ಭೋಪಾಲ್: ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಕುರಿತಂತೆ ಪ್ರಶ್ನಿಸಿದ ಪತ್ರಕರ್ತರಿಗೆ ಮಧ್ಯಪ್ರದೇಶದ ಬಿಜೆಪಿ ನಾಯಕರೊಬ್ಬರು ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನಕ್ಕೆ ಹೋಗಿ ಎಂದು ಹೇಳಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Advertisement
ಮಾಧ್ಯಮದವರು ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಕುರಿತಂತೆ ಬಿಜೆಪಿ ನಾಯಕ ರಾಮರತನ್ ಪಾಯಲ್‍ರವರಿಗೆ ಅಭಿಪ್ರಾಯ ಕೇಳಿದ್ದಾರೆ. ಈ ವೇಳೆ ತಾಲಿಬಾನ್‍ಗೆ ಹೋಗಿ.. ನಿಮ್ಮ ಅಫ್ಘಾನಿಸ್ತಾನದಲ್ಲಿ ಪೆಟ್ರೋಲ್ ಲೀಟರ್ ಗೆ 50 ರೂಪಾಯಿ ಆಗಿದೆ. ಅಲ್ಲಿ ಹೋಗಿ ಇಂಧನವನ್ನು ಮರು ತುಂಬಿಸಿ ಅಫ್ಘಾನಿಸ್ತಾನದಲ್ಲಿ ಇಂಧನವನ್ನು ಮರು ತುಂಬಲು ಯಾರು ಇಲ್ಲ. ಕನಿಷ್ಠ ಪಕ್ಷ ಭಾರತದಲ್ಲಿ ನಿಮಗೆ ಸುರಕ್ಷತೆ ಇದೆ. ಲಭ್ಯವಿರುವುದರಿಂದ ತಾಲಿಬಾನ್‍ಗೆ ಹೋಗುವಂತೆ ಹೇಳಿದ್ದಾರೆ. ಈಗಾಗಲೇ ಭಾರತ ಎರಡು ಕೊರೊನಾ ಅಲೆಯನ್ನು ಎದುರಿಸಿದ್ದು, ಇದೀಗ ಕೊರೊನಾ ಮೂರನೇ ಅಲೆಯ ಭೀತಿಯಲ್ಲಿದೆ ಅದು ನಿಮಗೆ ಕಾಣಿಸುತ್ತಿಲ್ಲವೇ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ಕಾಬೂಲ್ ವಿಮಾನ ನಿಲ್ದಾಣಕ್ಕೆ 5 ಸಾವಿರ ಅಮೆರಿಕ ಸೈನಿಕರ ನಿಯೋಜನೆ
Advertisement
#BREAKING : BJP #Katni, #MadhyaPradesh district president Ramratan Payal responding to a question on inflation and on expensive petrol in #India, urges to go to #Afghanistan, there petrol is 50 rupees litre, but no one is there to purchase it.
BTW What about cooking oil? pic.twitter.com/jR8lZ4xO1I
— Sushmit Patil Сушмит Патил सुश्मित पाटिल ???????? (@PatilSushmit) August 19, 2021
Advertisement
ಸದ್ಯ ಮಂತ್ರಿಗಳ ಹೇಳಿಕೆ ವಿಚಾರವಾಗಿ, ಕೋವಿಡ್ ಬಗ್ಗೆ ಇಷ್ಟೆಲ್ಲಾ ಕಾಳಜಿ ತೋರುತ್ತಿರುವ ಮಂತ್ರಿಗಳು ಮತ್ತು ಅವರ ಬೆಂಬಲಿಗರು ಮಾಸ್ಕ್ ಮಾತ್ರ ಯಾಕೆ ಧರಿಸುತ್ತಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ. ಇದನ್ನೂ ಓದಿ:ಅಫ್ಘಾನ್‍ನಲ್ಲಿ ತಾಲಿಬಾನಿಗಳ ಅಟ್ಟಹಾಸ- ಭಾರತದಲ್ಲಿ ಡ್ರೈ ಫ್ರೂಟ್ಸ್ ಬೆಲೆ ಗಗನಕ್ಕೆ
Advertisement