ಹಾಸನ: ಚುನಾವಣೆ ಹತ್ತಿರ ಬರುತ್ತಿರುವುದಕ್ಕೆ ಪಿಎಫ್‍ಐ (PFI) ಹಾಗೂ ಅಂಗಸಂಸ್ಥೆಗಳನ್ನು ಬಿಜೆಪಿ (BJP) ಸರ್ಕಾರ ಬ್ಯಾನ್ ಮಾಡಿದೆ. ಇದು ಚುನಾವಣೆ ಗಿಮಿಕ್ ಅಷ್ಟೇ ಎಂದು ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
Advertisement
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಿಎಫ್‍ಐ ರೀತಿಯ ಸಂಘಟನೆಗಳು ಬಹಳಷ್ಟು ಇವೆ. ಪಿಎಫ್‍ಐ, ಎಸ್‍ಡಿಪಿಐ, ಆರ್‌ಎಸ್‌ಎಸ್ (RSS), ಭಜರಂಗದಳ ಅಷ್ಟೇ ಅಲ್ಲ. ಬ್ಯಾನ್ ಮಾಡೋದೆ ಆದರೆ ಎಲ್ಲವನ್ನು ಬ್ಯಾನ್ ಮಾಡಿ. ಇಲ್ಲವಾದರೆ ಅವರ ನಂಬಿಕೆ, ಮನಸ್ಸಿನಲ್ಲಿ ಏನಿರುತ್ತೆ ಅದನ್ನು ಮಾಡಲು ಸ್ವಾತಂತ್ರ್ಯ ಕೊಡಿ. ಒಂದೆರಡು ಬ್ಯಾನ್ ಮಾಡೋದು, ಇನ್ನು ಕೆಲವನ್ನು ಹಾಗೆ ಬಿಡೋದರಿಂದ ಸಮಾಜದಲ್ಲಿ ಗೊಂದಲ ಸೃಷ್ಟಿಯಾಗುತ್ತೆ. ನೀವೇ ಬೆಂಕಿ ಹಚ್ಚುವ ಕೆಲಸ ಮಾಡಿದಂತೆ ಆಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಾವಲು ವಾಹನ ನಿಲ್ಲಿಸಿ ಅಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಮೋದಿ
Advertisement
Advertisement
ಕೇವಲ ಪಿಎಫ್‍ಐ ಬ್ಯಾನ್ ಮಾಡಿದ್ರೆ ಅವರು ಸುಮ್ಮನೆ ಇರ್ತಾರಾ, ಬೇರೆಯವರನ್ನು ಬ್ಯಾನ್ ಮಾಡಿ ಅಂತಾರೆ, ಹಾಗಾಗಿ ಸರ್ಕಾರ ಈ ಬಗ್ಗೆ ಸರಿಯಾದ ನಿರ್ಧಾರ ಮಾಡಬೇಕು. ಬ್ಯಾನ್‍ಗೂ ಮೊದಲು ಸರ್ವಪಕ್ಷ ಸಭೆ ಮಾಡಬೇಕಿತ್ತು. ಎಲ್ಲ ಹಿರಿಯರ ಮುಂದೆ ಇಂತಹ ಸಮಸ್ಯೆ ಇದೆ ಎಂದು ಹೇಳಬೇಕಿತ್ತು. ಕೆಲವು ಸಚಿವರು, ಶಾಸಕರು ಪಿಎಫ್‍ಐಯವರು ಭಯೋತ್ಪಾದನಾ ಕೃತ್ಯಕ್ಕೆ ಬೆಂಬಲ ನೀಡುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ದಾಖಲೆ ಎಲ್ಲಿದೆ? ಸೂಕ್ತ ದಾಖಲೆ ಜನರ ಮುಂದಿಟ್ಟು ಬ್ಯಾನ್ ಮಾಡಿ. ಖಂಡಿತವಾಗಿ ಇದು ದುಡುಕಿನ ನಿರ್ಧಾರ. ಮಾತ್ರವಲ್ಲ ರಾಜಕೀಯ ಲಾಭಕ್ಕಾಗಿ ಮಾಡಿರುವ ನಿರ್ಧಾರ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಟಿಪ್ಪು ಹಿಂದೂಗಳ ರಕ್ತ ಹರಿಸಿದ ನೆಲದಿಂದಲೇ ರಾಹುಲ್ ಯಾತ್ರೆ – ಕಾಂಗ್ರೆಸ್‌ಗೆ ರಾಹುಕಾಲ ಎಂದ BJP
Advertisement
ಪಿಎಫ್‍ಐ, ಎಸ್‍ಡಿಪಿಐ (SDPI) ನಿನ್ನೆ ಮೊನ್ನೆ ಹುಟ್ಟಿಕೊಂಡಿದೆಯಾ, ಹಲವು ವರ್ಷಗಳಿಂದ ಇದೆ, ಇವರು ಮೂರು ವರ್ಷಗಳ ಹಿಂದೆಯೇ ಬ್ಯಾನ್ ಮಾಡಬಹುದಿತ್ತಲ್ಲವೇ, ಇದು ಚುನಾವಣೆ ಗಿಮಿಕ್ ಅಷ್ಟೇ, ಚುನಾವಣೆಗಾಗಿ ಟ್ರಿಕ್ಸ್ ಮಾಡುತ್ತಿದ್ದಾರೆ. ಇದು ಶಾಶ್ವತ ಅಲ್ಲ. ಹೀಗೆ ಮಾಡಿದ್ರೆ ನಾವೇ ಸಮಾಜದಲ್ಲಿ ಒಡಕು ಮೂಡಿಸಿದಂತೆ ಆಗುತ್ತೆ. ಈಗಾಗಲೇ ಸಮಾಜದಲ್ಲಿ ಒಡಕು ಮೂಡಿದೆ. ಎಲ್ಲ ಸಮಾಜವನ್ನು ಒಟ್ಟುಗೂಡಿಸಿ ದೇಶವನ್ನು ಬೆಳೆಸಬೇಕು. ಬ್ಯಾನ್ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲನೆ ಮಾಡಬೇಕು. ಎಲ್ಲಾ ಸಿಎಂಗಳು ತಮ್ಮ ರಾಜ್ಯದಿಂದ ಕೇಂದ್ರಕ್ಕೆ ಮನವಿ ಮಾಡಲಿ ಸದನದಲ್ಲಿ ನಾನು ಕೂಡ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದಿದ್ದಾರೆ.