– ಫಲಪೂಜಾ ಮಹೋತ್ಸವದ ವಿಶೇಷತೆ ಏನು?
ಬಳ್ಳಾರಿ: ದಕ್ಷಿಣ ಕಾಶಿ ಹಂಪಿಯಲ್ಲಿ ಅದ್ಧೂರಿ ಫಲಪೂಜಾ ಮಹೋತ್ಸವ ನಡೆಯಿತು. ಪಂಪಾಂಬಿಕೆ- ಶ್ರೀ ವಿರೂಪಾಕ್ಷನ ನಿಶ್ಚಿತಾರ್ಥವೇ ಫಲಪೂಜಾ ಮಹೋತ್ಸವ ಆಗಿದ್ದು, ಫಲಪೂಜಾ ಮಹೋತ್ಸವದಲ್ಲಿ (Phala Pooja Mahotsav) ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿ ಶ್ರೀವಿರೂಪಾಕ್ಷನ ಕೃಪೆಗೆ ಪಾತ್ರರಾದರು.
ವಿಜಯನಗರ (Vijayanagara) ಜಿಲ್ಲೆ ಹೊಸಪೇಟೆ ತಾಲೂಕಿನ ಐತಿಹಾಸಿಕ ತಾಣ ಹಂಪಿಯ ಶ್ರೀ ವಿರೂಪಾಕ್ಷ ದೇಗುಲದಿಂದ ಫಲಪೂಜಾ ಮಹೋತ್ಸವದ ಮೆರವಣಿಗೆ ಸಾಗಿತ್ತು. ಆ ಬಳಿಕ ಕೊದಂಡರಾಮ ದೇಗುಲದಲ್ಲಿ ಫಲಪೂಜಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ಇದನ್ನೂ ಓದಿ: ಹೊಸ ವರ್ಷದ ಹಿನ್ನೆಲೆ ಬೆಂಗಳೂರು ಪೊಲೀಸರು ಅಲರ್ಟ್ – ಬಾಂಬ್ ಸ್ಕ್ವಾಡ್ ಸಿಬ್ಬಂದಿಗೆ ವಿಶೇಷ ತರಬೇತಿ
ದೇವರುಗಳಿಗೆ ನಿಶ್ಚಿತಾರ್ಥ ಮಾಡೋ ವಿಶಿಷ್ಟ ಕಾರ್ಯಕ್ರಮ ಇದಾಗಿದ್ದು, ಇದರಲ್ಲಿ ಶ್ರೀ ವಿರೂಪಾಕ್ಷ- ಪಂಪಾಂಬಿಕೆಯ ನಿಶ್ಚಿತಾರ್ಥ ನಡೆಸಲಾಗುತ್ತೆ. ಕೊರೆಯುವ ಚಳಿಯನ್ನು ಲೆಕ್ಕಿಸದೇ ವಿಜಯನಗರ, ಬಳ್ಳಾರಿ, ಕೊಪ್ಪಳ ಸೇರಿದಂತೆ ನೇರೆಯ ರಾಜ್ಯ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಫಲಪೂಜಾ ಮಹೋತ್ಸವದಲ್ಲಿ ಭಾಗಿಯಾಗಿದ್ರು. ಇದನ್ನೂ ಓದಿ: ದೇಶಾದ್ಯಂತ 6ನೇ ದಿನಕ್ಕೆ ಕಾಲಿಟ್ಟ ಇಂಡಿಗೋ ಸಮಸ್ಯೆ – ಬೆಂಗಳೂರಲ್ಲಿ 50ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು
ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ವಿಜಯನಗರ ಎಸ್ಪಿ ಎಸ್.ಜಾಹ್ನವಿ, ಡಿವೈಎಸ್ಪಿ ಡಾ. ಮಂಜುನಾಥ್ ತಳವಾರ ನೇತೃತ್ವದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಇದನ್ನೂ ಓದಿ: ಗೋವಾ ನೈಟ್ ಕ್ಲಬ್ ಅಗ್ನಿ ದುರಂತ – ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ



