ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್ (Phil Salt) 105 ಮೀಟರ್ ಸಿಕ್ಸರ್ ಸಿಡಿಸುವ ಮೂಲಕ ಈ ಆವೃತ್ತಿಯ ಐಪಿಎಲ್‌ನಲ್ಲಿ (IPL 2025) ವಿಶೇಷ ಸಾಧನೆ ಮಾಡಿದ್ದಾರೆ.
105M SIX OF PHIL SALT. 🤯
– The reply by Siraj was ice cold. 🥶 pic.twitter.com/iufczfbCpS
— Mufaddal Vohra (@mufaddal_vohra) April 2, 2025
ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 169 ರನ್ ಗಳಿಸಿ, ಎದುರಾಳಿಗೆ 170 ರನ್‌ಗಳ ಗುರಿ ನೀಡಿದೆ. ಒಂದೆಡೆ ವಿಕೆಟ್ ಕಳೆದುಕೊಂಡ ಹೊರತಾಗಿಯೂ ಮತ್ತೊಂದೆಡೆ ರನ್ ಕಲೆಹಾಕುತ್ತಾ ಸಾಗಿದ್ದ ಆರ್‌ಸಿಬಿ ಪರ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಸ್ಫೋಟಕ ಪ್ರದರ್ಶನಕ್ಕಿಳಿದಿದ್ದರು. ಇದನ್ನೂ ಓದಿ: ಮೈದಾನದಲ್ಲೇ ಧೀಮಾಕು ತೋರಿಸಿದ ದಿಗ್ವೇಶ್ ರಥಿಗೆ ಬಿತ್ತು ಭಾರೀ ದಂಡ
ಪವರ್ ಪ್ಲೇನ 5ನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ (Mohammed Siraj) ಬೌಲಿಂಗ್‌ಗೆ ಬಂದಾಗ ಸ್ಫೋಟಕವಾಗಿ ಅಬ್ಬರಿಸುತ್ತಿದ್ದ ಸಾಲ್ಟ್ 3ನೇ ಎಸೆತದಲ್ಲೇ ಭರ್ಜರಿ 105 ಮೀಟರ್ ಸಿಕ್ಸರ್ ಬಾರಿಸಿದ್ರು. ಈ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಅತಿದೊಡ್ಡ ಸಿಕ್ಸರ್ ಸಿಡಿಸಿದ 2ನೇ ಆಟಗಾರ ಎಂಬ ವಿಶೇಷ ಸಾಧನೆಗೂ ಪಾತ್ರರಾದರು. ಇದಕ್ಕೆ ಪ್ರಯುತ್ತರವಾಗಿ ಮರು ಎಸೆತದಲ್ಲೇ ವಿಕೆಟ್‌ಕಿತ್ತು ಸಾಲ್ಟ್‌ಗೆ ಸಿರಾಜ್ ಪೆವಿಲಿಯನ್ ಹಾದಿ ತೋರಿಸಿದ್ರು. ಇದನ್ನೂ ಓದಿ: ಆರ್‌ಸಿಬಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ.. ಹೂಂ ಅಂತೀಯಾ: ಕನ್ನಡದಲ್ಲಿ ಸೊಗಸಾಗಿ ಹಾಡಿದ ಪಡಿಕ್ಕಲ್
ಈ ಆವೃತ್ತಿಯಲ್ಲಿ ಅತಿದೊಡ್ಡ ಸಿಕ್ಸರ್ ಸಿಡಿಸಿದ ಟಾಪ್-5 ಬ್ಯಾಟರ್ಸ್
* ಟ್ರಾವಿಸ್ ಹೆಡ್ – ಎಸ್‌ಆರ್‌ಹೆಚ್ – 105 ಮೀಟರ್
* ಫಿಲ್ ಸಾಲ್ಟ್ – ಆರ್‌ಸಿಬಿ – 105 ಮೀಟರ್
* ಅನಿಕೇತ್ ವರ್ಮಾ – ಎಸ್‌ಆರ್‌ಹೆಚ್ – 102 ಮೀಟರ್
* ಟ್ರಿಸ್ಟನ್ ಸ್ಟಬ್ಸ್ – ಡೆಲ್ಲಿ – 98 ಮೀಟರ್
* ನಿಕೋಲಸ್ ಪೂರನ್ – ಲಕ್ನೋ – 97 ಮೀಟರ್