ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕ್‌ ಮಹಾನ್‌ ಪಾಲುದಾರ; ಪಾಕ್‌ ಹೊಗಳಿದ ಅಮೆರಿಕ

Public TV
1 Min Read
USA Pakistan

– ಭಾರತ – ಪಾಕಿಸ್ತಾನ ಎರಡರೊಂದಿಗೂ ಸಂಬಂಧ ಕಾಪಾಡಿಕೊಳ್ಳುವುದಾಗಿ ಪ್ರತಿಪಾದನೆ

ವಾಷಿಂಗ್ಟನ್‌: ಭಯೋತ್ಪಾದನೆ (Terrorism) ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಅದ್ಭುತ ಪಾಲುದಾರ ಎಂದು ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ನ ಕಮಾಂಡರ್ ಜನರಲ್ ಮೈಕೆಲ್ ಕುರಿಲ್ಲಾ (Michael Kurilla) ಬಣ್ಣಿಸಿದ್ದಾರೆ.

ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್‌ ಮಾರ್ಷಲ್‌ ಅಸೀಮ್‌ ಮುನೀರ್‌ (Asim Munir) ಅವರನ್ನು ಆಹ್ವಾನಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದಾಗಿದ್ದಾರೆ. ಈ ನಡುವೆ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್-ಖೋರಾಸನ್) ಉಗ್ರರನ್ನು ಸದೆಬಡಿಯುವಲ್ಲಿ ಪಾಕಿಸ್ತಾನ (Pakistan) ನೀಡಿದ ಸಹಕಾರವನ್ನು ಅಮೆರಿಕ ಮಿಲಿಟರಿ ಕಮಾಂಡರ್‌ ಹಾರಿ ಹೊಗಳಿದ್ದಾರೆ.

Asim Munir

ಅಮೆರಿಕದ ಸಂಸತ್ತಿನಲ್ಲಿ ಸಶಸ್ತ್ರ ಸೇವೆಗಳ ಸಮಿತಿ ವಿಚಾರಣೆ ಸಂದರ್ಭದಲ್ಲಿ ಕುರಿಲ್ಲಾ ಮಾತನಾಡಿದ್ದು, ಇಸ್ಲಾಮಾಬಾದ್‌ ಪಾತ್ರವನ್ನು ಹಾಡಿಹೊಗಳಿದ್ದಾರೆ. ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಭಯೋತ್ಪಾದನೆ ಪ್ರಾಯೋಜಿತ ಪಾಕ್‌ ಮುಖವಾಡವನ್ನು ಬಯಲುಮಾಡಲು ಭಾರತ ಸರ್ವಪಕ್ಷ ನಿಯೋಗವನ್ನು ವಿದೇಶಗಳಿಗೆ ಕಳುಹಿಸಿದೆ. ಈ ಹೊತ್ತಿನಲ್ಲೇ ಪಾಕಿಸ್ತಾನವನ್ನು ಅಮೆರಿಕ ಮಿಲಿಟರಿ ಅಧಿಕಾರಿ ಹಾಡಿಹೊಗಳಿದ್ದಾರೆ. ಅಲ್ಲದೇ ನಾವು ಪಾಕಿಸ್ತಾನ ಮತ್ತು ಭಾರತ ಎರಡೂ ದೇಶಗಳೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವುದಾಗಿಯೂ ಪ್ರತಿಪಾದಿಸಿದ್ದಾರೆ.

ಪಾಕಿಸ್ತಾನ ಪ್ರಸ್ತುತ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ, ಹಾಗೂ ಭಯೋತ್ಪಾದನೆ ನಿಗ್ರಗದಲ್ಲಿ ಅಭೂತಪೂರ್ವ ಪಾಲುದಾರನಾಗಿದೆ ಎಂದರಲ್ಲದೇ ನವದೆಹಲಿ ಮತ್ತು ಇಸ್ಲಾಮಾಬಾದ್/ರಾವಲ್ಪಿಂಡಿ ಎರಡರೊಂದಿಗೂ ವಾಷಿಂಗ್ಟನ್ ಬಲವಾದ ಸಂಬಂಧ ಹೊಂದಿರಬೇಕು. ಭಯೋತ್ಪಾದನೆಯ ವಿರುದ್ಧದ ಅಮೆರಿಕದ ಹೋರಾಟಕ್ಕೆ ಭಾರತ, ಪಾಕಿಸ್ತಾನ ಎರಡೂ ರಾಷ್ಟ್ರಗಳ ನೆರವು ಬೇಕೆಂದು ಮನವಿ ಮಾಡಿದ್ದಾರೆ.

Shehbaz Sharif Asif munir

ಅಫ್ಘಾನಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಐಸಿಸ್-ಖೋರಾಸನ್, ಅಮೆರಿಕದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ವಿವಿಧೆಡೆ ಭಯೋತ್ಪಾದಕ ದಾಳಿ ನಡೆಸುತ್ತಿರುವ ಸಕ್ರೀಯ ಸಂಘಟನೆಗಳಲ್ಲಿ ಒಂದಾಗಿದೆ. ಆದ್ರೆ ಇಸ್ಲಾಮಾಬಾದ್ ಐಸಿಸ್ ಹೋರಾಟಗಾರರನ್ನು ಗುರಿಯಾಗಿಸಲು ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ಡಜನ್ಗಟ್ಟಲೆ ಕಾರ್ಯಾಚರಣೆ ನಡೆಸಿದೆ ಎಂದು ಶ್ಲಾಘಿಸಿದ್ದಾರೆ.

ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡಲು ಭಾರತವು ರಾಜತಾಂತ್ರಿಕ ದಾಳಿ ನಡೆಸುತ್ತಿರುವ ಹೊತ್ತಿನಲ್ಲಿ ಕುರಿಲ್ಲಾ ಅವರ ಹೇಳಿಕೆಗಳು ಬಂದಿವೆ.

Share This Article