ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಕೇಂದ್ರದ ನೀತಿಯನ್ನು ಖಂಡಿಸಿ ಭಾರತ ಬಂದ್‍ಗೆ ಕರೆ ನೀಡಿದ್ದ ಕಾಂಗ್ರೆಸ್ ವಿರುದ್ಧ ಬಿಜೆಪಿ ಈಗ ಸಂಖ್ಯಾ ಮಾಹಿತಿಯನ್ನು ಬಿಡುಗಡೆ ಮಾಡಿ ತಿರುಗೇಟು ನೀಡಿದೆ.
ರಾಷ್ಟ್ರ ರಾಜಧಾನಿಯಾದ ದೆಹಲಿಯ ಇಂದಿನ ದರವನ್ನು ಮುಖ್ಯವಾಗಿಟ್ಟುಕೊಂಡು ಯುಪಿಎ ಸರ್ಕಾರದ ಎರಡು ಅವಧಿಯ 5 ವರ್ಷ ಬೆಲೆ ಏರಿಕೆಯಾಗಿದ್ದು ಮೋದಿ ಸರ್ಕಾರಕ್ಕೆ ಹೋಲಿಕೆ ಮಾಡಿಕೊಂಡು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಬಾರ್ ಗ್ರಾಫಿಕ್ಸ್ ಬಿಡುಗಡೆ ಮಾಡಿದೆ.
Advertisement
ಪೆಟ್ರೋಲ್ ಬೆಲೆ:
2004ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಮೇ 16 ರಂದು 1 ಲೀಟರ್ ಪೆಟ್ರೋಲ್ ಬೆಲೆ 33.71 ರೂ. ಇತ್ತು. 2009ರ ಮೇ 16 ರಂದು ಈ ದರ ಶೇ.75.8ರಷ್ಟು ಏರಿಕೆಯಾಗಿ 40.62 ರೂ. ತಲುಪಿತ್ತು. 2014ರ ಮೇ 16 ರಂದು ಈ ದರ ಶೇ.75.8 ರಷ್ಟು ಏರಿಕೆಯಾಗಿ 71.41 ರೂ. ಆಗಿದೆ. ಆದರೆ ನಮ್ಮ ಅವಧಿಯಲ್ಲಿ 2018ರ ಸಪ್ಟೆಂಬರ್ 10ರ ವೇಳೆಗೆ 80.73 ರೂ. ಆಗಿದ್ದು ಶೇ.13 ರಷ್ಟು ಬೆಲೆ ಏರಿಕೆ ಕಂಡಿದೆ ಎಂದು ಹೇಳಿದೆ.
Advertisement
Truth of hike in petrol prices! pic.twitter.com/hES7murfIL
— BJP (@BJP4India) September 10, 2018
Advertisement
ಡೀಸೆಲ್ ಬೆಲೆ:
ಮೇ 16ರಂದು 1 ಲೀಟರ್ ಡೀಸೆಲ್‍ಗೆ 21.71 ರೂ. ದರ ನಿಗದಿಯಾಗಿತ್ತು. ಬಳಿಕ 2009ರ ಮೇ ವೇಳೆ ಈ ದರ ಶೇ.42 ರಷ್ಟು ಹೆಚ್ಚಾಗಿ 40.62 ರೂ. ತಲುಪಿತ್ತು. 2014ರ ಮೇ 16ರ ವೇಳೆ ದರ ಶೇ.83.7 ಏರಿಕೆಯಾಗಿ 56.71 ರೂ. ತಲುಪಿತ್ತು. ಈಗ ಸೆಪ್ಟೆಂಬರ್ 10 ರಂದು ನಮ್ಮ ಸರ್ಕಾರದಲ್ಲಿ 72.83 ರೂ. ಇದ್ದು ಶೇ.28 ಮಾತ್ರ ಏರಿಕೆಯಾಗಿದೆ ಎಂದು ಹೇಳಿಕೊಂಡಿದೆ.
Advertisement
2012-2014 ರ ತನಕ ಯುಪಿಎ ಸರ್ಕಾರದ ಅವಧಿಯಲ್ಲಿ ಜಾಗತಿಕವಾಗಿ ತೈಲ ದರ ಹೆಚ್ಚಿದ್ದರೂ, ದೇಶೀಯವಾಗಿ ತೈಲ ದರಗಳು ಏರಿಕೆಯಾಗಿರಲಿಲ್ಲ. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ ಭಾರತದಲ್ಲಿ ಕಡಿಮೆಯಾಗಿಲ್ಲ ಎಂದು ಕಾಂಗ್ರೆಸ್ ಟೀಕಿಸುತ್ತಿದೆ. ಆದರೆ ಆಗ ಯುಪಿಎ ಸರ್ಕಾರ 1.44 ಲಕ್ಷ ಕೋಟಿ ರೂ. ಮೌಲ್ಯದ ತೈಲ ಬಾಂಡ್ ಖರೀದಿಸಿತ್ತು. ಇದಕ್ಕೆ ಕೇವಲ ಬಡ್ಡಿಯಾಗಿ 70 ಸಾವಿರ ಕೋಟಿ ರೂ.ಗಳನ್ನು ಎನ್‍ಡಿಎ ಸರಕಾರ ಪಾವತಿಸಿದೆ. ಒಟ್ಟು 2 ಲಕ್ಷ ಕೋಟಿ ರೂ.ಗಳನ್ನು ಮೋದಿ ಸರಕಾರ ಮರು ಪಾವತಿಸಿದೆ. ಯುಪಿಎ ಸರ್ಕಾರ ಹಗರಣಗಳ ಪರಿಣಾಮ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ಇರಲಿಲ್ಲ. ಹೀಗಾಗಿ ತೈಲ ಬಾಂಡ್‍ಗಳ ಮೂಲಕ ಭಾರೀ ಸಾಲವನ್ನು ತೆಗೆದುಕೊಂಡಿತ್ತು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಈ ಹಿಂದೆ ಪ್ರತಿಕ್ರಿಯಿಸಿದ್ದರು.
Truth of hike in diesel prices! pic.twitter.com/gF7CWHeiti
— BJP (@BJP4India) September 10, 2018
What the economist PM Manmohan Singh said & did on petroleum prices? He said that money does not grow on trees & left unpaid bills of oil bonds worth Rs. 1.3 lakh crore. Modi govt paid off the pending bills with interest because 'we should not burden our children'. #NationFirst pic.twitter.com/Z8zTV1kG1i
— BJP (@BJP4India) September 10, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv