ಚಂಡೀಗಢ: ಕೇವಲ 500 ರೂ ಗಾಗಿ ನೋಡನೋಡುತ್ತಲೇ ಪೆಟ್ರೋಲ್ ಬಂಕ್ನ ಸೇಲ್ಸ್ಮೆನ್ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಹರಿಯಾಣದ ಪಲ್ವಾಲ್ ಎಂಬಲ್ಲಿ ನಡೆದಿದೆ.
ಈ ಘಟನೆ ಸೋಮವಾರ ರಾತ್ರಿ 9 ರ ವೇಳೆಗೆ ನಡೆದಿದ್ದು, ಲೈವ್ ಕೊಲೆ ಮಾಡಿರುವ ದೃಶ್ಯಗಳು ಪೆಟ್ರೋಲ್ ಬಂಕ್ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೇವಲ 500 ರೂ. ಗಾಗಿ ಸೇಲ್ಸ್ಮೆನ್ ಮೇಲೆ ಗುಂಡು ಹಾರಿಸಿ ಪಾತಕಿಗಳು ಪರಾರಿಯಾಗಿದ್ದಾರೆ.
Advertisement
ವಿಡಿಯೋದಲ್ಲಿ ಏನಿದೆ?
ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪೆಟ್ರೋಲ್ ಬಂಕ್ನ ಸೇಲ್ಸ್ಮೆನ್ ಮೇಲೆ ಗುಂಡು ಹಾರಿಸಿ ಹಲ್ಲೆ ಮಾಡಿದ್ದಾರೆ. ಬಳಿಕ ಆತನ ಬಳಿ ಇದ್ದ ಹಣವನ್ನು ಪಡೆದು ಮತ್ತೊಮ್ಮೆ ಗುಂಡು ಹಾರಿಸಿ ಅಲ್ಲಿದ್ದ ತಮ್ಮ ಬೈಕಿನಲ್ಲಿ ಪರಾರಿಯಾಗುತ್ತಾರೆ. ಕೂಡಲೇ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದೇವೆ ಎಂದು ಎಸ್ಪಿ ವಾಸಿಂ ಅಕ್ರಮ್ ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Advertisement
https://www.youtube.com/watch?v=XUZbZETPuqg