ಬೆಂಗಳೂರು: 2024ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ (PG Medical Course) ಪ್ರವೇಶ ಸಲುವಾಗಿ ಸ್ಟ್ರೇ ವೇಕೆನ್ಸಿ (Stray Vacancy) ಸುತ್ತಿನಲ್ಲಿ ಭಾಗವಹಿಸಲು ಇಚ್ಚಿಸುವ ಹಾಗೂ ಇದುವರೆಗೂ ನೋಂದಣಿ ಮಾಡದಿರುವ ಅರ್ಹರು ಫೆ.19ರೊಳಗೆ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮತ್ತೊಮ್ಮೆ ಅವಕಾಶ ನೀಡಿದೆ.
ಹೊಸದಾಗಿ ಅರ್ಜಿ ಸಲ್ಲಿಸಿದವರು ಹಾಗೂ ಇದುವರೆಗೂ ಮೂಲ ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳದಿರುವವರು ಫೆ.19 ಅಥವಾ 20ರಂದು ಕೆಇಎ ಕಚೇರಿಗೆ ಬಂದು ಪರಿಶೀಲನೆ ಮಾಡಿಸಿಕೊಳ್ಳಬಹುದು. ಬಳಿಕ ದಾಖಲೆಗಳನ್ನು ಕೂಡ ಸಲ್ಲಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಇದನ್ನೂ ಓದಿ: ಅಟಲ್‌ಜೀ ಜನ್ಮ ಶತಾಬ್ಧಿ – ವಾಜಪೇಯಿ ಜತೆ ಕೆಲಸ ಮಾಡಿದ ಸಮಕಾಲೀನ ಕಾರ್ಯಕರ್ತರಿಗೆ ಬಿಜೆಪಿ ಗೌರವ
Advertisement
Advertisement
ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆ ನಂತರ 460 ಪಿಜಿ ವೈದ್ಯಕೀಯ ಹಾಗೂ 37 ಡಿಎನ್ ಬಿ ಸೀಟುಗಳು ಹಂಚಿಕೆಯಾಗದೆ ಉಳಿದಿವೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಮನವಿ ಮೇರೆಗೆ ಹೊಸದಾಗಿ ಅರ್ಜಿ ಸಲ್ಲಿಸುವುದಕ್ಕೂ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಡಿ.ಕೆ.ಶಿವಕುಮಾರ್‌ಗೆ ಒಳ್ಳೆಯದಾಗಲಿ ಅಂತ ರಾಜಣ್ಣ ಮಾತಾಡ್ತಿದ್ದಾರೆ: ಡಿ.ಕೆ.ಸುರೇಶ್
Advertisement