ಬೆಂಗಳೂರು: ಪಿಜಿ (ಪೇಯಿಂಗ್ ಗೆಸ್ಟ್)ಯಲ್ಲಿ ಯಾರು ಇಲ್ಲದ ವೇಳೆ ಮಾಲೀಕ ಆತ್ಮಹತ್ಯೆ ಗೆ ಶರಣಾಗಿರುವ ಘಟನೆ ನಗರದ ಕುರುಬರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಜ್ಯೋತಿ ಪಿಜಿಯಲ್ಲಿ ನೆಡೆದಿದೆ.
30 ವರ್ಷದ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಪಿಜಿ ಮಾಲೀಕ. ಸಂತೋಷ್ ಮೂಲತಃ ಆಂಧ್ರದವರಾಗಿದ್ದು, ಕಳೆದ ಕೆಲ ವರ್ಷಗಳಿಂದ ಕುರುಬರಹಳ್ಳಿಯಲ್ಲಿ ಜ್ಯೋತಿ ಪಿಜಿ ನೆಡೆಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಪಿಜಿಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂತೋಷ್ ಕಳೆದ ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.