ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮುಖಂಡರ ಅರೆಸ್ಟ್ ಕೇಸ್‍ನಲ್ಲಿ ಮೊಬೈಲ್ (Mobile) ರಿಟ್ರೀವ್ ಮಾಡುವುದೇ ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ. ಅದೊಂದು ಆಪ್‍ನಿಂದ ಮೊಬೈಲ್‍ನಲ್ಲಿದ್ದ ಎಲ್ಲವೂ ಖಾಲಿ ತೋರಿಸ್ತಿದೆ. ಈ ನಡುವೆ ಮೂರು ರಾಜ್ಯಗಳ ಕೋ ಆರ್ಡಿನೇಟರ್ ನನ್ನು ಖಾಕಿ ಖೆಡ್ಡಾಗೆ ಕೆಡವಿದೆ.
Advertisement
ಪಿಎಫ್‍ಐ ಮುಖಂಡರ ಮೇಲಿನ ದಾಳಿ ಸಂಬಂಧ ಪೊಲೀಸರ ವಿಚಾರಣೆ ತೀವ್ರಗೊಂಡಿದೆ. ಈ ನಡುವೆ ದೆಹಲಿಯಲ್ಲಿ ಸಿಕ್ಕ ಮಂಗಳೂರು (Mangaluru) ಮೂಲದ ಮೊಹಮದ್ ಅಶ್ರಫ್‍ನನ್ನ ಬಾಡಿ ವಾರೆಂಟ್ ಮೇಲೆ ಪೊಲೀಸರು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಜಾರ್ಖಂಡ್ ಸೇರಿದಂತೆ ಮೂರು ರಾಜ್ಯಗಳ ಕೋ ಆರ್ಡಿನೇಟರ್ ಆಗಿ ಮೊಹಮದ್ ಅಶ್ರಫ್ (Mohammad Ashraf) ಕೆಲಸ ಮಾಡ್ತಿದ್ದಾಗಿ ತಿಳಿದುಬಂದಿದೆ.
Advertisement
Advertisement
`ಟ್ರೈನಿಂಗ್ ಟು ಬಿ ಆರ್ಗನೈಸ್ಡ್` ಲೆಟರ್ ಗೂ ಮಹಮ್ಮದ್ ಆಶ್ರಫ್‍ಗೂ ಲಿಂಕ್ ಇರೋ ಶಂಕೆ ವ್ಯಕ್ತವಾಗಿದ್ದು, ಆಶ್ರಫ್ ವಿಚಾರಣೆಗಾಗಿ ಕೇಂದ್ರ ಅಪರಾಧ ವಿಭಾಗ (CCB) ಹಾಗೂ ಕೆಜಿಹಳ್ಳಿ ಪೊಲೀಸರು ಕಾಯುತ್ತಿದ್ದಾರೆ. ವಿಚಾರಣೆ ವೇಳೆ ಮಹತ್ವದ ಮಾಹಿತಿಗಳು ಹೊರಬೀಳೋ ನಿರೀಕ್ಷೆಗಳಿವೆ. ಇದನ್ನೂ ಓದಿ: PFI ಶಂಕಿತರ ಮೊಬೈಲ್‌ನಲ್ಲಿತ್ತು ಸಾಕ್ಷಿಗಳನ್ನೇ ನಾಶ ಮಾಡುವ ಆಪ್
Advertisement
ಬಂಧಿತ 15 ಮಂದಿ ಆರೋಪಿಗಳಿಂದ 55 ಮೊಬೈಲ್ ಮತ್ತು 15 ಲ್ಯಾಪ್‍ಟಾಪ್ (LapTop) ವಶಕ್ಕೆ ಪಡೆಯಲಾಗಿದೆ. ಮೊಬೈಲ್ ರಿಟ್ರೀವ್‍ಗಾಗಿ ಪೊಲೀಸರು ಎಫ್‍ಎಸ್‍ಎಲ್ ಮೊರೆ ಹೋಗಿದ್ದಾರೆ. ಬಹುತೇಕ ಮೊಬೈಲ್‍ಗಳಲ್ಲಿ ಯಾವುದೇ ಡೇಟಾಗಳು ಸಿಕ್ತಿಲ್ಲ. ಐಸ್ ರೀಡರ್ (Eyes Reader) ಅನ್ನೊ ಅಪ್ಲಿಕೇಷನ್ ಇನ್ಸ್ ಸ್ಟಾಲ್ ಮಾಡಿಕೊಂಡು, ಲಾಗಿನ್ ಆದರೆ ಎಲ್ಲಾ ಮೊಬೈಲ್ ಡೇಟಾ ರಿಮೂವ್ ಆಗುತ್ತಂತೆ. ಹೀಗಾಗಿ ಇದೆ ಅಪ್ಲಿಕೇಷನ್ ಬಳಸಿ ಮೊಬೈಲ್ ಡೇಟಾ ಇರೇಸ್ ಮಾಡಿರುವ ಸಾಧ್ಯತೆಯಿದೆ.
ಕೋರ್ಟ್ (Court) ಪರ್ಮೀಷನ್ ಪಡೆದು, ಮೊಬೈಲ್‍ಗಳಲ್ಲಿನ ಸೀಕ್ರೆಟ್ ಹೊರತೆಗೆಯಲು ಪೊಲೀಸರು ಎಫ್‍ಎಸ್‍ಎಲ್‍ಗೆ ಮೊಬೈಲ್‍ಗಳನ್ನ ಕಳಿಸಿ ಕೊಟ್ಟಿದ್ದಾರೆ.ಸಮಾಜದಲ್ಲಿ ಅಶಾಂತಿ, ದೇಶದ ವಿರುದ್ಧ ಷಡ್ಯಂತ್ರ್ಯದಂತಹ ಗಂಭೀರ ಆರೋಪ ಅರೆಸ್ಟ್ ಆದವರ ಮೇಲಿದೆ.