ಮಂಗಳೂರು: ಇತ್ತೀಚೆಗೆ ಬಳ್ಳಾರಿಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಮೃತದೇಹಗಳನ್ನು ಅಮಾನವೀಯವಾಗಿ ಮಣ್ಣು ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದ್ರೆ ಬುಧವಾರ ಮಂಗಳೂರಿನಲ್ಲಿ ಪಿಎಫ್ಐ ಕಾರ್ಯಕರ್ತರು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಕೊರೊನಾದಿಂದ ಸಾವನ್ನಪ್ಪಿದ ವ್ಯಕ್ತಿಯೋರ್ವ ಅಂತ್ಯ ಸಂಸ್ಕಾರ ನಡೆಸಿರೋದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
Advertisement
ಕೊರೊನಾಕ್ಕೆ ಬಲಿಯಾದ ಭಟ್ಕಳ ಮೂಲದ 76 ವರ್ಷದ ವ್ಯಕ್ತಿಯ ದಫನ ಕಾರ್ಯ ಮಂಗಳೂರು ಹೊರವಲಯದ ಅಂಗರಗುಂಡಿಯಲ್ಲಿ ನಿನ್ನೆ ನಡೆದಿದೆ. ಮುಸ್ಲಿಂ ಧಾರ್ಮಿಕ ವಿಧಿ ವಿಧಾನ ಪ್ರಕಾರ ಜಿಲ್ಲಾಡಳಿತದಿಂದ ತರಬೇತಿ ಪಡೆದ ಪಿಎಫ್ಐ ಕಾರ್ಯಕರ್ತರು ಅತ್ಯಂತ ಸುರಕ್ಷಿತವಾಗಿ ಪಿಪಿಇ ಕಿಟ್ ಧರಿಸಿ ದಫನ ಕಾರ್ಯ ಮಾಡಿದ್ದಾರೆ.
Advertisement
Advertisement
ಈ ಸಂದರ್ಭ ಬಟ್ಟೆಯ ಸಹಾಯದಿಂದ ಮೃತದೇಹವನ್ನು ಗುಂಡಿಯೊಳಗೆ ಇಳಿಸಿ ಬಳಿಕ ಪ್ರಾರ್ಥನೆ ಸಲ್ಲಿಸಿ ಮಣ್ಣು ಮಾಡಲಾಗಿದೆ. ಪಿಎಫ್ಐ ಕಾರ್ಯಕರ್ತರ ಈ ಕೆಲಸ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.