ಬೆಂಗಳೂರು: ನಗರದಲ್ಲಿ ಮತ್ತೊಬ್ಬ ಕಾಮುಕನ ಕಾಟ ಶುರುವಾಗಿದ್ದು, ಅಪರಿಚಿತ ವ್ಯಕ್ತಿಯೊಬ್ಬ ರಾತ್ರೋರಾತ್ರಿ ಪಿಜಿಗೆ ನುಗ್ಗಿ ಭಯವಿಲ್ಲದೇ ಯುವತಿಯರ ಮೈ-ಕೈ ಸವರಿ ಅಪ್ಪಿಕೊಳ್ಳುತ್ತಾನೆ.
ಬೆಂಗಳೂರಿನ ಶಾಂತಿನಗರ ಹೃದಯಭಾಗದ ಬಿಟಿಎಸ್ ರಸ್ತೆಯಲ್ಲಿರುವ ಪಿಜಿಯಲ್ಲಿ ಅಕ್ಟೋಬರ್ 2ರಂದು ಈ ಘಟನೆ ನಡೆದಿದೆ. ಹೆಸರೇ ಇಲ್ಲದ ಈ ಪಿಜಿಯಲ್ಲಿ 200ಕ್ಕೂ ಹೆಚ್ಚು ಮಂದಿ ಯುವತಿಯರು ಇದ್ದಾರೆ. ಈ ಪಿಜಿಯನ್ನು ನಡೆಸಬೇಕಾದರೆ ಪಾಲಿಸಬೇಕಾದ ನಿಯಮಗಳನ್ನು ಕೂಡ ಮಾಲೀಕ ಗಾಳಿಗೆ ತೂರಿದ್ದಾನೆ.
ಈ ಪಿಜಿಯಲ್ಲಿ ನಡೆದ ಘಟನೆಯ ಬಗ್ಗೆ ಯುವತಿಯೊಬ್ಬಳು ಹೇಳಿದ್ದು, “ನಾನಿರುವ ಪಿಜಿಯಲ್ಲಿ ಒಬ್ಬ ವ್ಯಕ್ತಿ ಬರುತ್ತಾನೆ. ಅವನು ಹೇಗೆ ಬರುತ್ತಾನೆ, ಹೇಗೆ ಹೋಗುತ್ತಾನೆ ಸ್ವಲ್ಪವೂ ಗೊತ್ತಾಗಲ್ಲ. ನಮ್ಮ ಸ್ನೇಹಿತೆ ಮಲಗಿರುತ್ತಾಳೆ. ಮೊದಲು ಆಕೆಯ ಮೈ-ಕೈ ಮುಟ್ಟುತ್ತಾನೆ. ಬಳಿಕ ನನ್ನ ಪಕ್ಕ ಬಂದು ಮೈ ಸವರುತ್ತಾನೆ. ನಾವು ಕಿರುಚಾಡಿದ್ರೂ ಭಯಗೊಂಡು ಓಡಿ ಹೋಗುವುದಿಲ್ಲ. ರಾಜಾರೋಷವಾಗಿ ನಿಧಾನವಾಗಿ ಹೋಗುತ್ತಾನೆ ಎಂದು ಯುವತಿ ಹೇಳಿದ್ದಾರೆ.
ಮೊದಲು ನಮಗೆ ಭಯವಾಗಿತ್ತು. ಅದಕ್ಕೆ ಪೊಲೀಸರಿಗೆ ದೂರು ನೀಡಿಲ್ಲ. ಬಳಿಕ ಕಂಪ್ಲೇಂಟ್ ಕೊಟ್ಟಿದ್ದೇವೆ. ಈ ಪಿಜಿಯಲ್ಲಿ ಬಾಗಿಲಿಗೆ ಚಿಲಕ, ಸೆಕ್ಯೂರಿಟಿ, ಸಿಸಿಟಿವಿ ಇಲ್ಲ. ಕಂಪ್ಲೇಂಟ್ ಬಗ್ಗೆ ಮಾಲೀಕನಿಗೆ ಫೋನ್ ಮಾಡಿದರೆ ಪಿಕ್ ಮಾಡುತ್ತಿರಲಿಲ್ಲ. ಆದರೆ ಪೊಲೀಸರಿಗೆ ದೂರು ಕೊಟ್ಟ ಮೇಲೆ ಸಮಸ್ಯೆಗಳನ್ನು ಸರಿ ಮಾಡುತ್ತಿದ್ದಾರೆ. ಪೊಲೀಸರು ಕೂಡ ಎಲ್ಲವನ್ನೂ ಸರಿ ಮಾಡುತ್ತೀವಿ ಎಂದು ಹೇಳಿದ್ದಾರೆ ಎಂದು ಪಿಜಿಯಲ್ಲಿರುವ ಯುವತಿ ಹೇಳಿದ್ದಾರೆ.
ಈ ಪಿಜಿಯಲ್ಲಿ ಭದ್ರತೆ ಬಗ್ಗೆ ಮಾಲೀಕನನ್ನು ಪ್ರಶ್ನಿಸಿದರೆ, ನಮ್ಮದೇನು ಪೊಲೀಸ್ ಸ್ಟೇಷನಾ ಅಂತ ಉತ್ತರಿಸಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv