Connect with us

Latest

ಹಾಸ್ಟೆಲಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಫಾರ್ಮಸಿ ವಿದ್ಯಾರ್ಥಿನಿ ಪತ್ತೆ

Published

on

– ಕಿಟಿಕಿಯಿಂದ ರೂಮ್‍ಮೇಟ್ ನೋಡಿದಾಗ ಪ್ರಕರಣ ಬೆಳಕಿಗೆ

ಹೈದರಾಬಾದ್: ಫಾರ್ಮಸಿ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ನಗರದ ಚೈತನ್ಯಪುರಿಯಲ್ಲಿ ನಡೆದಿದೆ.

ತೇಜಸ್ವಿನಿ (27) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಅಲ್ಕಪುರಿಯಲ್ಲಿರುವ ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ತೇಜಸ್ವಿನಿ ಯಾದಾದ್ರಿ-ಭೋಂಗೀರ್ ಜಿಲ್ಲೆಯ ಮೂಲದವಳಾಗಿದ್ದು, ಎಲ್‍ಬಿ ನಗರದ ಖಾಸಗಿ ಕಾಲೇಜಿನಲ್ಲಿ ಫಾರ್ಮಸಿ ವ್ಯಾಸಂಗ ಮಾಡುತ್ತಿದ್ದಳು. ಚೈತನ್ಯಪುರಿಯ ಅಲ್ಕಪುರಿಯಲ್ಲಿರುವ ಹಾಸ್ಟೆಲ್‍ನಲ್ಲಿ ಉಳಿದುಕೊಂಡಿದ್ದಳು.

ತೇಜಸ್ವಿನಿ ಶನಿವಾರ ಮಧ್ಯಾಹ್ನ ತನ್ನ ರೂಮಿಗೆ ಹೋಗಿ ಲಾಕ್ ಮಾಡಿಕೊಂಡಿದ್ದಾಳೆ. ತುಂಬಾ ಸಮಯವಾದರೂ ರೂಮಿನಿಂದ ಹೊರಬರಲಿಲ್ಲ. ನಂತರ ಆಕೆಯ ರೂಮ್‍ಮೇಟ್ ಬಾಗಿಲು ಬಡಿದಿದ್ದಾಳೆ. ಆದರೆ ತೇಜಸ್ವಿನಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಕೊನೆಗೆ ರೂಮ್‍ಮೇಟ್ ಕಿಟಕಿನಿಂದ ನೋಡಿದಾಗ ತೇಜಸ್ವಿನಿ ಸೀಲಿಂಗ್ ಫ್ಯಾನ್‍ಗೆ ದುಪ್ಪಟ್ಟಾದಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ರೂಮ್‍ಮೇಟ್ ಹಾಸ್ಟೆಲ್ ವಾರ್ಡನ್‍ಗೆ ತಿಳಿಸಿದ್ದಾಳೆ. ನಂತರ ಅವರು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಮಾಹಿತಿ ತಿಳಿದು ತಕ್ಷಣ ಚೈತನ್ಯಪುರಿ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆದರೆ ತೇಜಸ್ವಿನಿ ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.

Click to comment

Leave a Reply

Your email address will not be published. Required fields are marked *