ಲಕ್ನೋ: ಎಸ್‍ಯುವಿ (SUV) ಕಾರಿನಲ್ಲಿದ್ದ ನಾಲ್ವರು ವ್ಯಕ್ತಿಗಳು ಪೆಟ್ರೋಲ್ ಪಂಪ್ ಮಾಲೀಕನನ್ನು (Petrol Pump Owner) ಅಪರಿಹರಿಸಲು ಯತ್ನಿಸಿರುವ ಘಟನೆ ವಾರಣಾಸಿಯಲ್ಲಿ (Varanasi) ನಡೆದಿದೆ.
ಗುರುವಾರ ರಾತ್ರಿ ಶಿವಪುರಿಯ (Shivpuri) ತರ್ನಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಾಹನಕ್ಕೆ ಇಂಧನ ತುಂಬಿದ ನಂತರ ಆರೋಪಿಗಳು ಪೆಟ್ರೋಲ್ ಪಂಪ್ ಮಾಲೀಕರನನ್ನು ಅಪಹರಿಸಲು ಪ್ರಯತ್ನಿಸಿದರು. ಆದರೆ ಸಿಬ್ಬಂದಿ ಮಧ್ಯಪ್ರವೇಶಿಸಿದ ಹಿನ್ನೆಲೆ ಅವರ ಕಿಡ್ನ್ಯಾಪ್ ಪ್ಲಾನ್ ವಿಫಲವಾಯಿತು. ಇದನ್ನೂ ಓದಿ: PFI ಬ್ಯಾನ್ ಮಾಡಿದ್ದಕ್ಕೆ ಕಾಂಗ್ರೆಸ್‍ನ ಕೆಲವರು ಒಂದೇ ಕಣ್ಣಿನಲ್ಲಿ ಅಳುತ್ತಿದ್ದಾರೆ: ತೇಜಸ್ವಿ ಸೂರ್ಯ
Advertisement
Caught On Camera: Petrol Pump Owner Escapes Kidnapping Attempt In UP https://t.co/aNmycAzLhN pic.twitter.com/4J0Kt3aVLn
— NDTV (@ndtv) October 1, 2022
Advertisement
ವೀಡಿಯೋದಲ್ಲಿ ಆರೋಪಿಯೊರ್ವ ಪೆಟ್ರೋಲ್ ಪಂಪ್ ಮಾಲೀಕರೊಂದಿಗೆ ಜಗಳವಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಮತ್ತಿಬ್ಬರು ಎಸ್‍ಯುವಿ ಕಾರನ್ನು ಚಾಲನೆ ಮಾಡುವಂತೆ ಮತ್ತೊಬ್ಬನಿಗೆ ಹೇಳುತ್ತಿರುತ್ತಾನೆ. ವಾಹನ ಸಮೀಪಕ್ಕೆ ಬರುತ್ತಿದ್ದಂತೆ ಆರೋಪಿ, ಪೆಟ್ರೋಲ್ ಪಂಪ್ ಮಾಲೀಕನನ್ನು ಕಾರಿನೊಳಗೆ ತಳ್ಳಲು ಪ್ರಯತ್ನಿಸುತ್ತಾನೆ. ಇದನ್ನೂ ಓದಿ: 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ – ಕಾಮುಕನಿಗೆ 142 ವರ್ಷ ಜೈಲು
Advertisement
Advertisement
ನಂತರ ಭದ್ರತಾ ಸಿಬ್ಬಂದಿ, ಮತ್ತು ಪೆಟ್ರೋಲ್ ಪಂಪ್ ಸಿಬ್ಬಂದಿ ವ್ಯಕ್ತಿಯನ್ನು ರಕ್ಷಿಸಲು ಸ್ಥಳಕ್ಕೆ ಧಾವಿಸಿದಾಗ ಅಲ್ಲಿಯೇ ಇದ್ದ ಗ್ರಾಹಕರು ಜಮಾಯಿಸುತ್ತಾರೆ. ಈ ವೇಳೆ ಗಾಬರಿಗೊಂಡ ಆರೋಪಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಇದೀಗ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆರೋಪಿಗಳನ್ನು ಗುರುತಿಸಿ ಬಂಧಿಸಲು ಹುಡುಕಾಟ ನಡೆಸುತ್ತಿದ್ದಾರೆ.