LatestLeading NewsMain PostNational

ಹಿಜಬ್ ವಿದ್ಯಾರ್ಥಿನಿಯರ ಪ್ರತಿಭಟನೆ ಹಿಂದೆ PFI ಪಿತೂರಿ: ಸಾಲಿಸಿಟರ್ ಜನರಲ್ ಮೆಹ್ತಾ ವಾದ

ನವದೆಹಲಿ: ಪ್ರತಿಭಟನೆ (Protest) ಮಾಡುವ ಉದ್ದೇಶದಿಂದಲೇ ಹಿಜಬ್ (Hijab) ಹೋರಾಟವನ್ನು ರೂಪಿಸಲಾಯಿತು, ಹಿಜಬ್ ವಿವಾದದ ಹಿಂದೆ ದೊಡ್ಡ ಷಡ್ಯಂತ್ರವಿದ್ದು, ಪಿಎಫ್‌ಐ (PFI) ಕೂಡಾ ಇದರಲ್ಲಿ ಭಾಗಿಯಾಗಿದೆ ಎಂದು ಕೇಂದ್ರ ಸರ್ಕಾರದ (Central Givernment) ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (Tushar Mehta) ಅರೋಪಿಸಿದ್ದಾರೆ.

ಹಿಜಬ್ ನಿಷೇಧಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ (High Court) ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆ ವೇಳೆ ಮೆಹ್ತಾ ವಾದ ಮಂಡಿಸಿದರು. ಇದನ್ನೂ ಓದಿ: ಶಾಲೆ ಟಾರ್ಗೆಟ್ ಮಾಡಿ ಸೇನೆಯಿಂದ ಗುಂಡಿನ ದಾಳಿ – 7 ಮಕ್ಕಳು ಸೇರಿ 13 ಮಂದಿ ಸಾವು

ಕಳೆದ ಎಂಟು ದಿನಗಳಿಂದ ನ್ಯಾಯಮೂರ್ತಿ ಹೇಮಂತ್ ಗುಪ್ತಾ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು. ಇಂದು ಎಲ್ಲ ವಕೀಲರ (Lowyer) ವಾದ ಅಂತ್ಯವಾದ ಹಿನ್ನೆಲೆಯಲ್ಲಿ ಸರ್ಕಾರದ ಪರ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಆರಂಭಿಸಿದರು. ಇದನ್ನೂ ಓದಿ: ಸ್ಟೇಟಸ್‍ನಲ್ಲಿ ಹಾಕಿದ್ದ ತಾಯಿ ಫೋಟೋ ದುರ್ಬಳಕೆ – ಕ್ಲಾಸ್‍ರೂಂನಲ್ಲಿ ಲೆಕ್ಚರರ್ ಎದುರೇ ಹೊಡೆದಾಡಿಕೊಂಡ ವಿದ್ಯಾರ್ಥಿಗಳು

ಯಾವುದೇ ಧರ್ಮಾದ ಆಚರಣೆ ಇದ್ದರೂ, ಅದರ ಅನುಸರಣೆ ಮತ್ತು ಆಚರಣೆ ಕಾನೂನಿನ ಮಿತಿಯಲ್ಲಿದೆ. ರಾಜ್ಯ ಸರ್ಕಾರದ (Karnatak State Government) ಅದೇಶ ನಿರ್ದಿಷ್ಟ ಸಮುದಾಯದ, ನಿರ್ದಿಷ್ಟ ಉಡುಪು ಧರಿಸಲು ನಿಯಂತ್ರಣ ಹೇರುವುದಿಲ್ಲ, ಬದಲಿಗೆ ಸಮವಸ್ತ್ರದ ಅಗತ್ಯದ ಬಗ್ಗೆ ಸ್ಪಷ್ಟವಾಗಿ ತಿಳಿಸಿದೆ. ಆದರೆ ಹಿಜಬ್ (Hijab) ಧರಿಸುವ ಹೋರಾಟದ ಹಿಂದೆ ವ್ಯವಸ್ಥಿತ ಪಿತೂರಿ ನಡೆದಿದೆ ಎಂದು ಕೋರ್ಟ್ ಗೆ ತುಷಾರ್ ಮೆಹ್ತಾ ತಿಳಿಸಿದರು.

ಹಿಜಬ್ ಪರ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಭಾರೀ ಪ್ರಚಾರ ಮಾಡಲಾಯ್ತು, ಹಿಜಬ್ ಧರಿಸಿ ಎಂದು ಒತ್ತಿ ಹೇಳಲಾಯಿತು, ಹಿಜಬ್ ಬೇಕು ಎನ್ನುವ ವಾದ ಹಠಾತ್ ಆಗಿ ಬಂದಿರುವುದಲ್ಲ, ಇದು ದುರುದ್ದೇಶದಿಂದ ವ್ಯವಸ್ಥಿತವಾಗಿ ಮಾಡಿರುವ ಕಾರ್ಯಾಚರಣೆಯಾಗಿದೆ. ಇದರಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪಾತ್ರವೂ ಇದೆ. ಇದಕ್ಕೆ ಪೂರಕ ಸಾಕ್ಷ್ಯಗಳ ಕುರಿತು ನಾನು ಕೋರ್ಟ್ ಗೆ ದಾಖಲೆ ಸಲ್ಲಿಸಿದ್ದೇನೆ ಎಂದರು.

ಮಕ್ಕಳು ಹಿಜಬ್ ಗಾಗಿ ಸ್ವಯಂ ಪ್ರೇರಣೆಯಿಂದ ಹೋರಾಟ ಮಾಡಿಲ್ಲ, ಅವರ ಮನವೊಲಿಸಿ ಈ ರೀತಿ ಮಾಡಲಾಯ್ತು, 2021ರ ತನಕ ಯಾವ ವಿದ್ಯಾರ್ಥಿನಿಯೂ (Students) ಕೂಡ ಹಿಜಬ್ ಧರಿಸುತ್ತಿರಲಿಲ್ಲ, ಅಥವಾ ಇಂಥದ್ದೊಂದು ಪ್ರಶ್ನೆಯೇ ಉದ್ಭವ ಆಗಿರಲಿಲ್ಲ, ಹಿಜಬ್ ನ ವಿರುದ್ಧ ಮತ್ತೊಂದು ಸಮುದಾಯದ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಶಾಲೆಗೆ ಬಂದರು ಈ ವೇಳೆ ಸರ್ಕಾರ ಹಿಜಬ್ ಗೆ ನಿಷೇಧ ಹೇರಿತು ಈ ಸಂದರ್ಭದಲ್ಲಿ ಸರ್ಕಾರದ ಆದೇಶದ ಬಳಿಕ ಈ ವಿವಾದ ಬುಗಿಲೆದ್ದಿತು ಎಂದು ವಾದಿಸಿದರು.

Live Tv

Leave a Reply

Your email address will not be published.

Back to top button