Connect with us

ಬಲಪಂಥೀಯರು, ಪಿಎಫ್‍ಐನವರ ಓವರ್ ಆ್ಯಕ್ಟಿಂಗೇ ಕೋಮು ವೈಷಮ್ಯಕ್ಕೆ ಕಾರಣ : ರಾಮಲಿಂಗಾರೆಡ್ಡಿ

ಬಲಪಂಥೀಯರು, ಪಿಎಫ್‍ಐನವರ ಓವರ್ ಆ್ಯಕ್ಟಿಂಗೇ ಕೋಮು ವೈಷಮ್ಯಕ್ಕೆ ಕಾರಣ : ರಾಮಲಿಂಗಾರೆಡ್ಡಿ

ಮಂಗಳೂರು: ಸಂಘಟನೆಗಳ, ರಾಜಕೀಯ ನಾಯಕರ ಕುಮ್ಮಕ್ಕಿನಿಂದ ಕರಾವಳಿಯಲ್ಲಿ ಕೋಮು ವೈಷಮ್ಯದ ಗಲಾಟೆ ಆಗುತ್ತಿದೆ. ಇದಕ್ಕೆಲ್ಲ ಬಲಪಂಥೀಯರು, ಪಿಎಫ್‍ಐನವರ ಓವರ್ ಆ್ಯಕ್ಟಿಂಗ್ ಕಾರಣ ಅಂತ ಗೃಹ ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳೂರಿನ ಶಕ್ತಿನಗರದಲ್ಲಿ ಪೊಲೀಸ್ ವಸತಿಗೃಹಕ್ಕೆ ಶಿಲಾನ್ಯಾಸಗೈದು ಮಾತನಾಡಿದ ಅವರು, ಇವರೆಲ್ಲ ಸ್ವಲ್ವ ಸುಮ್ಮನಿದ್ದರೆ ಎಲ್ಲವೂ ಸರಿಯಾಗುತ್ತೆ. ಜನರಿಗೆ ಈ ಗಲಾಟೆ ಯಾವುದೂ ಬೇಕಾಗಿಲ್ಲ ಅಂತ ಅವರು ಹೆಳಿದ್ರು.

ಇನ್ನು ಸಂಘಟನೆಗಳ ನಿಷೇಧ ತಕ್ಷಣಕ್ಕೆ ಯಾವುದೇ ಪ್ರಸ್ತಾಪ ಇಲ್ಲ. ನಿಷೇಧ ಮಾಡಿದ್ರೆ ಎರಡೂ ಕಡೆಯ ಸಂಘಟನೆಗಳನ್ನು ನಿಷೇಧ ಮಾಡಬೇಕು. ಮುಖ್ಯಮಂತ್ರಿ ಪ್ರವಾಸದಲ್ಲಿದ್ದಾರೆ, ಆ ನಂತ್ರ ಈ ಬಗ್ಗೆ ನೋಡ್ತೀವಿ ಅಂದ್ರು.

ಮೂಡಿಗೆರೆಯಲ್ಲಿ ಧನ್ಯಶ್ರೀ ಪ್ರಾಣ ಹೋಗಿದ್ದಕ್ಕೆ ಬೆಲೆ ಇಲ್ಲವೇ? ಇವರು ಯಾಕೆ ಅಲ್ಲಿ ಹೋಗಿ ಖಂಡಿಸುತ್ತಿಲ್ಲ? ದ್ವಂದ್ವ ನೀತಿ ಯಾಕೆ? ಆ ಗಲಾಟೆಯಲ್ಲಿರೋದು ಎಲ್ಲರು ಯುವಮೋರ್ಚಾದವರು. ಪೊಲೀಸರು ಎಲ್ಲ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಈ ಥರದ ಸಂಘಟನೆಗಳಿಗೆ ಜನವೇ ಉತ್ತರ ನೀಡಲಿದ್ದಾರೆ ಅಂತ ಅವರು ತಿಳಿಸಿದ್ರು.

Advertisement
Advertisement