ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ (Bihar Assembly Election) 2ನೇ ಹಂತದ ಬಹಿರಂಗ ಪ್ರಚಾರಕ್ಕೆ (Public Campaign) ಇಂದು ತೆರೆ ಬಿದ್ದಿದೆ. ನಾಳೆ ಮನೆ ಮನೆ ಪ್ರಚಾರ ನಡೆಯಲಿದ್ದು, ನ.11ರಂದು 2ನೇ ಹಂತದ ವೋಟಿಂಗ್ ನಡೆಯಲಿದೆ.
2ನೇ ಹಂತದಲ್ಲಿ 20 ಜಿಲ್ಲೆ 122 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 1,302 ಅಭ್ಯರ್ಥಿಗಳು ಕಣದಲ್ಲಿದ್ದು, 3.7 ಕೋಟಿ ಮತದಾರರು ಭವಿಷ್ಯ ಬರೆಯಲಿದ್ದಾರೆ. ನವೆಂಬರ್ 14ರ ಮಧ್ಯಾಹ್ನದ ಹೊತ್ತಿಗೆ ಬಿಹಾರ ಗದ್ದುಗೆ ಯಾರ ಪಾಲಾಗಲಿದೆ ಎಂಬ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ. ಇದನ್ನೂ ಓದಿ: ತೇಜಸ್ವಿ ಸೂರ್ಯ & ಅಣ್ಣಾಮಲೈರಿಂದ ಗೋವಾದಲ್ಲಿ ಐರನ್‌ಮ್ಯಾನ್ 70.3 ಪೂರ್ಣ – ಮೋದಿ ಶ್ಲಾಘನೆ
243 ಕ್ಷೇತ್ರಗಳ ಬಿಜೆಪಿ ಮತ್ತು ಜೆಡಿಯು ತಲಾ 101, ಚಿರಾಗ್ ಪಾಸ್ವಾನ್ ಅವರ ಪಾರ್ಟಿಯು 28 ಸ್ಥಾನದಲ್ಲಿ ಸ್ಪರ್ಧಿಸಿದೆ. ಇನ್ನು, ಮಹಾಘಟಬಂಧನ್‌ನಲ್ಲಿ ಆರ್‌ಜೆಡಿ 143, ಕಾಂಗ್ರೆಸ್ 61 ಸ್ಥಾನದಲ್ಲಿ ಸ್ಪರ್ಧಿಸಿದೆ. ಕೊನೇ ದಿನದ ಪ್ರಚಾರದ ಕಣದಲ್ಲಿ ಅಮಿತ್ ಶಾ, ಯೋಗಿ ಆದಿತ್ಯನಾಥ್, ರಾಜನಾಥ್ ಸಿಂಗ್ ಅಬ್ಬರದ ಪ್ರಚಾರ ಮಾಡಿದ್ದಾರೆ. ಇತ್ತ ರಾಹುಲ್ ಗಾಂಧಿ ಕೂಡ ಕೊನೇ ದಿನದ ಕಸರತ್ತು ನಡೆಸಿದರು. ಇದನ್ನೂ ಓದಿ: ಐಸಿಸ್ ಉಗ್ರ, ವಿಕೃತ ಕಾಮಿಗೆ ಸೆಂಟ್ರಲ್ ಜೈಲಲ್ಲಿ ರಾಜಾತಿಥ್ಯ – ತಪ್ಪು ಮಾಡಿದವರ ಮೇಲೆ ಕಠಿಣ ಕ್ರಮಕ್ಕೆ ಸಿಎಂ ಸೂಚನೆ!

