– ಉಡುಪಿಯಲ್ಲಿ ಶ್ರೀಕಾಂತ್ ಶೆಟ್ಟಿ ಹೇಳಿಕೆ
– ಮನೆಯಲ್ಲಿರುವ ಶಸ್ತ್ರಗಳಿಗೆ ಆಯುಧ ಪೂಜೆ ಮಾಡಿ
– ಮನೆಯಲ್ಲಿರುವ ಶಸ್ತ್ರಗಳಿಗೆ ಆಯುಧ ಪೂಜೆ ಮಾಡಿ
ಉಡುಪಿ: ದೇಶದಲ್ಲಿ ಪಿಎಫ್‍ಐ (PFI) ನಿಷೇಧ ಹಿನ್ನೆಲೆ ಪಿಎಫ್‍ಐ ಕಾರ್ಯಕರ್ತರು ಇಂತಿಫಿದಾ (Intifida) ಎಂಬ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಳ್ಳುವ ಮೂಲಕ ಹೊಸ ವರಸೆ ಶುರು ಮಾಡಿದ್ದಾರೆ ಎಂಬ ಗಂಭೀರ ಆರೋಪ ಬಂದಿದೆ.
Advertisement
ಈ ಬಗ್ಗೆ ಉಡುಪಿಯಲ್ಲಿ ನಡೆದ ದುರ್ಗಾದೌಡ್ (Durgadaud) ಸಮಾವೇಶದಲ್ಲಿ ಮಾತನಾಡಿದ ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ (Shrikanth Karkala) ಅವರು, ಇಂತಿಫಿದಾ ಎಂದರೆ ನಾಗರಿಕ ಸಂಘರ್ಷದ ಮುನ್ಸೂಚನೆ ಎಂದರ್ಥ. ಇಸ್ರೇಲ್‍ನ ನಾಗರೀಕ ಹೋರಾಟದ ಇಂತಿಫಿದಾ ಭಾರತದಲ್ಲಿ ಕೇಳಿಬರುತ್ತಿದೆ. ಪಾಕಿಸ್ತಾನದ ಏಂಜೆಂಟರ (Pakistan Agent) ವಿರುದ್ಧ ಹೋರಾಟ ಆರಂಭಿಸಿದಕ್ಕಾಗಿ ದುರ್ಗಾದೌಡ್ ಮಾಡಲಾಗಿದೆ. ಕಾಂಗ್ರೆಸ್ ಹಿಂದೂಗಳ ಮೇಲೆ ಸುಳ್ಳು ಉಗ್ರವಾದದ ನೂರಾರು ಕೇಸು ದಾಖಲಿಸಿದೆ. ಖಡ್ಗ ಹಿಡಿದು ಮೆರವಣಿಗೆ ಮಾಡಲು ಅನುಮತಿ ಸಿಗಲಿಲ್ಲ. ಮೆರವಣಿಗೆಯಲ್ಲಿ ನಾವು ಬಹಿರಂಗವಾಗಿ ಶಸ್ತ್ರಾಸ್ತ್ರ ಬಳಕೆ ಮಾಡಿಲ್ಲ. ಸಂದರ್ಭ ಒದಗಿ ಬಂದಾಗ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುತ್ತೇವೆ ಎಂದು ಹೇಳಿದ್ದಾರೆ.
Advertisement
Advertisement
ಶೀಘ್ರದಲ್ಲೇ ಆರ್‌ಎಸ್‍ಎಸ್‍ಗೆ (RSS) ನೂರು ವರ್ಷ ಪೂರ್ಣವಾಗುತ್ತಿದೆ. ಮುಂದಿನ ಮೂರು ವರ್ಷದಲ್ಲಿ ಊರು ಹಳ್ಳಿ ಮನೆಗೆ ಸಂಘ ತಲುಪುತ್ತದೆ. ಹಿಂದೂ ಜಾಗರಣ ವೇದಿಕೆ ಶಸ್ತ್ರಾಸ್ತ್ರ ಮೂಲಕ ಮನೆಗಳನ್ನು ತಲುಪುತ್ತದೆ. ಪ್ರತಿ ಹಿಂದೂಗಳ ಮನೆಯಲ್ಲಿ ಆಯುಧ ಪೂಜೆ ಆಗಬೇಕು. ಆಯುಧ ಪೂಜೆಗೆ ಹಳೇ ಸೈಕಲ್, ಗ್ರೈಂಡರ್, ಮಿಕ್ಸಿಗೆ ಪೂಜೆ ಮಾಡಬೇಡಿ. ಮನೆಯಲ್ಲಿರುವ ಶಸ್ತ್ರಗಳಿಗೆ ಪೂಜೆ ಮಾಡಿ, ಶಸ್ತ್ರ ಪೂಜೆಯ ಜೊತೆಗೆ ಶಸ್ತ್ರ ಬಳಸುವ ಮನೋ ಸ್ಥೈರ್ಯ ಮುಂದೆ ಬೆಳೆಸೋಣ. ಶಸ್ತ್ರ ಇಡುವ, ಹಿಡಿಯುವ ಸ್ಥೈರ್ಯ ಹಿಂದೂ ಸಮಾಜ ಬೆಳೆಸಬೇಕು ಎಂದು ಹೇಳಿದರು.
Advertisement
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]