ತಮಿಳಿನ ‘ಪೆಟ್ಟಾ’ (Petta) ಖ್ಯಾತಿಯ ಮೇಘಾ ಆಕಾಶ್ (Megha Akash) ಅವರು ಇಂದು (ಸೆ.15) ಬಹುಕಾಲದ ಗೆಳೆಯ ಸಾಯಿ ವಿಷ್ಣು ಜೊತೆ ಮದುವೆಯಾಗಿದ್ದಾರೆ. ನವಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಇದನ್ನೂ ಓದಿ:ರವಿಕೆ ಧರಿಸದೆ ಸೀರೆಯುಟ್ಟ ಚೈತ್ರಾ ಆಚಾರ್
View this post on Instagram
ಚೆನ್ನೈನಲ್ಲಿ ಸಾಯಿ ವಿಷ್ಣು (Saai Vishnu) ಜೊತೆ ಅದ್ಧೂರಿಯಾಗಿ ಮೇಘಾ ಮದುವೆಯಾದರು. 6 ವರ್ಷಗಳು ಪ್ರೀತಿಗೆ ಮದುವೆಯ (Wedding) ಮುದ್ರೆ ಒತ್ತಿದ್ದರು. ಈ ಮದುವೆಗೆ ಕುಟುಂಬಸ್ಥರು, ಸ್ಟಾರ್ ಕಲಾವಿದರಿಗೆ, ಆಪ್ತರಿಗೆ ಆಹ್ವಾನ ನೀಡಲಾಗಿತ್ತು.
View this post on Instagram
ಇನ್ನೂ ರಾಜಕೀಯ ಹಿನ್ನೆಲೆಯಿಂದ ಬಂದಿರುವ ಸಾಯಿ ವಿಷ್ಣು ಜೋಡಿಯ ಆರತಕ್ಷತೆಗೆ ತಮಿಳುನಾಡಿನ ಸಿಎಂ ಸ್ಟಾಲಿನ್ ಕೂಡ ಭಾಗವಹಿಸಿದ್ದರು. ಹೊಸ ಜೋಡಿಗೆ ಆಶೀರ್ವಾದ ಮಾಡಿದರು.
ಅಂದಹಾಗೆ, ಪೆಟ್ಟಾ, ಕುಟ್ಟಿ ಸ್ಟೋರಿ, ರಾಧೆ, ಡಿಯರ್ ಮೇಘಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.