲು ಯುವತಿ ಉಪಯೋಗಿಸಿದ ಪ್ಲ್ಯಾನ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
Advertisement
ಫಿಲಿಪೈನ್ಸ್‌ನ ಯುವತಿ ಜೆಲ್ ರೊಡ್ರಿಗಸ್, ಅಕ್ಟೋಬರ್ 2ರಂದು ಒನ್ ಏರ್ ಲೈನ್ಸ್‌ನಲ್ಲಿ ನಡೆದ ಪ್ರಸಂಗವನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೆಲ್ ರೊಡ್ರಿಗಸ್ 9 ಕೆಜಿ ತೂಕದ ಲಗೇಜ್ ಹಿಡಿದು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ವಿಮಾನಯಾನ ಸಿಬ್ಬಂದಿ, ಲಗೇಜ್ 7 ಕೆಜಿ ಗಿಂತ ಹೆಚ್ಚು ಭಾರವಾಗಿದೆ. ಹೀಗಾಗಿ ಹೆಚ್ಚುವರಿ ಶುಲ್ಕ ಪಾವತಿಸಬೇಕು ಎಂದು ತಿಳಿಸಿದ್ದರು.
Advertisement
Advertisement
ಹೆಚ್ಚುವರಿ ಶುಲ್ಕ ನೀಡಬಾರದು ಎಂಬ ಕಾರಣಕ್ಕಾಗಿ ಜೆಲ್ ರೊಡ್ರಿಗಸ್, ತಮ್ಮ ಮೈಮೇಲೆ ಬರೋಬ್ಬರಿ 2.5 ಕೆಜಿ ಬಟ್ಟೆ ಹಾಕಿಕೊಂಡಿದ್ದಾರೆ. ಬಳಿಕ ತಾನು ಹಾಕಿಕೊಂಡಿರುವ ಬಟ್ಟೆಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣ ಫೇಸ್‍ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಕೇವಲ 2 ಕೆಜಿ ಬಟ್ಟೆಗೆ ನಾನು ಹೆಚ್ಚುವರಿಯಾಗಿ ಶುಲ್ಕ ನೀಡಲು ಇಷ್ಟಪಡುವುದಿಲ್ಲ. ಹೀಗಾಗಿ ಈ ರೀತಿಯಾಗಿ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
Advertisement
ಜೆಲ್ ರೊಡ್ರಿಗಸ್ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ಫೋಟೋವನ್ನು ಕೆಲವೇ ಗಂಟೆಗಳಲ್ಲಿ ಸಾವಿರಾರು ಜನರು ಶೇರ್ ಮಾಡಿದ್ದಾರೆ. ಕೆಲ ನೆಟ್ಟಿನಗರು ತಮ್ಮ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.